Narendra Modi: ಕಾರಿನ ಪ್ಲೇಟ್‌ನಲ್ಲಿ ಮೋದಿ ಹೆಸರು; ಅಮೆರಿಕದಲ್ಲಿ ಭಾರತೀಯನ ವಿಶೇಷ ಅಭಿಮಾನ
ಅಮೇರಿಕಾ, ಜೂನ್ 17: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಮೇರಿಕಾ ಭೇಟಿಗೆ ಕೆಲವು ದಿನಗಳ ಮೊದಲು, ಭಾರತೀಯ ವಲಸಿಗರು ತಮ್ಮ ತಾಯ್ನಾಡಿನಿಂದ ತಮ್ಮ ನಾಯಕನನ್ನು ಸ್ವಾಗತಿಸಲು ತನ್ನದೇ ಆದ ರೀತಿಯಲ್ಲಿ ವಿಶೇಷ ತಯಾರಿ ನಡೆಸುತ್ತಿದ್ದಾರೆ.
ಅಮೇರಿಕದ ಮೇರಿಲ್ಯಾಂಡ್‌ನಲ್ಲಿ ಪ್ರಧಾನಿ ಮೋದಿ ಅಭಿಮಾನಿಯೊಬ್ಬರು ತಮ್ಮ ಕಾರಿನ ಮೇಲೆ 'NMODI' ನಂಬರ್ ಪ್ಲೇಟ್ ಹೆಸರನ್ನು ಬರೆಸಿಕೊಂಡಿರುವುದನ್ನ ANI ವೀಡಿಯೋವನ್ನ ಹಂಚಿಕೊಂಡಿದೆ. ಪ್ರಧಾನಿ ಮೋದಿ ಅಭಿಮಾನಿಯೊಬ್ಬರು ಎನ್‍ಮೋದಿ ಎಂದು ತಮ್ಮ ಕಾರಿನ ನಂಬರ್ ಬದಲಿಸಿಕೊಂಡಿದ್ದಾರೆ. ನಮೋ ಮೋದಿ ಎಂಬ ಅರ್ಥ ನೀಡುವಂತೆ ತಮ್ಮ ಕಾರಿನ ನಂಬರ್ ಪ್ಲೇಟ್ ಬದಲಿಸಿಕೊಂಡಿದ್ದಾರೆ. ನಂಬರ್ ಇರುವ ಇಡೀ ಜಾಗದಲ್ಲಿ ಮೋದಿ ಎಂದಿದೆ. ಅದರ ಮೇಲೆ ಚಿಕ್ಕದಾಗಿ ನಂಬರ್ ಕಾಣಸಿಗುತ್ತದೆ.

ನಾನು NMODI ನಂಬರ್ ಪ್ಲೇಟ್ ಅನ್ನು 2016 ನವೆಂಬರ್ ನಲ್ಲಿ ತೆಗೆದುಕೊಂಡೆ. ನರೇಂದ್ರ ಮೋದಿ ನನಗೆ ಸೂರ್ತಿ. ಅವರು ರಾಷ್ಟ್ರಕ್ಕಾಗಿ, ಸಮಾಜಕ್ಕಾಗಿ, ಜಗತ್ತಿಗೆ ಏನಾದರೂ ಒಳ್ಳೆಯದನ್ನು ಮಾಡಲು ನನ್ನನ್ನು ಪ್ರೇರೇಪಿಸುತ್ತಾರೆ. ಪ್ರಧಾನಿ ಮೋದಿ ಇಲ್ಲಿಗೆ ಬರುತ್ತಿದ್ದಾರೆ ಆದ್ದರಿಂದ ನಾನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಮೋದಿ ಅಭಿಮಾನಿ ರಾಘವೇಂದ್ರ ಹೇಳಿದ್ದಾರೆ.
#WATCH | A 'fan' of PM Narendra Modi flaunts "NMODI" car number plate in Maryland, USA pic.twitter.com/AO5WRwdGoa
— ANI (@ANI) June 17, 2023
ಪ್ರಧಾನಿ ಮೋದಿಯವರ ಅಮೇರಿಕಾ ಭೇಟಿಗೆ ಅಂಗವಾಗಿ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಶ್ವೇತಭವನದ ಹೊರಗೆ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ನ್ಯೂಜೆರ್ಸಿಯಲ್ಲಿ ನೆಲೆಸಿರುವ ಭಾರತೀಯ ಪ್ರಜೆ ಜೆಸಲ್ ನಾರ್ ಅವರು, ತ್ರಿವರ್ಣ ಧ್ವಜವನ್ನು ನೋಡುವುದು ನಿಜವಾಗಿಯೂ ಗೌರವ ಮತ್ತು ಹೆಮ್ಮೆ. ನಾನು ತ್ರಿವರ್ಣ ಧ್ವಜವನ್ನು ಹೊತ್ತುಕೊಂಡು ನನ್ನ ಕೆಲಸದ ಉದ್ದೇಶಕ್ಕಾಗಿ ಯುನೈಟೆಡ್ ಸ್ಟೇಟ್ಸ್‍ನಾದ್ಯಂತ ಹೋಗುತ್ತೇನೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ, ಜೂನ್ 2024 ರವರಿಗೆ ಯುಎಸ್ ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಜೊತೆಗೆ ಹಲವಾರು ಅಮೆರಿಕನ್ ರಾಜಕಾರಣಿಗಳು, ಪ್ರಮುಖ ನಾಗರಿಕರು ಮತ್ತು ವಲಸೆಗಾರರ ಜೊತೆ ಚರ್ಚೆ ನಡೆಸಲಿದ್ದಾರೆ.

ಏತನ್ಮಧ್ಯೆ, ಶ್ವೇತಭವನದ ದಕ್ಷಿಣ ಲಾನ್‍ನಲ್ಲಿ, ಪ್ರಧಾನಿ ಮೋದಿಯ ಔಪಚಾರಿಕ ಸ್ವಾಗತಕ್ಕಾಗಿ ಅಭ್ಯಾಸ ನಡೆಯುತ್ತಿದೆ. ಭಾರತದ ಪ್ರಧಾನಿಯವರ ಸ್ವಾಗತ ಸಮಾರಂಭಕ್ಕಾಗಿ ಮಕ್ಕಳು ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ. ಅಮೆರಿಕ ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ಇನ್ನೂ ಜೂನ್ 21 ರಂದು ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವವನ್ನು ನ್ಯೂಯಾರ್ಕ್‍ನಲ್ಲಿ ನಡೆಸಲಿದ್ದಾರೆ.












Click it and Unblock the Notifications