ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದೃಷ್ಟ ಅಂದರೆ ಇದೆ: ಎರಡು ನಿಮಿಷ ತಡವಾಗಿದ್ದಕ್ಕೆ ಜೀವ ಉಳಿಯಿತು!

|
Google Oneindia Kannada News

ಅಥೆನ್ಸ್‌, ಮಾರ್ಚ್‌ 11: ಯಾವುದೇ ಕೆಲಸಕ್ಕೆ ಆಗಲಿ, ಸ್ಥಳಕ್ಕೆ ಆಗಲಿ ತಡವಾಗಿ ಹೋಗುವುದು ಅಶಿಸ್ತು ಎನಿಸಿಕೊಳ್ಳುತ್ತದೆ. ತಡವಾಗಿ ಹೋಗುವುದರಿಂದ ಅವಕಾಶಗಳು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತಡವಾಗಿ ಹೋಗಿದ್ದರಿಂದಲೇ ಇಂದು ಆತ ಜೀವಂತವಾಗಿದ್ದಾನೆ.

ಅಂಟೋನಿಸ್ ಮಾರ್ವೋಪೋಲೋ ಎಂಬ ವ್ಯಕ್ತಿ ನೈರೋಬಿಗೆ ಹೋಗಲೆಂದು ಮಾರ್ಚ್‌ 10ಕ್ಕೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದರು. ವಿಮಾನ ಏರಲು ನಿಲ್ದಾಣಕ್ಕೆ ಬಂದರು ಆದರೆ ಎರಡು ನಿಮಿಷ ತಡವಾಗಿ. ಇದೇ ಇಂದು ಅವರ ಜೀವವನ್ನು ಉಳಿಸಿದೆ. ಅವರು ಹತ್ತಬೇಕಿದ್ದ ವಿಮಾನ ಪತನವಾಗಿ ಎಲ್ಲ ಪ್ರಯಾಣಿಕರು ಅಸುನೀಗಿದ್ದಾರೆ.

149 ಪ್ರಯಾಣಿಕರಿದ್ದ ಇಥಿಯೋಪಿಯನ್ ಏರ್ ಲೈನ್ಸ್ ನ ವಿಮಾನ ಪತನ149 ಪ್ರಯಾಣಿಕರಿದ್ದ ಇಥಿಯೋಪಿಯನ್ ಏರ್ ಲೈನ್ಸ್ ನ ವಿಮಾನ ಪತನ

ಇಟಿ-302 ವಿಮಾನ ನಿನ್ನೆ ಅಡಿಸ್ ಅಬಾಬಾದಿಂದ ನೈರೋಬಿಗೆ ಹೊರಟಿತ್ತು. ವಿಮಾನ ನಿಲ್ದಾಣ ಬಿಟ್ಟ ಕೇವಲ 6 ನಿಮಿಷದಲ್ಲಿ ಅದು ವಿಮಾನ ನಿಲ್ದಾಣದೊಂದಿಗೆ ಸಂಪರ್ಕ ಕಡಿದುಕೊಂಡಿತು. ಆ ನಂತರ ಅದು ಪತನಗೊಂಡಿತು. 149 ಮಂದಿ ಪ್ರಯಾಣಿಕರು ಹಾಗೂ 8 ಸಿಬ್ಬಂದಿ ವಿಮಾನದಲ್ಲಿದ್ದರು. ಎಲ್ಲರೂ ಅಪಘಾತದಲ್ಲಿ ಮೃತಟ್ಟಿದ್ದಾರೆ.

A Mans life saved because he came late to Air port

ವಿಮಾನದ 150ನೇ ಪ್ರಯಾಣಿಕ ಅಂಟೋನಿಸ್ ಮಾರ್ವೋಪೋಲೋ ಆಗಿದ್ದರು ಆದರೆ ಅವರು ಕೇವಲ ಎರಡು ನಿಮಿಷ ತಡವಾಗಿ ಬಂದ ಕಾರಣ ಅವರು ವಿಮಾನ ಏರಲಾಗಲಿಲ್ಲ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ಭದ್ರತಾ ತಪಾಸಣೆ ತಡವಾಯಿತು ಹಾಗಾಗಿ ನಾನು ವಿಮಾನ ಏರಲು ಆಗಲಿಲ್ಲ. ಆಗ ನಾನು ತಪಾಸಣೆ ಮಾಡುತ್ತಿದ್ದವರು ಮೇಲೆ ಕಿರುಚಾಡಿದೆ. ಆದರೆ ವಿಮಾನಕ್ಕೆ ಆದ ಗತಿ ಗೊತ್ತಾದ ಬಳಿಕ ನನಗೆ ನೆಲವೇ ಕುಸಿದ ಅನುಭವವಾಯಿತು ಎಂದಿದ್ದಾರೆ.

A Mans life saved because he came late to Air port

ಫೇಸ್‌ಬುಕ್‌ನಲ್ಲಿ ತಾವು ಖರೀದಿಸಿದ್ದ ಟಿಕೆಟ್‌ ನ ಚಿತ್ರ ಹಾಕಿರುವ ಅವರು ಇದು ನನ್ನ ಅತ್ಯಂತ ಅದೃಷ್ಟದ ದಿನ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ವಿಮಾನ ಅಪಘಾತದಲ್ಲಿ ಮೃತಪಟ್ಟವರೆಲ್ಲರಿಗೂ ಸಂತಾಪ ಸೂಚಿಸಿದ್ದಾರೆ.

English summary
Antonis Mavropoulos needed on the ET 302 plane which crashed yesterday and killed all on board. He was booked ticket for that plane but came two minutes late to the air port.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X