ಬರೀ 43 ಲಕ್ಷಕ್ಕೆ 8 ಮನೆ ಖರೀದಿಸಿದ ಮಹಿಳೆ: ಹೇಗೆ ಸಾಧ್ಯ?
ಈಗಿನ ಕಾಲದಲ್ಲಿ ಹಳ್ಳಿಗಳಲ್ಲಿ ಮಳೆಯಾಶ್ರಿತ ಒಂದು ಹೆಕ್ಟೇರ್ ಭೂಮಿ ಕೊಂಡುಕೊಳ್ಳಬೇಕೆಂದರೂ 15 ಲಕ್ಷ ರೂಪಾಯಿ ಬೇಕೇ ಬೇಕಾಗುತ್ತದೆ. ಇಂತಹದ್ಧ ನಡುವೆಯೂ ಮಹಿಳೆಯೊಬ್ಬರು ಬರೀ 43 ಲಕ್ಷ ರೂಪಾಯಿಗೆ ಬರೋಬ್ಬರಿ 8 ಮನೆಗಳನ್ನು ಕೊಂಡು ಕೋಟಿ ಲೆಕ್ಕದಲ್ಲಿ ಸಂಪಾದನೆ ಮಾಡಿದ್ದಾರೆ. ಹಾಗಾದ್ರೆ ಇದು ಹೇಗೆ ಸಾಧ್ಯ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮೆರಿಕದ ಲೂಸಿಯಾನದ ಮಹಿಳೆಯೊಬ್ಬರು ಹಾಳಾಗಿದ್ದ 8 ಮನೆಗಳನ್ನು ಕೇವಲ 43 ಲಕ್ಷ ರೂಪಾಯಿಗಳಿಗೆ ಖರೀದಿಸಿ, ಅವುಗಳನ್ನು ದುರಸ್ತಿ ಮಾಡಿ ಬಾಡಿಗೆಗೆ ಕೊಟ್ಟು ವರ್ಷಕ್ಕೆ 2 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಸಾರಾ ಮೆಕ್‌ಡೇನಿಯಲ್ ಎಂಬುವವರೇ ಈ ಸಾಧನೆ ಮಾಡಿದ ಮಹಿಳೆಯಾಗಿದ್ದಾರೆ ಎಂದು ಕನ್ನಡ ದುನಿಯಾ ವರದಿ ಮಾಡಿದೆ.

2016ರಲ್ಲಿ ತಮ್ಮ ಹುಟ್ಟೂರು ಮಿಂಡನ್‌ಗೆ ವಾಪಸ್ಸಾದ ಸಾರಾ ಅವರು, ನಾಲ್ಕು ವರ್ಷಗಳ ಬಳಿಕ ತಮ್ಮ ಬಾಲ್ಯದ ಗೆಳೆಯನಿಂದ 40 ವರ್ಷಗಳಿಂದ ಖಾಲಿ ಬಿದ್ದಿದ್ದ 8 ಮನೆಗಳನ್ನು ಖರೀದಿಸುವ ಅವಕಾಶ ಪಡೆದರು. ಆಗಲೇ ಸಾರಾ 20ಕ್ಕೂ ಹೆಚ್ಚು ಆಸ್ತಿಗಳನ್ನು ಹೊಂದಿದ್ದರು. ಆದರೂ, ಈ ಹಾಳಾಗಿದ್ದ ಮನೆಗಳನ್ನು ಕೇವಲ 51,306 ಡಾಲರ್, ಅಂದರೆ ಸುಮಾರು 43 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದರು.
ಇನ್ನು ಈ ಮನೆಗಳನ್ನು ದುರಸ್ತಿ ಮಾಡಲು ಸಾರಾ ಸುಮಾರು 729,885 ಡಾಲರ್ ಅಂದರೆ ಇಂಡಿಯನ್ ಕರೆನ್ಸಿ ಲೆಕ್ಕದಲ್ಲಿ ಸುಮಾರು 6.35 ಕೋಟಿ ರೂಪಾಯಿ ಖರ್ಚು ಮಾಡಿದರು. ಇದಕ್ಕಾಗಿ ಅವರು ಹಲವು ಮೂಲಗಳಿಂದ ಹಣವನ್ನು ಕೂಡಿಸಿಟ್ಟಿದ್ದರಯ. ಲೂಸಿಯಾನ ಪರಿಸರ ಗುಣಮಟ್ಟ ಇಲಾಖೆಯಿಂದ ಶೂನ್ಯ ಬಡ್ಡಿಯ ಸಾಲ, ಸ್ಥಳೀಯ ಬ್ಯಾಂಕ್‌ನಿಂದ ಸಾಲ, ಟೆಕ್ಸಾಸ್‌ನಲ್ಲಿ ತಮ್ಮ ಆಸ್ತಿ ಮಾರಾಟ ಮಾಡಿ ಹಣವನ್ನು ಹೊಂದಿಸಿದರು.
ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ಸಾರಾ ಅವರು ಪ್ರತಿ ತಿಂಗಳು 3,298 ಡಾಲರ್‌ಗಳನ್ನು ಗೃಹ ಸಾಲವಾಗಿ ಮತ್ತು 400 ಡಾಲರ್‌ಗಳನ್ನು ಲೂಸಿಯಾನ ಪರಿಸರ ಗುಣಮಟ್ಟ ಇಲಾಖೆಯ ಸಾಲಕ್ಕೆ ಪಾವತಿ ಮಾಡಬೇಕಾಗಿದೆ.
ಈ ಮನೆಗಳನ್ನು 1930ರಲ್ಲಿ ಕಟ್ಟಲಾಗಿತ್ತು. ಸಾರಾ ಅವುಗಳ ಮೂಲ ವಿನ್ಯಾಸವನ್ನು ಉಳಿಸಿಕೊಂಡು ಆಧುನಿಕ ಸ್ಪರ್ಶ ನೀಡಿದ್ದಾರೆ. ಪ್ರತಿ ಮನೆಯನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಿದ್ದಾರೆ. ಹೊರಗಡೆ ಕುಳಿತುಕೊಳ್ಳಲು ಅನುಕೂಲ ಆಗುವಂತೆ ಪೀಠೋಪಕರಣಗಳು ಮತ್ತು ಅಲಂಕಾರಿಕ ದೀಪಗಳನ್ನು ಹಾಕಿದ್ದಾರೆ.
2020ರಲ್ಲಿ ಈ ಮನೆಗಳನ್ನು ಬಾಡಿಗೆಗೆ ನೀಡಲು ಪ್ರಾರಂಭಿಸಿದ ಸಾರಾ ಅವರು 2024ರಲ್ಲಿ 224,133 ಡಾಲರ್ ಅಂದರೆ ಸುಮಾರು 2 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ. ಸದ್ಯ ಸಂಪೂರ್ಣ ಆದಾಯವನ್ನು ವ್ಯವಹಾರಕ್ಕೆ ಮರು ಹೂಡಿಕೆ ಮಾಡುತ್ತಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಈ ವ್ಯವಹಾರವನ್ನು ಲಾಭದಾಯಕ ಆಗಿಸುವ ಗುರಿಯನ್ನು ಹೊಂದಿದ್ದಾರೆ.












Click it and Unblock the Notifications