ತಾಲಿಬಾನ್‌ ಸಂಘರ್ಷದ ನಡುವೆ ಅಫ್ಘಾನ್‌ನಲ್ಲಿ ಆಹಾರಕ್ಕೆ ಹಾಹಾಕಾರ: ಆಹಾರ ಸಂಸ್ಥೆ ಎಚ್ಚರಿಕೆ

ಕಾಬೂಲ್‌, ಆಗಸ್ಟ್‌ 21: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ದಾಳಿಗೆ ಆತಂಕಕ್ಕೆ ಒಳಗಾಗಿರುವ ಜನರು ಜೀವ ಭಯದಿಂದ ಇರುವ ನಡುವೆ ಅಫ್ಘಾನಿಸ್ತಾನದಲ್ಲಿ ಹಸಿವಿನ ಹಾಹಾಕಾರವು ಮುಗಿಲು ಮುಟ್ಟುವ ಎಲ್ಲಾ ಸ್ಥಿತಿಗಳು ಈಗಾಗಲೇ ಉಂಟಾಗಿದೆ. ಯಾವುದೇ ಸಂಘರ್ಷ ನಡೆಯುತ್ತಿದ್ದರೂ ಹಸಿವು ಇಲ್ಲದಾದೀತೆ?. ಅಫ್ಘಾನಿಸ್ತಾನದಲ್ಲಿರುವ ಯುನ್‌ ಆಹಾರ ಸಂಸ್ಥೆ ಅಫ್ಘಾನಿಸ್ತಾನದಲ್ಲಿ ಆಹಾರ ಸಮಸ್ಯೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸುಮಾರು 14 ಮಿಲಿಯನ್‌ ಜನರು ಹಸಿವಿನಿಂದ ನರಳುತ್ತಿದ್ದಾರೆ ಎಂದು ಅಫ್ಘಾನಿಸ್ತಾನದ ಸ್ಥಿತಿಯ ಕುರಿತು ಯುಎನ್‌ ಆಹಾರ ಸಂಸ್ಥೆ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವ ಆಹಾರ ಕಾರ್ಯಕ್ರಮದ ನಿರ್ದೇಶಕರು ಮೇರಿ ಎಲೆನ್‌, ಕೊರೊನಾ ವೈರಸ್‌ ಸಾಂಕ್ರಾಮಿಕವು ಈಗಾಗಲೇ ಅಫ್ಘಾನಿಸ್ತಾನದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗೆ ಪೆಟ್ಟು ನೀಡಿದೆ. ಕೋವಿಡ್‌ನ ಅಫ್ಘಾನ್‌ ಸ್ಥಿತಿಯನ್ನು ದುರಂತಕ್ಕೆ ದೂಡಿದೆ. ಈ ನಡುವೆ ಈ ತಾಲಿಬಾನ್‌ ಸಂಘರ್ಷವೂ ಭಾರೀ ಆಹಾರದ ಕೊರತೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

"ಈಗಾಗಲೇ ಅಫ್ಘಾನಿಸ್ತಾನದಲ್ಲಿ ಶೇ. 40 ರಷ್ಟು ಆಹಾರ ಧಾನ್ಯಗಳು ನಾಶವಾಗಿದೆ. ಬರಗಾಲದಿಂದಾಗಿ ಜಾನುವಾರುಗಳು ಕೂಡಾ ಮೃತ ಪಟ್ಟಿದೆ. ಸಾವಿರಾರು ಜನರು ತಾಲಿಬಾನ್‌ ದಾಳಿಯಿಂದಾಗಿ ಆತಂಕಕ್ಕೆ ಒಳಗಾದ ಹಿನ್ನೆಲೆ ಸ್ಥಳಾಂತರ ಮಾಡಲಾಗಿದೆ. ಈ ನಡುವೆ ಚಳಿಗಾಲವು ಶೀಘ್ರವಾಗಿ ಬರುತ್ತಿದೆ, ಅಫ್ಘಾನಿಸ್ತಾನದಲ್ಲಿ ಆಹಾರಕ್ಕಾಗಿ ಓಟ ನಡೆಸುವಂತಾಗಿದೆ," ಎಂದು ಹಾಹಾಕಾರದ ಬಗ್ಗೆ ವಿವರಿಸಿದ್ದಾರೆ.

 ಅಫ್ಘಾನ್‌ನಲ್ಲಿ ಹಲವು ಸಮಸ್ಯೆ

ಅಫ್ಘಾನ್‌ನಲ್ಲಿ ಹಲವು ಸಮಸ್ಯೆ

"ಯುಎನ್‌ ಆಹಾರ ಸಂಸ್ಥೆಯು ಮೇ ತಿಂಗಳಿನಲ್ಲಿ ಸುಮಾರು 4 ಮಿಲಿಯನ್‌ ಜನರಿಗೆ ಆಹಾರ ಪೂರೈಕೆ ಮಾಡಿದೆ. ಸುಮಾರು 9 ಮಿಲಿಯನ್‌ ಜನರಿಗೆ ಆಹಾರ ನೀಡಬೇಕಾಗಿದೆ. ಇನ್ನು ಕೆಲವು ತಿಂಗಳುಗಳ ಕಾಲ ಆಹಾರವನ್ನು ಸಂಗ್ರಹ ಮಾಡಬೇಕಾದ ಅಗತ್ಯವಿದೆ. ಆದರೆ ಅಫ್ಘಾನಿಸ್ತಾನದಲ್ಲಿ ಹಲವಾರು ಸವಾಲುಗಳು ಎದುರಾಗಿದೆ," ಎಂದು ಮಾಹಿತಿ ನೀಡಿದ್ದಾರೆ.

Recommended Video

    ವಿಶ್ವ ಯುದ್ದ ಮತ್ತೊಮ್ಮೆ ನಡೆದರೆ ಯಾವ ದೇಶ ಜಯಶಾಲಿಯಾಗಲಿದೆ | Oneindia Kannada
     ದೇಣಿಗೆ ನೀಡಿ ಸಹಕರಿಸಿ

    ದೇಣಿಗೆ ನೀಡಿ ಸಹಕರಿಸಿ

    ಈ ಸಂಘರ್ಷವನ್ನು ನಿಲ್ಲಿಸುವಂತೆ ಮನವಿ ಮಾಡಿದ ವಿಶ್ವ ಆಹಾರ ಕಾರ್ಯಕ್ರಮದ ನಿರ್ದೇಶಕರು ಮೇರಿ ಎಲೆನ್‌, ಇನ್ನು ಕೂಡಾ ಸುಮಾರು 200 ಮಿಲಿಯನ್‌ ಡಾಲರ್‌ಗಳ ಅಗತ್ಯವಿದೆ. ದೇಣಿಗೆ ನೀಡಲು ಇಚ್ಛಿಸುವವರು ನೀಡಬಹುದು ಎಂದಿದ್ದಾರೆ. ಹಾಗೆಯೇ ಈ ದೇಣಿಗೆಯಿಂದ ಅಫ್ಘಾನಿಸ್ತಾನದ ಸ್ಥಿತಿಯನ್ನು ಕೊಂಚ ಸುಧಾರಿಸಲು ಸಹಕಾರಿಯಾದೀತು ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.

     ಕೊರೊನಾದಿಂದಾಗಿ ಈಗಾಗಲೇ ಸ್ಥಿತಿ ಶೋಚನೀಯ

    ಕೊರೊನಾದಿಂದಾಗಿ ಈಗಾಗಲೇ ಸ್ಥಿತಿ ಶೋಚನೀಯ

    ಇನ್ನು ಅಫ್ಘಾನಿಸ್ತಾನದಲ್ಲಿ ಸುಮಾರು 30 ಮಿಲಿಯನ್‌ ಜನರು ಬಡತನ ರೇಖಿಗಿಂತ ಕೆಳ ಮಟ್ಟದವರಾಗಿದ್ದಾರೆ ಎಂದು ವರದಿಗಳು ಹೇಳಿದೆ. ಹಾಗೆಯೇ 11 ಮಿಲಿಯನ್‌ ಅಫ್ಘಾನ್‌ ಜನರು ಆಹಾರ ಭದ್ರತೆ ಕೊರತೆಯಿಂದಾಗಿ ನರಳುತ್ತಾರೆ ಎಂದು ಕೂಡಾ ಅಫ್ಘಾನಿಸ್ತಾನದ ಆಹಾರ ಭದ್ರತೆಯ ಬಗ್ಗೆಗಿನ ವರದಿಯು ತಿಳಿಸಿದೆ.

    ಕೊರೊನಾ ವೈರಸ್‌ ಸಾಂಕ್ರಾಮಿಕ ಹಾಗೂ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಸಂಘರ್ಷದಿಂದಾಗಿ ಈಗಾಗಲೇ ಅಫ್ಘಾನಿಸ್ತಾನದಲ್ಲಿ ಲಕ್ಷಾಂತರ ಜನರು ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಅಫ್ಘಾನಿಸ್ತಾನದಲ್ಲಿ ಆಹಾರ ಭದ್ರತಾ ಬಿಕ್ಕಟ್ಟು ಇದೆ ಎಂದು ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿ ಹಂಗಾಮಿ ಅಧ್ಯಕ್ಷ ಡಾ. ನೀಲಾಬ್ ಮೊಬರೆಜ್ ಈ ಹಿಂದೆ ಹೇಳಿದ್ದರು. ಈ ನಡುವೆ ತಾಲಿಬಾನ್‌ ದಾಳಿಯು ಅಫ್ಘಾನ್‌ ಜನರು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ

     ಅಫ್ಘಾನ್‌ ಜನರ ಆದಾಯಕ್ಕೆ ಪೆಟ್ಟು ಬಿದ್ದಿತ್ತು

    ಅಫ್ಘಾನ್‌ ಜನರ ಆದಾಯಕ್ಕೆ ಪೆಟ್ಟು ಬಿದ್ದಿತ್ತು

    ''ಅಫ್ಘಾನಿಸ್ತಾನದ ಹಲವಾರು ಪ್ರದೇಶದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ, ಆರ್ಥಿಕ ಸಮಸ್ಯೆ ಹಾಗೂ ಆಹಾರ ಸಮಸ್ಯೆಯಿಂದಾಗಿ ನಾವು ಕಳವಳಗೊಂಡಿದ್ದೇವೆ. ನೀರಿನ ಸಮಸ್ಯೆ, ಬೆಳೆ ನಾಶದಿಂದಾಗಿ ಸ್ಥಳೀಯ ಮಾರುಕಟ್ಟೆಗಳ ಸ್ಥಿತಿ ಶೋಚನೀಯವಾಗಿದೆ ಹಾಗೂ ಜನರ ಸಾಮಾನ್ಯ ಆದಾಯವು ತೀವ್ರ ಇಳಿಕೆ ಕಾಣುತ್ತಿದೆ,'' ಎಂದು ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿ ಹಂಗಾಮಿ ಅಧ್ಯಕ್ಷ ಡಾ. ನೀಲಾಬ್ ಮೊಬರೆಜ್ ಎಪ್ರಿಲ್‌ನಲ್ಲಿ ತಿಳಿಸಿದ್ದರು.

    (ಒನ್‌ ಇಂಡಿಯಾ)

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+