Earthquake: ಫಿಲಿಪೈನ್ಸ್‌ನ ಸೆಲೆಬ್ಸ್ ಸಮುದ್ರದಲ್ಲಿ 7.1 ತೀವ್ರತೆಯ ಭೂಕಂಪ- ಸುನಾಮಿ ಆತಂಕ!
ಫಿಲಿಪೈನ್ಸ್‌ನ ಮಿಂಡನಾವೊದ ಮೊರೊ ಗಲ್ಫ್‌ನಲ್ಲಿ 7.1 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಇದರಿಂದಾಗಿ ಸುನಾಮಿ ಆತಂಕ ಶುರುವಾಗಿದೆ.
ಜುಲೈ 11, 2024ರ ಗುರುವಾರ ಫಿಲಿಪೈನ್ಸ್‌ನ ಸಾಕ್ಸ್‌ಸರ್ಗೆನ್‌ನಿಂದ 106 ಕಿಮೀ (66 ಮೈಲಿ) ದೂರದಲ್ಲಿರುವ ಸೆಲೆಬ್ಸ್ ಸಮುದ್ರದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು 620 ಕಿಮೀ (385 ಮೈಲಿ) ಆಳದಲ್ಲಿ ಸಂಭವಿಸಿದೆ. ಅಲ್ಲದೆ ಈ ಪ್ರದೇಶದಲ್ಲಿ ವ್ಯಾಪಕವಾಗಿ ಭೂಮಿ ನಡುಗಿರುವ ಅನುಭವವಾಗಿದೆ.

ಈ ಭೂಕಂಪದಿಂದ ಯಾವುದೇ ಗಮನಾರ್ಹ ಹಾನಿ ಅಥವಾ ಪ್ರಭಾವವನ್ನು ನಿರೀಕ್ಷಿಸಲಾಗಿಲ್ಲ. ಯಾವುದೇ ಸುನಾಮಿಯ ಎಚ್ಚರಿಕೆಯನ್ನು ನೀಡಲಾಗಿಲ್ಲ ಎಂದು ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ಹಂಚಿಕೊಂಡಿದೆ.
ಕಳೆದ ದಿನ ಮಹಾರಾಷ್ಟ್ರದಲ್ಲಿ ಭೂಕಂಪ
ಮಹಾರಾಷ್ಟ್ರ(Maharashtra)ದ ಹಿಂಗೋಲಿಯಲ್ಲಿ ಬುಧವಾರ (ಜುಲೈ 10) ಬೆಳಗ್ಗೆ ಭೂಕಂಪ(Earthquake)ದ ಅನುಭವವಾಗಿದೆ. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.5 ಎಂದು ಅಳೆಯಲಾಗಿದೆ. ಬೆಳಗ್ಗೆ 7.14ಕ್ಕೆ ಈ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಈ ಮಾಹಿತಿಯನ್ನು ನೀಡಿದೆ.
ಬೆಳಗ್ಗೆ 6.08ಕ್ಕೆ ಮೊದಲ ಭೂಕಂಪನ ಸಂಭವಿಸಿದ್ದು, 6.19ಕ್ಕೆ ಎರಡನೇ ಕಂಪನದ ಅನುಭವವಾಗಿದೆ. ಮೊದಲ ಭೂಕಂಪದ ತೀವ್ರತೆ 4.5 ದಾಖಲಾಗಿದ್ದರೆ, ಎರಡನೇ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.6 ಎಂದು ಅಳೆಯಲಾಗಿದೆ. ಭೂಕಂಪನದ ಅನುಭವವಾದಾಗ ಹೆಚ್ಚಿನ ಜನರು ಮಲಗಿದ್ದರು.












Click it and Unblock the Notifications