ಪಾಕಿಸ್ತಾನಕ್ಕೆ ಪಾಠ ಕಲಿಸುತ್ತಿರುವ ಅಫ್ಘಾನಿಸ್ತಾನ ಪಡೆಗಳು, ಗಡಿಯಲ್ಲಿ ಸೂಕ್ಷ್ಮ ಪರಿಸ್ಥಿತಿ | Afghanistan And Pakistan
ಪಾಕಿಸ್ತಾನ
ಏನಾದರೂ ಒಂದು ಕಿತಾಪತಿ ಮಾಡುತ್ತಾ, ಅಕ್ಕಪಕ್ಕದ ದೇಶಗಳ ಜೊತೆಗೆ ಕಿರಿಕ್ ತೆಗೆದು ಸರಿಯಾಗಿ ಪಾಠ ಕಲಿಯುತ್ತದೆ. ಅದರಲ್ಲೂ ಇದೇ ರೀತಿ ಪದೇ ಪದೇ ಭಾರತದ ಜೊತೆಗೆ ಕಿರಿಕ್ ಮಾಡಿ ಸರಿಯಾಗಿ ಏಟು ತಿಂದು ಹೋಗುವ ಪಾಕಿಸ್ತಾನ, ದಿಢೀರ್ ಅಫ್ಘಾನಿಸ್ತಾನ ವಿರುದ್ಧ ಕೂಡ ಗಲಾಟೆಗೆ ಕೈಹಾಕಿ ಇದೀಗ ನರಳುವಂತೆ ಆಗಿದೆ. ಅಫ್ಘಾನಿಸ್ತಾನ ಮೇಲೆ ವಾಯುದಾಳಿ ಮಾಡಿದ್ದ ಪಾಕಿಸ್ತಾನಕ್ಕೆ ಇದೀಗ ದೊಡ್ಡ ಕಂಟಕ ಎದುರಾಗಿದ್ದು, ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ತಾನ ದೇಶದಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿದಾಳಿ ಮಾಡಲಾಗುತ್ತಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಉಗ್ರರನ್ನ
ಬೆಳೆಸುವ ಪಾಕಿಸ್ತಾನ ಅದೇ ಉಗ್ರರಿಂದ ಇದೀಗ ನೂರಾರು ಸಂಕಷ್ಟಗಳನ್ನು ಎದುರಿಸುತ್ತಿದೆ. ಪಾಕಿಸ್ತಾನ ಬುದ್ಧಿ ಸರಿ ಮಾಡಿಕೊಳ್ಳುವುದು ಬಿಡಿ, ಅಕ್ಕಪಕ್ಕದ ದೇಶಗಳಿಗೂ ನೆಮ್ಮದಿ ನೀಡ್ತಿಲ್ಲ. ಒಂದೆಡೆ ಅಫ್ಘಾನಿಸ್ತಾನದ ಮೇಲೆ ಗೂಬೆ ಕೂರಿಸಿ, ಅಫ್ಘಾನ್ ಗಡಿ ಒಳಗೆ ನುಗ್ಗಿ ದಾಳಿ ಮಾಡಿತ್ತು ಪಾಕಿಸ್ತಾನದ ಸೇನೆ. ಭಾರತದ ಜೊತೆಗೆ ಕೂಡ ಕಿರಿಕ್ ಮಾಡಿಕೊಂಡಿದ್ದ ಪಾಕಿಸ್ತಾನ, ದಿಢೀರ್ ಅಫ್ಘಾನಿಸ್ತಾನ ವಿರುದ್ಧ ಕೂಡ ಜಗಳಕ್ಕೆ ಹೋಗಿದೆ. ಪಾಕಿಸ್ತಾನ & ಅಫ್ಘಾನಿಸ್ತಾನ ಗಡಿಯಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣ ಆಗಿದೆ, ಹೀಗಿದ್ದಾಗ ಪಾಕಿಸ್ತಾನ ಸೇನೆಯನ್ನ ಹುಡುಕಿ ಹುಡಿಕಿ ಹೊಡೆಯುತ್ತಿದೆ ಅಫ್ಘಾನಿಸ್ತಾನ ಪಡೆ. ಆ ಮೂಲಕ ಪಾಕಿಸ್ತಾನ & ಅಫ್ಘಾನಿಸ್ತಾನ ನಡುವೆ ಪೂರ್ಣ ಪ್ರಮಾಣದ ಯುದ್ಧ ಶುರುವಾಗಿದ್ದು, ಈ ಯುದ್ಧ ದೊಡ್ಡ ಹಂತಕ್ಕೆ ತಲುಪುತ್ತಿದೆ. id='are-slot-2' class='oiad oi-axt oiadv'>












Click it and Unblock the Notifications