ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಂಡರೆ ಅಮೆರಿಕಾಗೆ ಲಾಭವೇ?

|
Google Oneindia Kannada News

ಕಾಬೂಲ್, ಸಪ್ಟೆಂಬರ್ 1: ಅಫ್ಘಾನಿಸ್ತಾನದ ನೆಲದಿಂದ ಅಮೆರಿಕಾ ಸೇನೆಯನ್ನು ವಾಪಸ್ ಕರೆಸಿಕೊಂಡ ತಮ್ಮ ನಿರ್ಧಾರವನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ. ರಾಷ್ಚ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, 20 ವರ್ಷಗಳ ಕಾಲ ನಡೆಸಿದ ಯುದ್ಧ ಕೊನೆಗಾಣಿಸಿರುವುದು ಸೂಕ್ತ ಸಮಯದಲ್ಲಿ ತೆಗೆದುಕೊಂಡ ಸರಿಯಾದ ನಿರ್ಧಾರವಾಗಿದೆ. ಅಮೆರಿಕನ್ನರ ಹಿತಾಸಕ್ತಿಗೆ 2001ರ ಸೇಡಿಗಿಂತ 2021ರ ಭವಿಷ್ಯ ಮುಖ್ಯ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ.

ಕಳೆದ 2001ರ ಸಪ್ಟೆಂಬರ್ 11ರಂದು ಅಮೆರಿಕಾದ ಮೇಲೆ ನಡೆಸಿದ ಉಗ್ರರ ದಾಳಿಗೆ 20 ವರ್ಷ ಪೂರೈಸುವುದಕ್ಕೆ ಇನ್ನು 11 ದಿನ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಜೋ ಬೈಡನ್, ಯುಎಸ್ ಪ್ರಜೆಗಳ ಹಿತದೃಷ್ಟಿಯಿಂದ ನೋಡುವುದಾದರೆ ಯುದ್ಧವನ್ನು ಮುಂದುವರಿಸುವುದಕ್ಕೆ ಇನ್ನು ಯಾವುದೇ ಕಾರಣಗಳು ಉಳಿದುಕೊಂಡಿಲ್ಲ ಎಂದು ಹೇಳಿದರು,

"ನಾನು ನಿಮಗೆ ಭಾಷೆ ನೀಡುತ್ತೇನೆ. ನನ್ನ ಎಲ್ಲ ಆತ್ಮೀಯರೇ ಈಗ ನಾನು ತೆಗೆದುಕೊಂಡಿರುವುದು ಸರಿಯಾದ ನಿರ್ಧಾರ, ಚಾಣಾಕ್ಷ ಹಾಗೂ ಸರ್ವೋತ್ತಮದ ನಿರ್ಧಾರ ಎಂದು ಭಾವಿಸುತ್ತೇನೆ. ಇದೀಗ ಅಫ್ಘಾನಿಸ್ತಾನದಲ್ಲಿ ಯುದ್ಧ ಅಂತ್ಯವಾಗಿದೆ. ಈ ಯುದ್ಧವನ್ನು ಹೇಗೆ ಕೊನೆಗಾಣಿಸಬೇಕು ಎಂಬ ಸಮಸ್ಯೆಯನ್ನು ಎದುರಿಸಿದವರಲ್ಲಿ ನಾನು ನಾಲ್ಕನೇ ಅಧ್ಯಕ್ಷನಾಗಿದ್ದೇನೆ. ಈ ಯುದ್ಧವನ್ನು ಕೊನೆಗಾಣಿಸುವ ಅಮೆರಿಕನ್ನರ ಬದ್ಧತೆಯನ್ನು ಗೌರವಿಸಿ ನಾನು ಈ ಕಾರ್ಯವನ್ನು ಮಾಡಿದ್ದೇನೆ," ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

 ತಾಲಿಬಾನ್ ನಾಯಕರ ಜತೆ ಭಾರತ ರಾಯಭಾರಿ ಮಾತುಕತೆ ತಾಲಿಬಾನ್ ನಾಯಕರ ಜತೆ ಭಾರತ ರಾಯಭಾರಿ ಮಾತುಕತೆ

ಎರಡು ದಶಕಗಳ ಸುದೀರ್ಘ ಯುದ್ಧ

ಎರಡು ದಶಕಗಳ ಸುದೀರ್ಘ ಯುದ್ಧ

ಸುದೀರ್ಘ ಅವಧಿವರೆಗೂ ಯುದ್ಧದಲ್ಲೇ ಕಾಲ ಕಳೆಯುವಂತಾಗಿತ್ತು. ಕಳೆದ 20 ವರ್ಷಗಳಲ್ಲಿ ಅಮೆರಿಕನ್ನರು ಶಾಂತಿಯನ್ನು ಕಂಡುಕೊಳ್ಳುತ್ತದೆ ಎಂದು ಯಾರೊಬ್ಬರೂ ಭಾವಿಸಿರಲಿಲ್ಲ. ಆದ್ದರಿಂದ ನಾವು ಅದನ್ನು ಮಾಡಬಹುದೇ ಎಂದು ಕೇಳಿದಾಗ ಅಫ್ಘಾನಿಸ್ತಾನದಲ್ಲಿ ಸೇನಾ ಪಡೆಯನ್ನು ಕಡಿಮೆಗೊಳಿಸಬೇಕಿತ್ತು. ಏಕೆಂದರೆ ನಮ್ಮ ಸೇನೆಯ ಸಿಬ್ಬಂದಿಯು ಕಡಿಮೆ ಅಪಾಯ, ಕಡಿಮೆ ವೆಚ್ಚದಲ್ಲಿ ಕಾರ್ಯ ನಿರ್ವಹಿಸುವ ಜನರು ಎಷ್ಟಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದರು.

ನಾನು ಯುಎಸ್ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ ಸಂದರ್ಭದಲ್ಲಿ 20 ವರ್ಷಗಳ ಯುದ್ಧವನ್ನು ಅಂತ್ಯಗೊಳಿಸುತ್ತೇನೆ ಎಂಬ ಮಾತಿಗೆ ಬದ್ಧನಾಗಿ ನಡೆದುಕೊಂಡಿದ್ದೇನೆ. ಇಂದು ನನ್ನ ಮಾತಿಗೆ ನಾನು ಗೌರವ ನೀಡುತ್ತೇನೆ. ಇದು ಅಮೆರಿಕನ್ನರಿಗೆ ಪ್ರಾಮಾಣಿಕವಾಗಿ ಇರುವ ಸಮಯವಾಗಿದೆ. ಅಫ್ಘಾನಿಸ್ತಾನದಲ್ಲಿ ಮುಕ್ತ ಕಾರ್ಯಾಚರಣೆಯಲ್ಲಿ ನಾವು ಇನ್ನು ಮುಂದೆ ಸ್ಪಷ್ಟ ಉದ್ದೇಶ ಹೊಂದಿಲ್ಲ ಎಂದು ಬೈಡನ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಯುದ್ಧ ಮುಂದುವರಿಸಲು ಬಯಸಲ್ಲ

ಅಫ್ಘಾನಿಸ್ತಾನದಲ್ಲಿ ಯುದ್ಧ ಮುಂದುವರಿಸಲು ಬಯಸಲ್ಲ

ಅಫ್ಘಾನಿಸ್ತಾನದಲ್ಲಿ ಯುದ್ಧಕ್ಕೆ 20 ವರ್ಷಗಳೇ ತುಂಬಿವೆ. ಅಮೆರಿಕಾದ ಮುಂದಿನ ಪೀಳಿಗೆಯವರು ತಮ್ಮ ಮಗ ಮತ್ತು ಮಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲು ನಾನು ನಿರಾಕರಿಸುತ್ತೇನೆ. ಆದ್ದರಿಂದಲೇ ಈ ಸುದೀರ್ಘ ಅವಧಿಯ ಯುದ್ಧವನ್ನು ಮುಕ್ತಾಯಗೊಳಿಸಿದ್ದೇನೆ. ಕಳೆದ 20 ವರ್ಷಗಳ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕಾ 2 ಟ್ರಿಲಿಯನ್ ಯುೆಸ್ ಡಾಲರ್ ಹಣವನ್ನು ಖರ್ಚು ಮಾಡಿದೆ. ಬ್ರೌನ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರ ವೆಚ್ಚವೇ ಪ್ರತಿನಿತ್ಯ 300 ಯುಎಸ್ ಮಿಲಿಯನ್ ಡಾಲರ್ ಆಗುತ್ತಿತ್ತು ಎಂದಿದ್ದಾರೆ. ಒಂದು ವೇಳೆ 1 ಟ್ರಿಲಿಯನ್ ಯುಎಸ್ ಡಾಲರ್ ಎಂದುಕೊಂಡರೆ 2 ದಶಕಗಳಲ್ಲಿ ಪ್ರತಿನಿತ್ಯ 150 ಮಿಲಿಯನ್ ಡಾಲರ್ ವೆಚ್ಚವಾದಂತೆ ಆಗುತ್ತದೆ. ಇದರಿಂದ ನಾವು ಬಹಳಷ್ಟು ಅವಕಾಶಗಳನ್ನು ಕಳೆದುಕೊಂಡಿರುವುದರ ಪರಿಣಾಮ ಈ ಯುದ್ಧವನ್ನು ಮುಂದುವರಿಸುವುದಕ್ಕೆ ನಾನು ನಿರಾಕರಿಸಿದ್ದೇನೆ. ನನ್ನ ನಿರ್ಧಾರದ ಹಿಂದೆ ಅಮೆರಿಕನ್ನರ ಹಿತಾಸಕ್ತಿ ಅಡಗಿದೆ ಎಂದಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿ ಉದ್ದೇಶದಿಂದ ಶಿಸ್ತು ಕ್ರಮ

ರಾಷ್ಟ್ರೀಯ ಹಿತಾಸಕ್ತಿ ಉದ್ದೇಶದಿಂದ ಶಿಸ್ತು ಕ್ರಮ

ಅಮೆರಿಕಾದ ಭದ್ರತಾ ಮುಖ್ಯಸ್ಥರಾಗಿ ದೇಶದ ಆಂತರಿಕ ಭದ್ರತೆ ಮಾರ್ಗ ಕಠಿಣ ಹಾಗೂ ಕಟ್ಟುನಿಟ್ಟಾಗಿ ಇರಬೇಕು. ನಮ್ಮ ಸುರಕ್ಷತೆ ಕಾಪಾಡುವ ಅತ್ಯುತ್ತಮ ಮಾರ್ಗವನ್ನು ನಾವು ದೃಡವಾಗಿ ನಂಬುತ್ತೇವೆ. ನಮ್ಮ ಭದ್ರತೆಯು ಕಠಿಣವಾದ, ಕ್ಷಮಿಸದ, ಉದ್ದೇಶಿತ, ನಿಖರವಾದ ಕಾರ್ಯತಂತ್ರದಲ್ಲಿದೆ. ಅದು ಎರಡು ದಶಕಗಳ ಹಿಂದಿದ್ದ ಸ್ಥಳದಲ್ಲಿಲ್ಲ ಬದಲಿಗೆ ಭಯೋತ್ಪಾದನೆ ನಂತರದ ಸ್ಥಾನಕ್ಕೆ ಹೋಗಿದೆ. ಅದೇ ಅಮೆರಿಕನ್ನರ ಹಿತಾಸಕ್ತಿಯನ್ನು ಗುರಿಯನ್ನು ಹೊಂದಿದೆ ಎಂದು ಬೈಡನ್ ಹೇಳಿದ್ದಾರೆ.

ಹೊಸ ಸವಾಲುಗಳಿಗೆ ಸಿದ್ಧವಾಗಬೇಕಾದ ಕಾಲ

ಹೊಸ ಸವಾಲುಗಳಿಗೆ ಸಿದ್ಧವಾಗಬೇಕಾದ ಕಾಲ

ಇಡೀ ಜಗತ್ತು ಬದಲಾವಣೆಯತ್ತ ಹೊರಳುತ್ತಿರುವ ಕಾಲದಲ್ಲಿ ಯುಎಸ್ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ನಾವು ಚೀನಾದೊಂದಿಗೆ ಗಂಭೀರ ಸ್ಪರ್ಧೆಯನ್ನು ಹೊಂದಿದ್ದೇವೆ. ಹಲವು ವಿಷಯಗಳಲ್ಲಿ ರಷ್ಯಾದೊಂದಿಗೆ ನಾವು ಪೈಪೋಟಿ ನಡೆಸಬೇಕಿದೆ. ನಮ್ಮ ಎದುರಿಗೆ ಸೈಬರ್ ದಾಳಿಯಂತಹ ಸವಾಲುಗಳಿವೆ. 21ನೇ ಶತಮಾನದ ಸ್ಪರ್ಧಾಯುಗದಲ್ಲಿ ಈ ಹೊಸ ಸವಾಲುಗಳನ್ನು ಎದುರಿಸಲು ನಾವು ಅಮೆರಿಕವನ್ನು ಸ್ಪರ್ಧಾತ್ಮಕವಾಗಿ ಸಿದ್ಧಪಡಿಸಬೇಕಿದೆ. ಒಂದು ಕಡೆ ಭಯೋತ್ಪಾದನೆ ವಿರುದ್ಧದ ಹೋರಾಟ ಹಾಗೂ ಮತ್ತೊಂದು ದಿಕ್ಕಿನಲ್ಲಿ ಭವಿಷ್ಯದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ನಾವು ಸಜ್ಜುಗೊಳ್ಳಬೇಕಾಗಿದೆ ಎಂದು ಬೈಡನ್ ತಿಳಿಸಿದ್ದಾರೆ.

ನಮ್ಮ ತಪ್ಪುಗಳಿಂದ ನಾವು ಪಾಠ ಕಲಿಯಬೇಕಿದೆ

ನಮ್ಮ ತಪ್ಪುಗಳಿಂದ ನಾವು ಪಾಠ ಕಲಿಯಬೇಕಿದೆ

ರಷ್ಯಾ ಮತ್ತು ಚೀನಾ ಹೊಂದಿರುವುದು ಏನೂ ಅಲ್ಲ. ಇನ್ನೊಂದು ದಶಕ ಅಫ್ಘಾನಿಸ್ತಾನದಲ್ಲಿ ಮುಳುಗುವುದಕ್ಕಿಂತ ನಾವು ಈ ಸ್ಪರ್ಧೆಯಲ್ಲಿ ಹೆಚ್ಚಿನದನ್ನು ಪಡೆದುಕೊಳ್ಳಲು ಬಯಸುತ್ತೇವೆ. ಆದ್ದರಿಂದಲೇ ಕಳೆದ ಎರಡು ದಶಕಗಳಲ್ಲಿ ನಮ್ಮ ವಿದೇಶಾಂಗ ನೀತಿಯ ಪುಟವನ್ನು ತಿರುಗಿಸಿ ನೋಡಿದಾಗ ನಮ್ಮ ದೇಶಕ್ಕೆ ಅದು ಮಾರ್ಗದರ್ಶನ ಮಾಡಿತು. ಈಗ ನಮ್ಮ ತಪ್ಪುಗಳಿಂದ ನಾವು ಪಾಠ ಕಲಿತುಕೊಳ್ಳಬೇಕಾಗಿದೆ. ಅಫ್ಘಾನಿಸ್ತಾನದಿಂದ ಆಚೆಗೂ ಭಯೋತ್ಪಾದಕರು ಜಗತ್ತಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ನಾವು ಸೋಮಾಲಿಯಾದ ಅಲ್-ಶಬಾದ್, ಸಿರಿಯಾ ಮತ್ತು ಅರೆಬೀಯನ್ ಪೆನಿನ್ಸುಲಾದ ಅಲ್-ಖೈದಾ ಸಂಘಟನೆಗಳಿಂದ ಬೆದರಿಕೆಯನ್ನು ಎದುರಿಸುತ್ತಿದ್ದೇವೆ. ಐಸಿಸ್ ಸಂಘಟನೆಯು ಸಿರಿಯಾ ಮತ್ತು ಇರಾಕ್ ರಾಷ್ಟ್ರಗಳಲ್ಲಿ ಪ್ರಬಲವಾಗಿದ್ದು, ಆಫ್ರಿಕಾ ಮತ್ತು ಏಷ್ಯಾದಲ್ಲೂ ಅಂಗಸಂಸ್ಥೆಗಳನ್ನು ಹೊಂದಿವೆ ಎಂದು ಹೇಳಿದರು.

ನಮ್ಮ ಗುರಿ 2001ರ ಸೇಡು ಅಲ್ಲ, 2021ರ ಭವಿಷ್ಯ

ನಮ್ಮ ಗುರಿ 2001ರ ಸೇಡು ಅಲ್ಲ, 2021ರ ಭವಿಷ್ಯ

"ಅಮೆರಿಕನ್ನರ ರಕ್ಷಣೆ ಮತ್ತು ಸುರಕ್ಷತೆಯು ಅಧ್ಯಕ್ಷರ ಮೂಲಭೂತ ಬಾಧ್ಯತೆ ಆಗಿರಬೇಕು ಎಂದು ನಾನು ನಂಬುತ್ತೇನೆ. ನಾವು 2001ರ ಸೇಡಿನ ಬಗ್ಗೆ ಚಿಂತಿಸಬೇಕಿಲ್ಲ, ಬದಲಿಗೆ 2021 ಮತ್ತು ನಾಳೆಯ ಬಗ್ಗೆ ಆಲೋಚಿಸಬೇಕಿದೆ. ಅಫ್ಘಾನಿಸ್ತಾನದ ವಿಷಯದಲ್ಲಿ ನಾನು ತೆಗೆದುಕೊಂಡ ನಿರ್ಧಾರದ ಹಿಂದೆ ಈ ನೀತಿ ಅಡಗಿದೆ. ಸಾವಿರಾರು ಅಮೆರಿಕನ್ ಯೋಧರ ನಿಯೋಜನೆಯನ್ನು ಮುಂದುವರಿಸುವ ಮೂಲಕ ಮತ್ತು ಅಫ್ಘಾನಿಸ್ತಾನದಲ್ಲಿ ವರ್ಷಕ್ಕೆ ಶತಕೋಟಿ ಡಾಲರ್ ಖರ್ಚು ಮಾಡುವ ಮೂಲಕ ಅಮೆರಿಕದ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲಾಗುತ್ತದೆ ಎಂದು ನಾನು ನಂಬುವುದಿಲ್ಲ. ಆದರೆ ಭಯೋತ್ಪಾದಕರ ದುಷ್ಟ ಹಾಗೂ ವಿನಾಶಕಾರಿ ಪ್ರವೃತ್ತಿ ಮುಂದುವರಿಯುತ್ತದೆ ಎಂದು ನನಗೆ ಗೊತ್ತಿದೆ. ಆದರೆ ಅದನ್ನು ಬದಲಾಯಿಸಲಾಗಿದ್ದು, ಇತರೆ ದೇಶಗಳಿಗೆ ವಿಸ್ತರಿಸಲಾಗಿದೆ. ನಮ್ಮ ಕಾರ್ಯತಂತ್ರವು ಬದಲಾಗಿದೆ. ಅದಾಗ್ಯೂ, ಅಫ್ಘಾನಿಸ್ತಾನ ಅಥವಾ ಬೇರೆ ಯಾವುದೇ ದೇಶದಲ್ಲಿ ಭಯೋತ್ಪಾದಕರ ವಿರುದ್ಧದ ನಮ್ಮ ಹೋರಾಟವನ್ನು ಯುನೈಟೆಡ್ ಸ್ಟೇಟ್ಸ್ ನಿರ್ವಹಿಸುತ್ತದೆ," ಎಂದು ಜೋ ಬೈಡನ್ ಹೇಳಿದ್ದಾರೆ.

ಅಫ್ಘಾನಿಸ್ತಾನದಿಂದ ಯುಎಸ್ ಸೇವೆ ವಾಪಸ್

ಅಫ್ಘಾನಿಸ್ತಾನದಿಂದ ಯುಎಸ್ ಸೇವೆ ವಾಪಸ್

ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಸುದೀರ್ಘ ಯುದ್ಧ ಕೊನೆಗಾಣಿಸುವುದಕ್ಕೆ ಸ್ವತಃ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ದಿನಾಂಕ ನಿಗದಿಗೊಳಿಸಿದ್ದರು. ಅಫ್ಘಾನ್ ನಲ್ಲಿರುವ ತಮ್ಮ ಅಮೆರಿಕಾದ ಪ್ರಜೆಗಳು ಮತ್ತು ಸೇನೆಯನ್ನು ಆಗಸ್ಟ್ 31ರೊಳಗೆ ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿದ್ದರು. ಮಂಗಳವಾರ ಆರಂಭಕ್ಕೂ ಮೊದಲು ಅಂದರೆ ಸೋಮವಾರ 1929 GMT ವೇಳೆಗೆ ಕಾಬೂಲ್‌ನಿಂದ ಕೊನೆಯ C-17 ವಿಮಾನ ಅಮೆರಿಕಾಗೆ ಹಾರಿತು. ಈ ರಾತ್ರಿ ಸೇನಾ ಹಿಂತೆಗೆದುಕೊಳ್ಳುವಿಕೆ ಮತ್ತು ಸ್ಥಳಾಂತರಿಸುವಿಕೆಯು ಮಿಲಿಟರಿ ಘಟಕದ ಅಂತ್ಯವನ್ನು ಸೂಚಿಸುತ್ತದೆ. ಇದರ ಜೊತೆಗೆ 2001ರ ಸೆಪ್ಟೆಂಬರ್ 11ರ ನಂತರ ಅಫ್ಘಾನಿಸ್ತಾನದಲ್ಲಿ ಪ್ರಾರಂಭವಾದ ಸುಮಾರು 20 ವರ್ಷಗಳ ಕಾರ್ಯಾಚರಣೆಯ ಅಂತ್ಯವನ್ನೂ ಸಹ ಸೂಚಿಸುತ್ತದೆ.

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿರುವ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುಎಸ್ ಸೇನೆ ನಿರಂತರ ಕಾರ್ಯಾಚರಣೆ ನಡೆಸಿತು. 1,23,000 ಅಮೆರಿಕಾ ಮತ್ತು ಅಫ್ಘಾನ್ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿತು. ಆದರೆ ಸ್ಥಳಾಂತರವನ್ನು ಬಯಸಿದ ಎಲ್ಲರಿಗೂ ಈ ಅವಕಾಶ ಸಿಗಲಿಲ್ಲ, ಕೆಲವರ ಸ್ಥಳಾಂತರಕ್ಕೆ ರಾಜತಾಂತ್ರಿಕ ಸಮಸ್ಯೆ ಎದುರಾಯಿತು ಎಂದು ಯುಎಸ್ ಜನರಲ್ ಕೆನ್ನತ್ ಮೆಕೆಂಜಿ ಹೇಳಿದ್ದಾರೆ.

ಅಮೆರಿಕಾ ಸೇನೆಯು ಅಫ್ಘಾನಿಸ್ತಾನಕ್ಕೆ ಹೋಗಿದ್ದೇಕೆ?

ಅಮೆರಿಕಾ ಸೇನೆಯು ಅಫ್ಘಾನಿಸ್ತಾನಕ್ಕೆ ಹೋಗಿದ್ದೇಕೆ?

ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನ ತಾಲಿಬಾನ್ ಕೈವಶವಾಗಿದೆ. ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡ ತಾಲಿಬಾನಿಗಳು ತಮ್ಮದೇ ಸರ್ಕಾರದ ಅಸ್ತಿತ್ವಕ್ಕೆ ಸಿದ್ಧರಾಗುತ್ತಿದ್ದಾರೆ. ಆದರೆ ಇದಕ್ಕೂ ಮೊದಲು ಅಫ್ಘಾನಿಸ್ತಾನದಲ್ಲಿ ಯುಎಸ್ ಸೇನೆಯು 20 ವರ್ಷ ಪ್ರಜಾಪ್ರಭುತ್ವ ಸರ್ಕಾರಕ್ಕೆ ಬೆಂಗಾವಲಾಗಿ ನಿಂತಿತ್ತು.

1996 ರಿಂದ 2001ರವರೆಗೂ ಅಫ್ಘಾನಿಸ್ತಾನ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. ಆದರೆ 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆ ಕಾರ್ಯಾಚರಣೆಗೆ ಇಳಿಯಿತು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆ ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು.

English summary
Afghanistan exit marks the end of US nation-building says President Joe Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X