• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಿಬಿಯಾದಲ್ಲಿ ಅಪಹೃತರಾದ 7 ಭಾರತೀಯರು ಸುರಕ್ಷಿತವಾಗಿದ್ದಾರೆ

|

ತ್ರಿಪೋಲಿ, ಅಕ್ಟೋಬರ್ 08: ಲಿಬಿಯಾದಲ್ಲಿ ಅಪಹೃತರಾದ 7 ಮಂದಿ ಭಾರತೀಯರು ಸುರಕ್ಷಿತವಾಗಿದ್ದಾರೆ. ಅವರನ್ನು ಬಿಡುಗಡೆಗೊಳಿಸುವ ಮಾತುಕತೆ ನಡೆಯುತ್ತಿದೆ ಎಂದು ಭಾರತೀಯ ವಿದೇಶಾಂಗ ತಿಳಿಸಿದೆ.

ವಿದೇಶಾಂಗ ಇಲಾಖೆ ವಕ್ತಾರ ಶ್ರೀವತ್ಸ ಮಾತನಾಡಿ, ಲಿಬಿಯಾದಲ್ಲಿ ಭಾರತೀಯ ಸಿಬ್ಬಂದಿ ಕೆಲಸ ಮಾಡುತ್ತಿದ್ದ ತೈಲ ಕಂಪನಿಯ ಸದಸ್ಯರು ಈಗಾಗಲೇ ಅಪಹರಣಕಾರರೊಂದಿಗೆ ಚರ್ಚೆ ನಡೆಸಿದ್ದಾರೆ.

ಲಿಬಿಯಾದ ಭಾರತೀಯರ ಅಪಹರಣ, ಉತ್ತರ ಪ್ರದೇಶದಲ್ಲಿ ದೂರು

ಹಾಗೆಯೇ ಚಿತ್ರಗಳ ಮೂಲಕ ಅವರು ಸುರಕ್ಷಿತವಾಗಿರುವುದನ್ನು ಖಾತರಿಪಡಿಸಿಕೊಳ್ಳಲಾಗಿದೆ. ಸ್ಥಳೀಯ ತೈಲ ಕಂಪನಿ, ಲಿಬಿಯಾ ಅಧಿಕಾರಿಗಳೊಂದಿಗೆ ಈ ಕುರಿತು ಸತತ ಚರ್ಚೆ ನಡೆಸಲಾಗುತ್ತಿದೆ. ಶೀಘ್ರವೇ ಭಾರತೀಯರನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಈ ನಿಟ್ಟಿನಲ್ಲಿ ಭಾರತ ಸರ್ಕಾರ ಪ್ರಯತ್ನ ಮುಂದುವರೆಸಿದೆ. ಹಾಗೂ ಆ ಏಳು ಮಂದಿ ಕುಟುಂಬದವರ ಜತೆಯೂ ಮಾತುಕತ ನಡೆಸಿರುವುದಾಗಿ ವಿದೇಶಾಂಗ ಇಲಾಖೆ ತಿಳಿಸಿದೆ.

ಲಿಬಿಯಾದಲ್ಲಿ ಸ್ಥಳೀಯ ಬಂಡಾಯಕೋರರ ಗುಂಪೊಂದು ಭಾರತೀಯ ಮೂಲದ 7 ಜನರನ್ನು ಅಪಹರಿಸಿದೆ. ಅವರನ್ನು ಬಿಡುಗಡೆ ಮಾಡಬೇಕಾದರೆ 20 ಸಾವಿರ ಡಾಲರ್‌ಗೆ ನೀಡುವಂತೆ ಒತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಪಹರಣವಾದವರನ್ನು ಬಿಹಾರ, ಆಂಧ್ರಪ್ರದೇಶ, ಉತ್ತರ ಪ್ರದೇಶದ ಮಹಾರಾಜ ಗಂಜ್, ಕುಶಿನಗರ , ದಿಯೋರಿಯಾ, ಗುಜರಾತಿನ ಅಮ್ರೇಲಿ ನಿವಾಸಿಗಳು ಎಂದು ಗುರುತಿಸಲಾಗಿದೆ.

English summary
Seven Indian nationals were kidnapped in Libya last month and the government has been trying to ensure their release, the Ministry of External Affairs said today.Seven Indian nationals were kidnapped in Libya last month and the government has been trying to ensure their release, the Ministry of External Affairs said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X