ಚೀನಾದಲ್ಲಿ 7ರಷ್ಟು ತೀವ್ರತೆಯ ಪ್ರಬಲ ಭೂಕಂಪ
ಬೀಜಿಂಗ್, ಆಗಸ್ಟ್ 8: ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದ ಏಳರಷ್ಟು ತೀವ್ರತೆಯ ಭೂಕಂಪದಲ್ಲಿ ಕನಿಷ್ಠ ನಾಲ್ಕು ಮಂದಿ ಮೃತಪಟ್ಟು, ಮೂವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.
ಯುಎಸ್ ಜಿಯಾಲಾಜಿಕಲ್ ಸರ್ವೇ ಪ್ರಕಾರ 6.5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಚೀನಾ ವರದಿಗಳ ಪ್ರಕಾರ 7ರಷ್ಟು ತೀವ್ರತೆಯ ಕಂಪನವಾಗಿದೆ. ಇಲ್ಲಿರುವ ಪ್ರಸಿದ್ಧ ಪ್ರವಾಸಿ ಕೇಂದ್ರ ಜಿಯುಝಿಗೌ ಅನ್ನು ಮಂಗಳವಾರ ಮುಚ್ಚಲಾಗಿದ್ದು, ಬುಧವಾರ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯರಾದ ಯು ಕಿನ್ ಪ್ರಕಾರ, ಭೂ ಕಂಪನ ಸಂಭವಿಸಿದ್ದರಿದ ಈ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಫೋನ್ ಸಂಪರ್ಕ ಕಡಿತವಾಗಿದೆ. ಕೆಲವೆಡೆ ಕಟ್ಟಡಗಳಿಗೆ ಹಾನಿಯಾಗಿವೆ. ಅವುಗಳ ಫೋಟೋಗಳು ಸಹ ಅಲ್ಲಲ್ಲಿ ಹರಿದಾಡುತ್ತಿವೆ. ಭೂಕಂಪದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.












Click it and Unblock the Notifications