• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬರೊಬ್ಬರಿ 216 ದಿನಗಳ ಕಾಲ ಹೆಚ್‌ಐವಿ ಸೋಂಕಿತೆಯ ದೇಹದಲ್ಲಿತ್ತು ಕೊರೊನಾ ವೈರಸ್!

|
Google Oneindia Kannada News

ನವದೆಹಲಿ, ಜೂನ್ 6: ಕಳೆದ ಒಂದೂವರೆ ವರ್ಷಗಳಿಂದ ವಿಶ್ವಾದ್ಯಂತ ಕೊರೊನಾ ವೈರಸ್‌ ಅಪಾರ ಪ್ರಮಾಣದ ಆಘಾತವನ್ನು ನೀಡಿದೆ. ಎಲ್ಲಾ ರಾಷ್ಟ್ರಗಳು ಈ ವೈರಸ್‌ನ ಆರ್ಭಟಕ್ಕೆ ನಲುಗಿದೆ. ಒಂದರ ಹಿಂದೊಂದು ಅಲೆಯಾಗಿ ಅಪ್ಪಳಿಸುತ್ತಾ ಕೋಟ್ಯಂತರ ಬಲಿ ಪಡೆದಿದೆ. ಈ ಅವಧಿಯಲ್ಲಿ ಈ ವೈರಸ್ ಸಾಕಷ್ಟು ರೂಪಾಂತರವನ್ನು ಕೂಡ ಹೊಂದಿದೆ. ಈ ಸಂದರ್ಭದಲ್ಲಿ ಅಚ್ಚರಿಯ ಅಧ್ಯಯನ ವರದಿಯೊಂದು ಹೊರಬಿದ್ದಿದ್ದು ಹೆಚ್‌ಐವಿ ಸೋಂಕಿತೆಯೊಬ್ಬರ ದೇಹದಲ್ಲಿ ಸುದೀರ್ಘ ಕಾಲ ಸೋಂಕು ಉಳಿದುಕೊಂಡಿರುವುದು ವರದಿಯಾಗಿದೆ.

ಹೊಸ ಅಧ್ಯಯನದ ಮಾಹಿತಿಯ ಪ್ರಕಾರ ಹೆಚ್‌ಐವಿ ಸೋಂಕಿತ ಮಹಿಳೆಯಲ್ಲಿ ಕೊರೊನಾ ವೈರಸ್ 216 ದಿನಗಳ ಕಾಲ ಇತ್ತು ಎಂಬ ಸಂಗತಿ ಬಹಿರಂಗವಾಗಿದೆ. ಈ ಅವಧಿಯಲ್ಲಿ ವೈರಸ್ 30ಕ್ಕೂ ಹೆಚ್ಚು ಬಾರಿ ರೂಪಾಂತರವಾಗಿತ್ತು ಎಂದು ವರದಿ ತಿಳಿಸಿದೆ. ಸದ್ಯ ಈ ವರದಿಯ ಪರಿಶೀಲನೆಯನ್ನು ತಜ್ಞರು ಮುಂದುವರಿಸಿದ್ದಾರೆ. 36ರ ಹರೆಯದ ಈ ಮಹಿಳೆ ದಕ್ಷಿಣ ಆಫ್ರಿಕಾ ಮೂಲದವರಾಗಿದ್ದು ಹೆಸರು ಗೌಪ್ಯವಾಗಿಡಲಾಗಿದೆ.

ಭಾರತಕ್ಕೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಅಮೆರಿಕ ಅಧ್ಯಕ್ಷ ಬೈಡನ್..!ಭಾರತಕ್ಕೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಅಮೆರಿಕ ಅಧ್ಯಕ್ಷ ಬೈಡನ್..!

ಈ ರೂಪಾಂತರಿ ಕೊರೊನಾ ವೈರಸ್ 13 ಪ್ರೋಟೀನ್ ಮುಳ್ಳುಗಳನ್ನು ಹೊಂದಿದ್ದು ದೇಹದಲ್ಲಿ ಉತ್ಪತ್ತಿಯಾಗುವ ರೋಗನಿರೋಧಕ ಶಕ್ತಿಯಿಂದ ಪಾಲಾಗಲು ಸಹಕಾರಿಯಾಗುತ್ತದೆ ಎಂದು ಈ ಅಧ್ಯಯನ ತಿಳಿಸಿದೆ.

"ಹೆಚ್ಚಿನ ಜನರು ಈ ವೈರಸ್‌ನಿಂದ ಬೇಗನೆ ಪರಿಣಾಮಕಾರಿಯಾಗು ಗುಣಮುಖರಾಗಿದ್ದಾರೆ. ಆದರೆ ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಲ್ಲಿ ದೀರ್ಘಕಾಲ ಸೋಂಕು ಉಳಿದುಕೊಂಡಿರುವುದು ಪತ್ತೆಯಾಗಿದೆ. ಈಗ ಹೆಚ್‌ಐವಿ ಸೋಂಕಿತ ವ್ಯಕ್ತಿಯ ದೇಹದಲ್ಲಿ ಆರು ತಿಂಗಳಿಗೂ ಹೆಚ್ಚಿನ ಅವಧಿಯ ಸೋಂಕನ್ನು ನಾವು ಪತ್ತೆಹಚ್ಚಿದ್ದೇವೆ" ಎಂದು ಅಧ್ಯಯನದಲ್ಲಿ ಭಾಗಿಯಾದ ತಜ್ಞರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಮಹಿಳೆಯಲ್ಲಿ ರೂಪಾಂತರವಾದ ವೈರಸ್ ಇತರರಿಗೆ ವರ್ಗಾವಣೆಯಾಗಿರುವ ಬಗ್ಗೆ ಈ ಅಧ್ಯಯನದಲ್ಲಿ ಯಾವುದೇ ಸ್ಪಷ್ಟತೆಗಳು ಇಲ್ಲ.

ಹೆಚ್‌ಐವಿ ಸೋಂಕಿಗೆ ತುತ್ತಾದವರು ರೋಗನಿರೋಧಕ ಸಮಸ್ಯೆಯಿಂದ ಬಳಲುವ ಕಾರಣ ಕೊರೊನಾ ಸೋಂಕಿಗೆ ತುತ್ತಾದವರು ಈ ಸೋಂಕಿಗೆ ಬಲಿಯಾಗುವ ಪ್ರಮಾಣ ಇತರರು ಕೊರೊನಾ ರೋಗದಿಂದಾಗಿ ಸಾವನ್ನಪ್ಪುವ ಪ್ರಮಾಣಕ್ಕಿಂತ 2.75 ಶೇಕಡಾ ಹೆಚ್ಚಿರುತ್ತದೆ. ಆದರೆ ಈ ಪ್ರಕರಣದಲ್ಲಿ ಮಹಿಳೆ ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದಾರೆ.

English summary
A HIV-positive lady had coronavirus for 216 days and mutated 30 times in 6 months, according to a ಶtudy. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X