Get Updates
Get notified of breaking news, exclusive insights, and must-see stories!

ಪಂಜ್‌ಶೀರ್‌ನಲ್ಲಿ ಅಫ್ಘಾನ್ ಉಪಾಧ್ಯಕ್ಷರ ವಾಲಿಬಾಲ್ ಆಟ

ಕಾಬೂಲ್, ಆಗಸ್ಟ್ 23: ಅಫ್ಘಾನಿಸ್ತಾನದ ರಾಜಧಾನಿ ಸೇರಿದಂತೆ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ತಾಲಿಬಾನ್ ವಶಪಡಿಸಿಕೊಂಡಿದೆ.

ಆದರೆ ಪಂಜ್‌ಶೀರ್‌ನಲ್ಲಿ ಮಾತ್ರ ಅಫ್ಘಾನ್ ಯೋಧರು ತಾಲಿಬಾನಿಗಳನ್ನು ಹೊಡೆದುರುಳಿದಿ ಇನ್ನೂ ತಮ್ಮದೇ ಅಧಿಕಾರ ಉಳಿಸಿಕೊಂಡಿದ್ದಾರೆ.

ಇದೀಗ ಅಫ್ಘಾನಿಸ್ತಾನ ಉಪಾಧ್ಯಕ್ಷ ಅಮರುಲ್ಲಾ ಸಾಲೇಹ್ ಅವರು ಪಂಜ್ ಶೀರ್ ಪ್ರಾಂತ್ಯದಲ್ಲಿ ವಾಲಿಬಾಲ್ ಆಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ತಾಲಿಬಾನ್ ವಿರೋಧಿ ಪಡೆಯ ಯೋಧರು ಪಂಜ್ ಶೀರ್ ಪ್ರಾಂತ್ಯವನ್ನು ವಶಕ್ಕೆ ತೆಗೆದುಕೊಳ್ಳಲು ಬಂದ ನೂರಾರು ತಾಲಿಬಾನಿ ಬಂಡುಕೋರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ಇತ್ತ ತಾಲಿಬಾನಿ ಮುಖಂಡರು ತಮ್ಮ ನೂರಾರು ಪಡೆಗಳನ್ನು ಪಂಜ್ ಶೀರ್ ನತ್ತ ರವಾನಿಸುತ್ತಿದ್ದಾರೆ.

ಯಾವುದಕ್ಕೂ ತಲೆಯೇ ಕೆಡಿಸಿಕೊಳ್ಳದ ಆಫ್ಘಾನಿಸ್ತಾನ ಉಪಾಧ್ಯಕ್ಷ ಅಮರುಲ್ಲಾ ಸಾಲೇಹ್ ಮಾತ್ರ ಅದೇ ಪಂಜ್ ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರೋಧಿ ಬಣದ ಯುವ ಹೋರಾಟಗಾರರೊಂದಿಗೆ ವಾಲಿಬಾಲ್ ಆಟವಾಡುತ್ತಿದ್ದಾರೆ. ಇಂತಹುದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಆದರೆ ಈ ವಿಡಿಯೋ ಇಂದಿನದ್ದೇ ಅಥವಾ ಹಳೆಯದೇ ಎಂದು ಖಚಿತವಾಗಿಲ್ಲ.

Afghanistan VP Amrullah Saleh Playing Volleyball in Panjshir Video Is Viral

ಇನ್ನು ಪಂಜಶೀರ್ ನ ಹೋರಾಟಗಾರರು ತಾಲಿಬಾನ್‌ಗೆ ಕಠಿಣ ಪ್ರತಿಸವಾಲು ಒಡ್ಡುತ್ತಿದ್ದು, ಇಡೀ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳಿಗೆ ದೊಡ್ಡ ಸವಾಲಾಗಿದೆ. ಮೂಲಗಳ ಪ್ರಕಾರ ಪಂಜ್ ಶೀರ್ ಅನ್ನು ಶತಾಯಗತಾಯ ವಶಕ್ಕೆ ಪಡೆಯಲೇಬೇಕು ಎಂದು ನುಗ್ಗಿದ್ದ ಬೃಹತ್ ತಾಲಿಬಾನ್ ಪಡೆಯಲ್ಲಿ ತೀವ್ರ ಸಾವುನೋವುಗಳು ಸಂಭವಿಸಿದೆ ಎಂದು ಹೇಳಲಾಗಿದೆ.

ಪ್ರಮುಖವಾಗಿ ಪಂಜಶೀರ್‌ನಲ್ಲಿ ತಾಲಿಬಾನ್ ವಿರುದ್ಧ ನಿರ್ಮಿಸಲಾಗಿದ್ದ ಬ್ಯಾರಿಕೇಡ್ ಅನ್ನು ಹತ್ತಿಕ್ಕಲು ತಾಲಿಬಾನ್ ತನ್ನ ಸುಮಾರು 3000 ಹೋರಾಟಗಾರರನ್ನು ಕಳುಹಿಸಿದೆ.

ಇದೇ ಕಾರಣಗಳಿಂದಾಗಿ ಪಂಜ್ ಶೀರ್ ಪ್ರಾಂತ್ಯ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದ್ದು, ಈ ಕಡಿದಾದ ಪ್ರಾಂತ್ಯವನ್ನು ವಶಕ್ಕೆ ತೆಗೆದುಕೊಳ್ಳಲು ತಾಲಿಬಾನಿಗಳು ಹರಸಾಹಸ ಪಡುತ್ತಿದ್ದರೆ ಅವರಿಗೆ ತಾಲಿಬಾನ್ ವಿರೋಧಿ ಬಣ ಕೂಡ ತಕ್ಕ ತಿರುಗೇಟು ನೀಡುತ್ತಿದೆ.

ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಕೂಡ ಈ ದಾಳಿಯ ಕುರಿತು ಟ್ವೀಟ್ ಮಾಡಿದ್ದು, ತಾಲಿಬ್‌ಗಳು ಅಂದ್ರಾಬ್ ಕಣಿವೆಯ ಅಂಬುಷ್ ವಲಯದಲ್ಲಿ ದಾಳಿಯಲ್ಲಿ ಸಿಕ್ಕಿಬಿದ್ದ ಒಂದು ದಿನದ ನಂತರ ಪಂಜಶೀರ್ ಪ್ರವೇಶದ್ವಾರದ ಬಳಿ ಬ್ಯಾರಿಕೇಡ್ ಹಾಕಲಾಗಿದೆ. ಸಲಾಂಗ್ ಹೆದ್ದಾರಿಯನ್ನು ಮುಚ್ಚಲಾಗಿದೆ. ಮತ್ತೆ ಸಿಗೋಣ, ಎಂದು ಬರೆದಿದ್ದಾರೆ.
ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದಾಗಿನಿಂದ, ಬಂಡುಕೋರರು ಪಂಜಶೀರ್ ಕಣಿವೆಯಲ್ಲಿ ಸೇರಲು ಆರಂಭಿಸಿದರು. ಪಂಜ್ ಶೀರ್ ನಾಯಕ ಅಹ್ಮದ್ ಶಾ ಮಸೂದ್ ಅವರ 32 ವರ್ಷದ ಮಗ ಅಹ್ಮದ್ ಶಾ ಅವರು ತಮ್ಮ ವ್ಯಾಪ್ತಿಯ ಪ್ರದೇಶಗಳನ್ನು ತಾಲಿಬಾನ್‌ಗೆ ಹಸ್ತಾಂತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ತಾಲಿಬಾನ್ ಪಡೆಗಳು ಆಗಮಿಸುತ್ತಿದ್ದಂತೆಯೇ ತಾಲಿಬಾನ್ ವಿರೋಧಿ ಹೋರಾಟಗಾರರು ರಸ್ತೆಗಳನ್ನು ಬಂದ್ ಮಾಡಿ ಗೆರಿಲ್ಲಾ ಮಾದರಿಯಲ್ಲಿ ಅವರ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ಪರಿಣಾಮ ತಾಲಿಬಾನ್ ನೂರಾರು ಬಂಡುಕೋರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಅಲ್ಲದೆ ತಾಲಿಬಾನ್ ವಿರೋಧಿ ಪಡೆಗಳ ದಾಳಿಗೆ ಪರಾರಿಯಾಗಲೂ ಸಾಧ್ಯವಿಲ್ಲದೇ ತಾಲಿಬಾನಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಪಂಜಶೀರ್ ಕಡೆಗೆ ಹೋಗುವ ಅಂದ್ರಾಬ್ ಕಣಿವೆಯಲ್ಲಿ ತಾಲಿಬಾನ್ ಮತ್ತು ರೆಸಿಸ್ಟೆನ್ಸ್ ಫೋರ್ಸ್ ನಡುವೆ ಗುಂಡಿನ ಚಕಮಕಿ ನಡೆದಿದೆ.

ಈ ಯುದ್ಧದಲ್ಲಿ ತಾಲಿಬಾನಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅಹ್ಮದ್ ಮಸೂದ್ ನೇತೃತ್ವದ ರೆಸಿಸ್ಟೆನ್ಸ್ ಫೋರ್ಸ್, ತಾಲಿಬಾನ್ ಜೊತೆ ಕಠಿಣ ಹೋರಾಟ ನಡೆಸುತ್ತಿದೆ. ಇದಕ್ಕೆ ಇಂಬು ನೀಡುವಂತೆ ಪಂಜ್‌ಶಿರ್ ಹೋರಾಟಗಾರರು ಹೆಚ್ಚಿನ ಸಂಖ್ಯೆಯ ತಾಲಿಬಾನಿಗಳನ್ನು ಹತ್ಯೆಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ದಾಳಿಯಲ್ಲಿ ತಾಲಿಬಾನ್‌ಗಳು ಸಾಕಷ್ಟು ತೊಂದರೆ ಅನುಭವಿಸಿದ್ದು, ದೊಡ್ಡ ಪ್ರಮಾಣದಲ್ಲೇ ಸಾವು-ನೋವು ಸಂಭವಿಸಿವೆ ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+