ಪಾಕಿಸ್ತಾನದಲ್ಲಿ ಬಾಂಬ್ ದಾಳಿ: ಸಾವಿನ ಸಂಖ್ಯೆ 128 ಕ್ಕೆ ಏರಿಕೆ

ಪಾಕಿಸ್ತಾನದ ಬಲೂಚಿಸ್ತಾನ್ ಮಸ್ತೂಂಗ್ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಆತ್ಮಹತ್ಯಾ ದಾಳಿಯಲ್ಲಿ ಸಾವಿಗೀಡಾದವರ ಸಂಖ್ಯೆ 128 ಕ್ಕೆ ಏರಿದೆ. ಗಾಯಾಳುಗಳ ಸಂಖ್ಯೆ ನೂರೈವತ್ತು ದಾಟಿದೆ. ಈ ಬಗ್ಗೆ ಪಾಕಿಸ್ತಾನದ ಡಾನ್ ನ್ಯೂಸ್ ಟಿವಿಗೆ ಆ ಪ್ರಾಂತ್ಯದ ಆರೋಗ್ಯ ಸಚಿವ ಫೈಜ್ ಕಾಕರ್ ಖಚಿತ ಪಡಿಸಿದ್ದಾರೆ.

ಆಮಕ್ ನ್ಯೂಸ್ ಸಂಸ್ಥೆಯ ವರದಿ ಪ್ರಕಾರ, ಇಸ್ಲಾಮಿಕ್ ಸ್ಟೇಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಬಲೂಚಿಸ್ತಾನ್ ಅವಾಮಿ ಪಕ್ಷದ ಅಭ್ಯರ್ಥಿ ಸಿರಾಜ್ ಆಯೋಜಿಸಿದ್ದ ಸಭೆಯನ್ನು ಗುರಿ ಮಾಡಿಕೊಂಡು ಈ ದಾಳಿ ನಡೆಸಲಾಗಿದೆ. ಈ ರಾಜಕೀಯ ಸಭೆ ನಡೆಯುತ್ತಿದ್ದ ಕಾಂಪೌಂಡ್ ನ ಮಧ್ಯದಲ್ಲೇ ಆತ್ಮಹತ್ಯಾ ಬಾಂಬರ್ ಸ್ಫೋಟ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.

ಮೀರ್ ಸಿರಾಜ್ ರೈಸಾನಿಗೆ ಗಂಭೀರವಾದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕ್ವೆಟ್ಟಾಗೆ ಕಳುಹಿಸಲಾಗಿದೆ. ಬಲೂಚಿಸ್ತಾನದ ನಾಗರಿಕ ರಕ್ಷಣಾ ಪಡೆ ನಿರ್ದೇಶಕ ಅಸ್ಲಾಂ ತರೀನ್ ಪ್ರಕಾರ, ಇದು ಆತ್ಮಹತ್ಯಾ ದಾಳಿ. ಎಂಟರಿಂದ ಹತ್ತು ಕೇಜೊ ಸ್ಫೋಟಕ ಹಾಗೂ ಬಾಲ್ ಬೇರಿಂಗ್ಸ್ ಗಳನ್ನು ದಾಳಿಗಾಗಿ ಬಳಸಲಾಗಿದೆ.

Bomb blast

ಜುಲೈ ಇಪ್ಪತ್ತೈದನೇ ತಾರೀಕು ಪಾಕಿಸ್ತಾನದಲ್ಲಿ ಚುನಾವಣೆ ಇದೆ. ಅದಕ್ಕೂ ಮುನ್ನ ನಡೆದಿರುವ ಭೀಕರ ರಾಜಕೀಯ ದಾಳಿ ಇದಾಗಿದೆ. ಇದಕ್ಕೂ ಮುನ್ನ ಖೈಬರ್ ಪಖ್ತುನ್ ವಾ ಮುಖ್ಯಮಂತ್ರಿ ಅಕ್ರಮ್ ಖಾನ್ ದುರಾನ್ ಬೆಂಗಾವಲು ಪಡೆಯ ಮೇಲೆ ಬನ್ನುನಲ್ಲಿ ದಾಳಿಯಾಗಿತ್ತು. ದುರಾನಿ ಉಳಿದುಕೊಂಡಿದ್ದರು. ಆದರೆ ದಾಳಿಯಲ್ಲಿ ನಾಲ್ವರು ಮೃತಪಟ್ಟು, ಮೂವತ್ತೆರಡು ಮಂದಿಗೆ ಗಾಯಗಳಾದವು.

ಇದೇ ತಿಂಗಳಲ್ಲಿ ನಡೆದ ಆತ್ಮಹತ್ಯಾ ದಾಳಿ ಹಾಗೂ ಬಾಂಬ್ ದಾಳಿಗಳಲ್ಲಿ ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ಅದೇ ರೀತಿ ಗಾಯಾಳುಗಳ ಸಂಖ್ಯೆಯೂ ಹೆಚ್ಚಿದೆ. ಪಾಕಿಸ್ತಾನದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಪ್ರಚಾರದ ವೇಳೆ ಹೆಚ್ಚಿನ ರಕ್ಷಣೆ ನೀಡಬೇಕು ಎಂದು ಆಗ್ರಹ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+