ಶಿಕ್ಷಕಿಗೆ ಗುಂಡಿಕ್ಕಿದ 6 ವರ್ಷದ ಬಾಲಕ: ಇದು ಜಗತ್ತಿನ ಇತಿಹಾಸದಲ್ಲೇ ಮೊದಲ ಘಟನೆ- ಓದಿ
ವಾಷಿಂಗ್ಟನ್, ಜನವರಿ 7: ಆರು ವರ್ಷದ ಬಾಲಕನೊಬ್ಬ ಪ್ರಾಥಮಿಕ ಶಾಲೆಯ ತರಗತಿಯೊಂದರಲ್ಲಿ ಶುಕ್ರವಾರ ಗುಂಡು ಹಾರಿಸಿದ್ದಾರೆ. ಇದರ ಪರಿಣಾಮವಾಗಿ ಓರ್ವ ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೆರಿಕದ ಪೂರ್ವ ಭಾಗದ ವರ್ಜೀನಿಯಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಪೋರ್ಟ್ ನ್ಯೂಸ್‌ನ ರಿಚ್‌ನೆಕ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ಘಟನೆಯಲ್ಲಿ ಯಾವುದೇ ವಿದ್ಯಾರ್ಥಿಗಳು ಗಾಯಗೊಂಡಿಲ್ಲ.
'ಗುಂಡು ಹಾರಿಸದ ಬಾಲಕ ಆರು ವರ್ಷದ ವಿದ್ಯಾರ್ಥಿ. ಆತ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ' ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಸ್ಟೀವ್ ಡ್ರೂ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ

'ಇದು ಆಕಸ್ಮಿಕ ಗುಂಡಿನ ದಾಳಿಯಲ್ಲ' ಎಂಬ ಆಘಾತಕಾರಿ ವಿಚಾರವನ್ನೂ ಸ್ಟೀವ್ ಡ್ರೂ ಹೊರಹಾಕಿದ್ದಾರೆ.
ಸಂತ್ರಸ್ತೆ 30 ವರ್ಷದ ಶಿಕ್ಷಕಿಯಾಗಿದ್ದು, ಆಕೆ ಜೀವ ಅಪಾಯದಲ್ಲಿದೆ. ಆಕೆ ಜೀವನ್ಮರದ ನಡುವೆ ಹೋರಾಡುತ್ತಿದ್ದೆ ಎಂದು ಪೊಲೀಸರು ತಿಳಿಸಿದ್ದಾರೆ.
'ನಾನು ಆಘಾತಕ್ಕೊಳಗಾಗಿದ್ದೇನೆ. ಇದರಿಂದ ಭಾರೀ ಹತಾಶೆಗೊಂಡಿದ್ದೇನೆ' ಎಂದು ನಗರದ ಶಾಲಾ ಮುಖ್ಯ ಶಿಕ್ಷಕ ಜಾರ್ಜ್ ಪಾರ್ಕರ್ ಹೇಳಿದ್ದಾರೆ.
'ಬಾಲಕರು ಹಾಗೂ ಯುವಕರಿಗೆ ಬಂದೂಕುಗಳು ಲಭ್ಯವಾಗದಂತೆ ನೋಡಿಕೊಳ್ಳಲು ನಮಗೆ ಸಮುದಾಯದ ಬೆಂಬಲ ಬೇಕು' ಎಂದೂ ಅವರು ತಿಳಿಸಿದ್ದಾರೆ.
'ಇಂದು ನಮ್ಮ ವಿದ್ಯಾರ್ಥಿಗಳು ಬಂದೂಕು ಹಿಂಸಾಚಾರದ ಪಾಠವನ್ನು ಪಡೆದುಕೊಂಡಿದ್ದಾರೆ. ಶೈಕ್ಷಣಿಕ ವಾತಾವರಣವನ್ನು ಮಾತ್ರವಲ್ಲದೆ ಕುಟುಂಬ, ಸಮುದಾಯಕ್ಕೆ ಅಡ್ಡಿಪಡಿಸಲು ಬಂದೂಕುಗಳು ಹೇಗೆ ಬಳಕೆಯಾಗುತ್ತಿವೆ' ಎಂಬುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
'ನಮ್ಮ ಸಿಬ್ಬಂದಿ ಮತ್ತು ನಮ್ಮ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ. ಸೋಮವಾರ ಶಾಲೆಯನ್ನು ಮುಚ್ಚಲಾಗುವುದು' ಎಂದು ಡಾ. ಪಾರ್ಕರ್ ಹೇಳಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆ ಪೊಲೀಸರು ಶಾಲೆಯನ್ನು ಸುತ್ತುವರಿದಿದ್ದಾರೆ. ಆಗ ಅಲ್ಲಿ ಅವ್ಯವಸ್ಯೆ ಉಂಟಾಗಿದೆ. ಮಕ್ಕಳು ಭಯಭೀತರಾಗಿ ಗೊಂಡಲಕ್ಕೀಡಾಗಿದ್ದಾರೆ. ಹತ್ತಾರು ಪೋಲಿಸರು ಈ ಶಾಲೆಯಲ್ಲಿ ಗಸ್ತು ತಿರುಗುತ್ತಿರುವುದು ವಿಡಿಯೊ ಹಾಗೂ ಫೋಟೊಗಳಲ್ಲಿ ಸೆರೆಯಾಗಿದೆ ಎಂದು 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ಎಲ್ಲ ಮಕ್ಕಳು ಹಾಗೂ ಶಿಕ್ಷಕರನ್ನು ತ್ವರಿತವಾಗಿ ಜಿಮ್ನಾಷಿಯಂಗೆ ಕರೆತರಲು ಅಧಿಕಾರಿಗಳು ಕರೆತರಲು ಯಶಸ್ವಿಯಾಗಿದ್ದಾರೆ.

ಈ ಪ್ರಕರಣವನ್ನು ಯಾವ ಕಾನೂನಿನ ಅಡಿಯಲ್ಲಿ ತರುವುದು ಎಂಬ ವಿಚಾರದ ಬಗ್ಗೆ ಅಧಿಕಾರಿಗಳು ವಕೀಲರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕದ ಶಾಲೆಗಳಲ್ಲಿ ಗುಂಡಿನ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಇದು ಅಮೆರಿಕವನ್ನು ತೀವ್ರ ಆತಂಕದಲ್ಲಿ ದೂಡಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಟೆಕ್ಸಾಸ್‌ನ ಉವಾಲ್ಡೆಯಲ್ಲಿ 18 ವರ್ಷ ವಯಸ್ಸಿನ ಬಂದೂಕುಧಾರಿಯೊಬ್ಬ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಕೊಂದು ದುರಂತ ನಡೆದಿತ್ತು.
ಕಳೆದ ವರ್ಷ ಅಮೆರಿಕದಲ್ಲಿ ಸುಮಾರು 44,000 ಬಂದೂಕು ದಾಳಿ ಸಂಬಂಧಿತ ಸಾವುಗಳು ಸಂಭವಿಸಿವೆ. 6 ವರ್ಷದ ಬಾಲಕನೊಬ್ಬ ಉದ್ದೇಶಪೂರ್ವಕವಾಗಿ ಬೇರೊಬ್ಬರ ಮೇಲೆ ಗುಂಡು ಹಾರಿಸಿದ್ದು, ಜಗತ್ತಿನ ಇತಿಹಾಸದಲ್ಲಿ ಮೊದಲ ಬಾರಿ ನಡೆದಿದೆ ಎಂದು ಹೇಳಲಾಗುತ್ತಿದೆ.
ರಿಚ್‌ಮಂಡ್‌ನ ಆಗ್ನೇಯಕ್ಕೆ ಸುಮಾರು 70 ಮೈಲುಗಳಷ್ಟು ದೂರದಲ್ಲಿರುವ ನ್ಯೂಪೋರ್ಟ್ ನ್ಯೂಸ್ ನಗರದಲ್ಲಿ 180,000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ.












Click it and Unblock the Notifications