ಅಮೆರಿಕದ ಹೊಂಡರಸ್ ರಿಪಬ್ಲಿಕ್ ನಲ್ಲಿ 7.8 ತೀವ್ರತೆಯ ಭೂಕಂಪ, ಸುನಾಮಿ ಭೀತಿ!
ಹೊಂಡರಸ್, ಜನವರಿ 10: ಮಧ್ಯ ಅಮೆರಿಕದಲ್ಲಿರುವ ಹೊಂಡರಸ್ ಗಣರಾಜ್ಯದ ಕೆರೆಬಿಯನ್ ಸಮುದ್ರದಾಳದಲ್ಲಿ 7.8 ತೀವ್ರತೆಯಲ್ಲಿ ಭೂಮಿ ಕಂಪಿಸಿದ ಪರಿಣಾಮ ಸುನಾಮಿ ಭೀತಿ ಆವರಿಸಿದೆ.
ಜ.9ರ ರಾತ್ರಿ (ಭಾರರತೀಯ ಕಾಲಮಾನದ ಪ್ರಕಾರ ಬುಧವಾರ,ಜ.10 ಬೆಳಿಗ್ಗೆ 5:30) ಈ ಭೂಕಂಪ ಸಂಭವಿಸಿದ್ದು, ಇದುವರೆಗೂ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಭೂಕಂಪ ಸುಮಾರು 200 ಮೈಲು ವ್ಯಾಪ್ತಿಯನ್ನು ಆವರಿಸಿತ್ತು.

ಕೆಮನ್ ದ್ವೀಪ, ಜಮೈಕಾ, ಮೆಕ್ಸಿಕೋ, ಹೊಂಡರಸ್, ಕ್ಯೂಬಾ, ಬೆಲಿಜ್, ಕೋಸ್ಟಾ ರಿಕಾ, ಪನಾಮಾ ಸೇರಿದಂತೆ ಹಲವೆಡೆ ಸುನಾಮಿ ಸಂಭವಿಸಬಹುದಾದ ಮುನ್ನೆಚ್ಚರಿಕೆಯನ್ನು ಇಲ್ಲಿನ ಹವಾಮಾನ ಇಲಾಖೆಗಳು ನೀಡಿವೆ.












Click it and Unblock the Notifications