ಕಾಬೂಲಿನಲ್ಲಿ ಅವಳಿ ಸ್ಫೋಟಕ್ಕೆ ಹಲವಾರು ಮಂದಿ ಬಲಿ

Posted By:
Subscribe to Oneindia Kannada

ಕಾಬೂಲ್, ಜನವರಿ 10: ಅಫ್ಘಾನಿಸ್ತಾನದ ಸಂಸತ್ ಭವನದ ಕಚೇರಿಗಳನ್ನು ಗುರಿಯಾಗಿಟ್ಟುಕೊಂಡು ನಡೆದಿರುವ ಅವಳಿ ಸ್ಪೋಟದಲ್ಲಿ 27ಕ್ಕೂ ಮಂದಿ ಬಲಿಯಾಗಿದ್ದು, 70ಕ್ಕೂ ಜನ ಗಾಯಗೊಂಡಿದ್ದಾರೆ ಎಂದು ಅಘ್ಘನ್ ಅಧಿಕಾರಿಗಳು ದೃಢ ಪಡಿಸಿದ್ದಾರೆ.

ಕಾಬೂಲ್​ನ ದಾರುಲಾಮಾನ್ ರಸ್ತೆಯ ಪಿಡಿ6ರಲ್ಲಿ ಅಮೆರಿಕ ವಿಶ್ವವಿದ್ಯಾಲಯದ ಸಮೀಪ ಮೊದಲ ಸ್ಫೋಟ ಸಂಭವಿಸಿತು. ಇದಾದ ಕೆಲ ಹೊತ್ತಿನಲ್ಲಿ ಅದೇ ರಸ್ತೆಯಲ್ಲಿನ ನೂರ್ ಆಸ್ಪತ್ರೆ ಸಮೀಪ ಇನ್ನೊಂದು ಸ್ಫೋಟ ಸಂಭವಿಸಿದೆ.

Afghanistan: 27 killed in twin blasts in Kabul

ಉಭಯ ಸ್ಪೋಟಗಳಲ್ಲೂ ಭಾರಿ ಸಾವು ನೋವು ಸಂಭವಿಸಿರುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ. ಸಂಸತ್ ಭವನದ ಕಚೇರಿಗಳು ಮತ್ತು ಸಿಬ್ಬಂದಿ ಈ ಸ್ಪೋಟಗಳ ಗುರಿಗಳಾಗಿದ್ದವು ಎಂದು ವರದಿಗಳು ಹೇಳಿವೆ.

ಘಟನೆಯ ಹೊಣೆಯನ್ನು ಇನ್ನೂ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, ವರದಿಗಳ ಪ್ರಕಾರ ಅತ್ಮಾಹುತಿ ದಾಳಿ ನಡೆದಿದ್ದನ್ನು ನೋಡಿದರೆ ಇದು ತಾಲಿಬಾನಿಗಳ ಕೃತ್ಯ ಎಂದು ತಿಳಿದು ಬರುತ್ತದೆ. ಕಳೆದ ವಾರ ಲಷ್ಕರ್ ಘರ್ ಬಳಿಯ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಬಳಿ ಸ್ಫೋಟ ಸಂಭವಿಸಿ, ಏಳು ಜನ ಮೃತಪಟ್ಟಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
At least 27 people were killed and 70 others wounded in twin blasts near parliament offices in Kabul, Afghanistan, on Tuesday, said reports.
Please Wait while comments are loading...