• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೋಟಿನ ವಾಸನೆಗೆ ಕೋಮಾದಲ್ಲಿದ್ದವ ಕಣ್ಣು ಬಿಟ್ಟ..!

By Kiran B Hegde
|

ಚೀನಾ, ಜ. 12: 'ಹಣ ಕಂಡರೆ ಹೆಣವೂ ಬಾಯಿಬಿಡುತ್ತೆ' ಎಂಬ ಗಾದೆ ಮಾತು ಕೇಳಿದ್ದೀರಲ್ಲ. ಕನ್ನಡದ ಈ ಗಾದೆ ಅತಿಶಯೋಕ್ತಿ ಅನ್ನಿಸಿದರೂ ಪೂರ್ಣ ಸುಳ್ಳಲ್ಲ. ಹಣಕ್ಕಾಗಿ ಹಪಹಪಿಸುತ್ತ ಊಟ, ತಿಂಡಿ, ನಿದ್ದೆ, ನೆಮ್ಮದಿ ಎಲ್ಲವನ್ನೂ ಕಳೆದುಕೊಂಡು ಪರದಾಡುವವರನ್ನು ನೋಡಿದ್ದೇವೆ. ಬಹುಶಃ ಅಂಥವರ ಮೊಗದಲ್ಲಿ ನಗು ಅರಳಲು ಲಾಟರಿಯೇ ಹೊಡೆಯಬೇಕೇನೋ.

ಏನೇ ಆಗಲಿ, ಮೇಲೆ ಹೇಳಿದ ಕನ್ನಡದ ಗಾದೆ ಮಾತು ಪೂರ್ಣ ಸುಳ್ಳಲ್ಲ ಎಂಬುದು ಚೀನಾದಲ್ಲಿ ಸಾಬೀತಾಗಿದೆ. ಒಂದು ವರ್ಷ ಕಾಲ ಕೋಮಾದಲ್ಲಿದ್ದ ವ್ಯಕ್ತಿ ನೋಟಿನ ವಾಸನೆಗೆ ತಟ್ಟನೆ ಕಣ್ಣುಬಿಟ್ಟಿದ್ದಾನೆ! [ಚಿನ್ನ ಸಾಲದ ಮಿತಿ 2 ಲಕ್ಷಕ್ಕೆ]

ಸಾಮಾನ್ಯವಾಗಿ ವ್ಯಕ್ತಿಯೋರ್ವ ಕೋಮಾ ಸ್ಥಿತಿಗೆ ಹೋದ ಎಂದರೆ ಅರ್ಧ ಸತ್ತಂತೆಯೇ ಲೆಕ್ಕ. ಬದುಕಿ ಬಂದರೆ ಪವಾಡ ಎಂದು ವೈದ್ಯಕೀಯ ಲೋಕವೇ ಒಪ್ಪಿಕೊಳ್ಳುತ್ತದೆ. ಇಂಥವರನ್ನು ಔಷಧಿಗಿಂತ ಭಾವನಾತ್ಮಕ ವಿಷಯಗಳೇ ಬದುಕಿಸಬಲ್ಲವು ಎಂಬುದು ಅನೇಕ ಬಾರಿ ಸಾಬೀತಾಗಿದೆ. ಇಲ್ಲಿ ಹೇಳ ಹೊರಟಿರುವುದೂ ಅಂತದ್ದೇ ಮತ್ತೊಂದು ಘಟನೆಯನ್ನು.

ಆಗಿದ್ದಿಷ್ಟು : ವಿಪರೀತ ಹಣದ ಹುಚ್ಚು ಬೆಳೆಸಿಕೊಂಡಿದ್ದ ಚೀನಾದ ಶಿಂಜೆನ್ ಪ್ರಾಂತ್ಯದ ಗ್ಸಿಯಾವೋ ಎಂಬ 30 ವರ್ಷದ ತರುಣ ದಿಢೀರ್ ಶ್ರೀಮಂತನಾಗುವಂತಹ ಬಿಸಿನೆಸ್ ಐಡಿಯಾ ಹುಡುಕಲು ಇಂಟರ್ನೆಟ್ ಮೊರೆ ಹೋಗಿದ್ದ. ತಪಸ್ಸಿಗೆ ಕುಳಿತವನಂತೆ ಬಿಟ್ಟ ಜಾಗದಿಂದ ಕದಲದೆ, ವಾರ ಕಾಲ ನಿದ್ದೆಯನ್ನೂ ಮಾಡದೆ ಸೂಕ್ತ ಐಡಿಯಾಕ್ಕಾಗಿ ಹುಡುಕುತ್ತ ಕುಳಿತ. [ಆನ್ ಲೈನ್ ಹಣ ವರ್ಗಾವಣೆಗೆ ಮುನ್ನ ಫೋನ್ ಬರುತ್ತೆ]

ಆದರೆ, ಪ್ರಕೃತಿ ತಾನು ರೂಪಿಸಿದ್ದ ನಿಯಮ ಉಲ್ಲಂಘಿಸಿದ ಗ್ಸಿಯಾವೋ ಮೇಲೆ ಮುನಿದುಕೊಂಡಿತ್ತು. ವಾರಗಳ ಕಾಲ ಅಕ್ಷರಶಃ ನಿದ್ದೆ ಮಾಡದಿರುವ ಕಾರಣ ಚಿರನಿದ್ದೆಗೆ ಜಾರುವ ಅಪಾಯ ಎದುರಾಯಿತು. ಆರೋಗ್ಯ ವಿಪರೀತ ಹದಗೆಟ್ಟು ಕೋಮಾವಸ್ಥೆಗೆ ಹೋದ ಗ್ಸಿಯಾವೋ ವರ್ಷ ಕಾಲ ಕಣ್ಣು ತೆರೆಯಲೇ ಇಲ್ಲ.

ಹೊಳೆಯಿತು ಐಡಿಯಾ : ಚಿಕಿತ್ಸೆ ಮೇಲಿನ ಎಲ್ಲ ನಂಬಿಕೆಯೂ ಪಾಲಕರಿಗೆ ಮುಗಿಯುತ್ತ ಬಂದಿತ್ತು. ವೈದ್ಯರಿಗೂ ಗ್ಸಿಯಾವೋ ಭಾವುಕತೆಯ ಮೇಲೆ ಪ್ರಯೋಗ ಮಾಡುವುದು ಬಿಟ್ಟು ಬೇರೆ ದಾರಿ ಕಾಣಲಿಲ್ಲ. ಪ್ರಜ್ಞಾಶೂನ್ಯನಾಗಿ ಮಲಗಿದ್ದ ವ್ಯಕ್ತಿಯ ಭಾವನೆ ಬಡಿದೆಬ್ಬಿಸಲು ಇದ್ದ ಮಾಧ್ಯಮವೆಂದರೆ ಶಬ್ದ ಹಾಗೂ ವಾಸನೆ ಮಾತ್ರ. ಆಗಲೇ ಪಾಲಕರು ತಮ್ಮ ಮಗನಿಗೆ ಹಣದ ಮೇಲಿದ್ದ ವಿಪರೀತ ವ್ಯಾಮೋಹದ ಕುರಿತು ತಿಳಿಸಿದರು. [2005ಕ್ಕಿಂತ ಹಳೆಯ ನೋಟಿದ್ದರೆ ಬದಲಾಯಿಸಿ]

ಸರಿ, ಪ್ರಯೋಗ ಮಾಡಿ ನೋಡಿಯೇ ಬಿಡೋಣ ಎಂದುಕೊಂಡ ವೈದ್ಯರು 100 ಯುಯಾನ್ (ಚೀನಾ ಹಣ) ಮೌಲ್ಯದ ನೋಟುಗಳನ್ನು ಗ್ಸಿಯಾಂಗ್ ಮೂಗಿನಡಿ ಹಿಡಿಯಲು ನರ್ಸ್‌ಗೆ ಸೂಚಿಸಿದರು. ವೈದ್ಯರು ಬಿಟ್ಟ ಬಾಣ ಸರಿಯಾಗಿ ನಾಟಿತ್ತು. ಹಣದ ವಾಸನೆ ಎಂತಹ ಪರಿಣಾಮ ಬೀರಿತೆಂದರೆ ವರ್ಷ ಕಾಲ ಸತ್ತಂತೆ ಮಲಗಿದ್ದ ಗ್ಸಿಯಾಂಗ್ ಅರ್ಧ ಕಣ್ಣು ಬಿಟ್ಟ! ಕೆಲವೇ ಕ್ಷಣಗಳಲ್ಲಿ ಪ್ರತಿಕ್ರಿಯಿಸಲು ಆರಂಭಿಸಿದ!

ವೈದ್ಯರು ಪವಾಡವೊಂದನ್ನು ನೋಡಿದ ಭಾವನೆಯಲ್ಲಿದ್ದರೆ, ಪಾಲಕರಿಗೆ ಹೋದ ಜೀವ ಬಂದಂತಾಗಿತ್ತು. "ನನ್ನ 20 ವರ್ಷಗಳ ಜೀವನದಲ್ಲಿ ಇಂತಹ ಘಟನೆಯೊಂದನ್ನು ನೋಡಿಯೇ ಇಲ್ಲ. ಶಬ್ದ ಹಾಗೂ ವಾಸನೆಯ ನೆನಪುಗಳು ಅದ್ಭುತ ಉತ್ತೇಜಕಗಳು ಎಂಬುದು ತಿಳಿದಿತ್ತು. ಈಗ ಅನುಭವಕ್ಕೇ ಬಂತು" ಎಂದು ವೈದ್ಯರು ಹೇಳಿಕೊಂಡಿದ್ದಾರೆ. [ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ತಪ್ಪಾಗದಿರಲಿ]

ಈಗ ಧನಪ್ರೇಮಿ ಗ್ಸಿಯಾವೋ ನಿಧಾನವಾಗಿ ಗುಣಮುಖನಾಗುತ್ತಿದ್ದಾನೆ. ಆತನ ಪಾಲಕರು ಹಣದ ಥೆರಪಿ ಮುಂದುವರಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A man who spent more than a year in the coma finally woke up when nurse wafted banknotes under his nose. Xiao Li (30) fell into the coma after spending almost a week without sleep at an internet cafe, in the research of business ideas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more