30 ಪ್ಲಾಸ್ಟಿಕ್ ಬ್ಯಾಗುಗಳನ್ನು ತಿಂದು ಅಸುನೀಗಿದ ತಿಮಿಂಗಿಲ

Posted By:
Subscribe to Oneindia Kannada

ಒಸ್ಲೊ (ನಾರ್ವೆ): ಪ್ಲಾಸ್ಟಿಕ್ ನಿಷೇಧದ ಕೂಗು ಕೇವಲ ನಮ್ಮಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದೆ. ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್ , ಮುಗ್ಧ ಹಾಗೂ ಮೂಕ ಪ್ರಾಣಿಗಳ ಜೀವವನ್ನು ಬಲಿತೆಗೆದುಕೊಳ್ಳುತ್ತಿವೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

ನಾರ್ವೆಯ ಪಶ್ಚಿಮ ಭಾಗ ಕರಾವಳಿಯ ಸಮುದ್ರ ತೀರದಲ್ಲಿ ಎರಡು ದಿನಗಳ ಹಿಂದೆ ದೈತ್ಯ ತಿಮಿಂಗಿಲವೊಂದು ಸತ್ತು ಬಿದ್ದಿತ್ತು. ಸಂಶೋಧನಾಕಾರರು ಅದನ್ನು ಕೊಂಡೊಯ್ದು ಅದರ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

A whale is found dead with more than 30 PLASTIC BAGS in its stomach

ಪರೀಕ್ಷೆ ವೇಳೆ ಅದರ ಹೊಟ್ಟೆಯಲ್ಲಿ ಸುಮಾರು 30 ಪ್ಲಾಸ್ಟಿಕ್ ಬ್ಯಾಗ್ ಗಳು ಪತ್ತೆಯಾಗಿವೆ. ಇಷ್ಟು ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಅರಿಯದೇ ನುಂಗಿರುವ ಈ ತಿಮಿಂಗಿಲ ಸಾಯುವ ವೇಳೆ ಸಹಿಲಸಾಧ್ಯವಾದ ಹೊಟ್ಟೆನೋವಿನಿಂದ ಬಳಲಿ ಸಾವನ್ನಪ್ಪಿರಬಹುದು ಎಂದು ಸಂಶೋಧನಾಕಾರರು ಊಹಿಸಿದ್ದಾರೆ.

ಹೊಟ್ಟೆಯ ಜಠರದಲ್ಲಿ ಪಚನವಾಗದ ಈ ಪ್ಲಾಸ್ಟಿಕ ಬ್ಯಾಗುಗಳು, ಅಲ್ಲಿಂದ ಕರುಳನ್ನು ಪ್ರವೇಶಿಸಿ ಅಲ್ಲಿ ಒಂದಕ್ಕೊಂದು ಬೆಸೆದುಕೊಂಡು ಹಗ್ಗದ ರೂಪದಲ್ಲಿ ಇಡೀ ಕರುಳಿನ ತುಂಬೆಲ್ಲಾ ಆವರಿಸಿಕೊಂಡಿವೆ. ಇದರಿಂದ ತಿಮಿಂಗಿಲವು ತಿಂದ ಇನ್ಯಾವ ಆಹಾರವೂ ಕರುಳನ್ನು ಪ್ರವೇಶಿಸಲು ಈ ಪ್ಲಾಸ್ಟಿಕ್ ಅನುವು ಮಾಡಿಲ್ಲ. ಇದಲ್ಲದೆ, ತೀವ್ರವಾದ ಹೊಟ್ಟೆ ನೋವಿನಿಂದ ಈ ತಿಮಿಂಗಿಲ ಸಾವನ್ನಪ್ಪಿದೆ ಎಂದು ಸಂಶೋಧನಾಕಾರರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Researchers in Norway were in for a shock when they discovered more than 30 plastic bags and other plastic waste inside the stomach of a whale.
Please Wait while comments are loading...