ಪಾಕಿಸ್ತಾನ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿದ ಅಫ್ಘಾನಿಸ್ತಾನ
Recommended Video

ಕಾಬೂಲ್, ಫೆಬ್ರವರಿ 27: ಭಾರತದ ಜತೆ ಅಷ್ಟೇ ಅಲ್ಲ ಪಕ್ಕದ ಅಫ್ಘಾನಿಸ್ತಾನದ ಜತೆ ಕೂಡಾ ಪಾಕಿಸ್ತಾನ ದ್ವೇಷ ಕಟ್ಟಿಕೊಳ್ಳುತ್ತಿದೆ. ಪಾಕಿಸ್ತಾನ ಗಡಿ ಕಾನೂನು ಉಲ್ಲಂಘಿಸಿದೆ ಎಂದು ವಿಶ್ವಸಂಸ್ಥೆಗೆ ದೂರು ನೀಡಲಾಗಿದೆ.
ಪಾಕಿಸ್ತಾನದ ಸೇನೆಯು ನಮ್ಮ ಭೂಪ್ರದೇಶದಲ್ಲಿ ಅತಿಕ್ರಮಣ ನಡೆಸಿದೆ ಎಂದು ಅಫ್ಘಾನಿಸ್ತಾನದ ಪ್ರಧಾನಿ ಅಶ್ರಫ್ ಘನಿ ಆರೋಪಿಸಿದ್ದಾರೆ. ಪಾಕ್ ಸೇನೆಯು ಅಫ್ಘನ್ ಭೂಭಾಗಗಳ ಮೇಲೆ ಶೆಲ್ ದಾಳಿ ನಡೆಸುತ್ತಿದ್ದು, ಪಾಕಿಸ್ತಾನದ ಸೇನಾ ವಿಮಾನಗಳು ಅಫ್ಘನ್ ವಾಯುಪ್ರದೇಶವನ್ನು ಉಲ್ಲಂಘಿಸುತ್ತಿವೆ ಹಾಗೂ ಸೇನಾ ಠಾಣೆಗಳು ಮತ್ತು ಬೇಲಿಗಳನ್ನು ನಿರ್ಮಿಸುತ್ತಿದೆ ಎಂದು ಅಫ್ಘಾನಿಸ್ತಾನವು ದೂರಿನಲ್ಲಿ ಹೇಳಿದೆ.
ಅಫ್ಘಾನ್ ನಿಯೋಗದ ಉಪಮುಖ್ಯಸ್ಥ ನಝೀಫುಲ್ಲಾ ಸಲರ್‌ಝಾಯ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಫೆಬ್ರವರಿ 22ರಂದು ಈ ಕುರಿತಂತೆ ಪತ್ರ ಬರೆದಿದ್ದಾರೆ.

ಪಾಕಿಸ್ತಾನದ ಸೇನೆಯು ಅಫ್ಘಾನ್ ಭೂಪ್ರದೇಶದಲ್ಲಿ 2012ರಿಂದಲೇ ಅತಿಕ್ರಮಣ ನಡೆಸುತ್ತಿದೆ. 'ಈ ಕಾನೂನುಬಾಹಿರ ಮತ್ತು ಅಸಮರ್ಥನೀಯ ಕೃತ್ಯಗಳ ವ್ಯಾಪ್ತಿ ಮತ್ತು ಸಂಖ್ಯೆ 2017ರಿಂದ ನಾಟಕೀಯವಾಗಿ ಹೆಚ್ಚಿದೆ'' ಎಂದಿದೆ.
ಕುನಾರ್ ಮತ್ತು ನಂಗರ್‌ಹಾರ್ ಪ್ರಾಂತ್ಯಗಳ ಮೇಲೆ ನಡೆದ ಶೆಲ್ ದಾಳಿ ಸೇರಿದಂತೆ, ಪಾಕಿಸ್ತಾನದ ಈ ಅತಿಕ್ರಮಣಗಳಿಂದಾಗಿ ಹಲವಾರು ಅಮಾಯಕ ಅಫ್ಘಾನ್ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಅಂಗವಿಕಲರಾಗಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು ಧ್ವಂಸಗೊಂಡಿವೆ. 82 ಮಂದಿ ಅಮಾಯಕರು ಬಲಿಯಾಗಿದ್ದರೆ, 187 ಮಂದಿ ಅಂಗವಿಕಲರಾಗಿದ್ದಾರೆ. ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.
ಒಟ್ಟು 161 ಬಾರಿ ಉಲ್ಲಂಘನೆ ದಾಖಲಾಗಿದ್ದು, 6000 ಮಾರ್ಟರ್ ಹಾಗೂ ಆರ್ಟಲರಿ ಶೆಲ್ ಗಳು ಅಫ್ಘನ್ ಗಡಿಯಲ್ಲಿ ಕಂಡು ಬಂದಿದೆ.












Click it and Unblock the Notifications