ಹಿಂದಿಯಲ್ಲಿ ಮಾತಾಡಿ ಮೋದಿಯನ್ನು ಸ್ವಾಗತಿಸಿದ ಇಸ್ರೇಲ್ ಪ್ರಧಾನಿ
ಟೆಲ್ ಅವಿವ್, ಜುಲೈ 4: ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ರಾಜಧಾನಿ ಟೆಲ್ ಅವಿವ್ ನ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಇಳಿದಿದ್ದಾರೆ. ಇದು ಇಸ್ರೇಲಿಗೆ ಭಾರತದ ಪ್ರಧಾನಿಯೊಬ್ಬರು ನೀಡುತ್ತಿರುವ ಮೊದಲ ಐತಿಹಾಸಿಕ ಭೇಟಿಯಾಗಿದೆ.
ರತ್ನಗಂಬಳಿ ಹಾಕಿ ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸಲು ಸ್ವತಃ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಾಗೂ ಸಂಪುಟ ಸಹೊದ್ಯೋಗಿಗಳು ವಿಮಾನ ನಿಲ್ದಾಣಕ್ಕೆ ಬಂದಿದ್ದರು.
ಮೋದಿ ವಿಮಾನವಿಳಿಯುತ್ತಿದ್ದಂತೆ ಬಂದು ಅಪ್ಪಿಕೊಂಡು ನೇತನ್ಯಾಹು 'ಆಪ್ಕಾ ಸ್ವಾಗತ್ ಹೇ ಮೇರೆ ದೋಸ್ತ್ .. ' ಎಂದು ಹಿಂದಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸಿದರು.
ನಂತರ ಮಾತನಾಡಿದ ನೇತನ್ಯಾಹು, "ನಾವು ಭಾರತವನ್ನು ಪ್ರೀತಿಸುತ್ತೇವೆ; ನಿಮ್ಮ ಸಂಸ್ಕೃತಿ, ಇತಿಹಾಸ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯೆಡೆಗಿನ ಬದ್ಧತೆ ನಮಗಿಷ್ಟ. ನನಗೆ ಹಲವು ಕಾರಣಗಳಿಗಾಗಿ ನಮ್ಮ ನಡುವಿನ ದಂಬಂಧ ಯಶಸ್ವಿಯಾಗಿದೆ. ನಮ್ಮ ಜನರ ಬುದ್ಧಿಮತ್ತೆಯ ಬಗ್ಗೆ ನನಗೆ ನಂಬಿಕೆ ಇದೆ," ಎಂದು ಹೇಳಿದರು.

ಭಯೋತ್ಪಾದನೆ ಸಾಮಾನ್ಯ ವೈರಿ
ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಮತ್ತು ಭಾರತ ಭಯೋತ್ಪಾದನೆಯಂತಥ ಸಾಮಾನ್ಯ ವೈರಿಯ ವಿರುದ್ಧ ಹೋರಾಡುತ್ತಿವೆ ಎಂದು ಹೇಳಿದರು. "ಇಸ್ರೇಲಿಗೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿ ಎಂಬ ಗೌರವ ನನ್ನದಾಗಿದೆ," ಎಂದು ಮೋದಿ ಹೇಳಿದರು.

25 ವರ್ಷಗಳ ದ್ವಿಪಕ್ಷೀಯ ಸಂಬಂಧ
"ಹಣಕಾಸು ಕೊಡುಕೊಳ್ಳುವಿಕೆಗಳಾಚೆಗೆ ಭಾರತ ಮತ್ತು ಇಸ್ರೇಲ್ ತಮ್ಮ ತಮ್ಮ ಸಮಾಜವನ್ನು ರಕ್ಷಿಸುವಲ್ಲಿ ಸಹಕಾರ ನೀಡುತ್ತಿವೆ," ಎಂದು ನರೇಂದ್ರ ಮೋದಿ ಹೇಳಿದರು. "ಇಸ್ರೇಲಿಗೆ ನಾನು ಭೇಟಿ ನೀಡುತ್ತಿರುವುದು ಭಾರತೀಯರಿಗೆ ಅವೈಜ್ಞಾನಿಕವಲ್ಲ," ಎಂದ ಪ್ರಧಾನಿ ಮೋದಿ, ಭಾರತ ಮತ್ತು ಇಸ್ರೇಲ್ ನಡುವೆ ಕಳೆದ 25 ವರ್ಷಗಳಿಂದ ದ್ವಿಪಕ್ಷೀಯ ಸಬಂಧವಿದೆ ಎಂದು ಹೇಳಿದರು.
"25 ವರ್ಷಗಳ ನಂತರ ಇವತ್ತು ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ತಿರುವು ಹಾದಿಯಲ್ಲಿ ಬಂದು ನಿಂತಿದೆ.ಇಂಥಹ ಸಂದರ್ಭದಲ್ಲಿ ಭಾರತ ಇಸ್ರೇಲ್ ನತ್ತ ಮುಖ ಮಾಡುವುದರಲ್ಲಿ ವಿಶೇಷವೇನೂ ಇಲ್ಲ," ಎಂದು ಇಸ್ರೇಲ್ ಚಾನಲ್ ಗೆ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
|
ಮೈಲುಗಲ್ಲಿನ ಭೇಟಿ
ಭಾರತ ಮತ್ತು ಇಸ್ರೇಲ್ ನಡುವೆ ದ್ವಿಪಕ್ಷೀಯ ಸಂಬಂಧಕ್ಕೆ 25 ವರ್ಷಗಳು ತುಂಬುತ್ತಿರುವ ವೇಳೆಯಲ್ಲೇ ಭಾರತದ ಪ್ರಧಾನಿ ಇಸ್ರೇಲ್ ನೆಲದ ಮೇಲೆ ಇಳಿಯುತ್ತಿರುವುದನ್ನು 'ಪ್ರಮುಖ ಮತ್ತು ಮೈಲುಗಲ್ಲಿನ ಭೇಟಿ' ಎಂದು ಬಣ್ಣಿಸಲಾಗಿದೆ. ಅಭಿವೃದ್ಧಿ, ಅನ್ವೇಷಣೆ, ಕೃಷಿ, ನೀರಾವರಿ ಸೇರಿದಂತೆ ಎರಡೂ ದೇಶಗಳ ನಡುವೆ ಮತ್ತೊಂದಷ್ಟು ಕೊಡುಕೊಳ್ಳುವಿಕೆಗಳು ಈ ಸಂದರ್ಭದಲ್ಲಿ ನಡೆಯುವ ಸಾಧ್ಯತೆ ಇದೆ.

ಭೋಜನ ಕೂಟ
ತಮ್ಮ ಮೂರು ದಿನಗಳ ಇಸ್ರೇಲ್ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿಗಳೊಂದಿಗೆ ಭೋಜನ ಕೂಟದಲ್ಲಿ ಭಾಗವಹಿಸಲಿದ್ದಾರೆ. ತಮ್ಮ ಅತಿಥಿಗಾಗಿ ನೇತನ್ಯಾಹು ವಿಶೇಷ ಭೋಜನ ಕೂಟ ಹಮ್ಮಿಕೊಂಡಿದ್ದಾರೆ. ಜುಲೈ 5ರಂದು ಇಸ್ರೇಲ್ ಅಧ್ಯಕ್ಷ ರೌವೆನ್ ರಿವ್ಲಿನ್ ಜತೆಗೂ ಪ್ರಧಾನಿ ಸಮಾಲೋಚನೆ ನಡೆಸಲಿದ್ದಾರೆ. ಜತೆಗೆ ವಿಪಕ್ಷ ನಾಯಕ ಐಸಾಕ್ ಹೆರಜಾಗ್ ರನ್ನೂ ಭೇಟಿಯಾಗಿ ಚರ್ಚಿಸಲಿದ್ದಾರೆ.

ಭಾರತೀಯ ಇಸ್ರೇಲಿಯರನ್ನುದ್ದೇಶಿಸಿ ಭಾಷಣ
ಭೇಟಿ ವೇಳೆ ಇಸ್ರೇಲಿನಲ್ಲಿ ನೆಲೆ ನಿಂತಿರುವ 4,000 ಭಾರತೀಯರನ್ನುದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ. ಇನ್ನು ಹೈಫಾದಲ್ಲಿರುವ ಸ್ವಾರಕದಲ್ಲಿ ಭಾರತೀಯ ಸೈನಿಕರಿಗೆ ಮೋದಿ ಗೌರವವನ್ನೂ ಸಲ್ಲಿಸಿದ್ದಾರೆ.
#WATCH Welcome ceremony for PM Narendra Modi at Ben Gurion Airport in Israel https://t.co/7I7hEcSAAH
— ANI (@ANI_news) July 4, 2017












Click it and Unblock the Notifications