ವೈಮಾನಿಕ ಪ್ರದರ್ಶನದಲ್ಲಿ ಮಿಲಿಟರಿ ವಿಮಾನಗಳ ಡಿಕ್ಕಿ: 6 ಮಂದಿ ಸಾವು
ನ್ಯೂಯಾರ್ಕ್, ನವೆಂಬರ್ 13: ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ಬಿ 17 ಹೆವಿ ಬಾಂಬರ್ ಮಿಲಿಟರಿ ವಿಮಾನವು ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, ಆರು ಜನರು ಸಾವನ್ನಪ್ಪಿದ್ದಾರೆ.
ಅಮೆರಿಕದ ಪ್ರೀಮಿಯರ್ ವರ್ಲ್ಡ್ ವಾರ್ 2 ಏರ್‌ಶೋ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. 40ಕ್ಕೂ ಹೆಚ್ಚು ಅತಿಥಿಗಳು ಎರಡನೇ ವಿಶ್ವ ಯುದ್ಧದ ಏರ್ ಶೋ ವಿಮಾನಗಳನ್ನು ನೋಡಬೇಕಿತ್ತು ಎಂದು ಏರ್ ಫೋರ್ಸ್‌ನ ವಕ್ತಾರರಾದ ಲೇಹ್ ಬ್ಲಾಕ್ ಹೇಳಿದ್ದಾರೆ.
ಸ್ಥಳದಲ್ಲಿದ್ದ ಜನರು ಹೇಳುವಂತೆ ದೊಡ್ಡ ಬಿ 17 ಬಾಂಬರ್ ವಿಮಾನವು ನೆಲದಿಂದ ತುಂಬಾ ಎತ್ತರವಾಗಿರದೆ ಸರಳ ರೇಖೆಯಲ್ಲಿ ಹಾರುತ್ತಿತ್ತು. ಆದರೆ ಚಿಕ್ಕ ವಿಮಾನ ಬೆಲ್ ಪಿ 63 ಕಿಂಗ್‌ಕೋಬ್ರಾ ವಿಮಾನವು ಎಡದಿಂದ ತನ್ನ ದಿಕ್ಕಿನಲ್ಲಿ ಚಲಿಸಿತು. ಚಿಕ್ಕ ವಿಮಾನವು ಎರಡನೇ ವಿಶ್ವ ಸಮರ ಯುಗದ ವಿಮಾನವಾದ ಬಿ 17ನ ಮೇಲೆ ಅಪ್ಪಳಿಸಿತು. ಆಗ ತಕ್ಷಣವೇ ಎರಡು ವಿಮಾನಗಳು ಡಿಕ್ಕಿ ಹೊಡೆದವು ಎಂದು ತಿಳಿಸಿದ್ದಾರೆ.

ವಿಮಾನಗಳು ಡಿಕ್ಕಿಯಾಗುವ ದೃಶ್ಯಗಳು ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ವಿಮಾನಗಳು ಡಿಕ್ಕಿಯಾಗಿ ಕೆಳಗೆ ಬೀಳುವ ಮೊದಲು ದೊಡ್ಡ ಬೆಂಕಿ ಮತ್ತು ಕಪ್ಪು ಹೊಗೆ ಕಂಡು ಬಂದಿದೆ.
ಮೇಯರ್ ಜಾನ್ಸನ್ ಟ್ವೀಟ್ ಮಾಡಿ, ನಿಮ್ಮಲ್ಲಿ ಅನೇಕರು ಈಗ ನೋಡುತ್ತಿರುವಂತೆ ಇಂದು ನಮ್ಮ ವೈಮಾನಿಕ ಪ್ರದರ್ಶನದ ಸಮಯದಲ್ಲಿ ಭೀಕರ ದುರಂತ ನಡೆದಿದೆ. ಈ ಸಮಯದಲ್ಲಿ ಹೆಚ್ಚಿನ ವಿವರಗಳು ತಿಳಿಯಲಿಲ್ಲ. ಇದರ ಬಗ್ಗೆ ಇನ್ನಷ್ಟು ಮಾಹಿತಿಗಳು ತನಿಖೆಯ ನಂತರ ಗೊತ್ತಾಗಬೇಕಿದೆ ಎಂದು ಬರೆದಿದ್ದಾರೆ.
ಬೋಯಿಂಗ್ ಬಿ 17 ಮತ್ತು ಬೆಲ್ ಪಿ 63 ನಡುವೆ ನಡೆದ ಘರ್ಷಣೆಯನ್ನು ತನಿಖೆ ಮಾಡಲು ಎನ್‌ಟಿಎಸ್‌ಬಿ ತಂಡವನ್ನು ಪ್ರಾರಂಭಿಸುತ್ತಿದೆ. ಸದಸ್ಯ ಮೈಕೆಲ್ ಗ್ರಹಾಂ ದೃಶ್ಯದಲ್ಲಿ ವಕ್ತಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ತಂಡ ನಾಳೆ ಬರುವ ನಿರೀಕ್ಷೆಯಿದೆ. ನವೀಕರಣಗಳಿಗಾಗಿ ಎನ್‌ಟಿಎಸ್‌ಬಿ ಟ್ವಿಟ್ಟರ್ ಖಾತೆಯನ್ನು ಪರಿಶೀಲಿಸಿ ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ನ್ಯೂಸ್‌ರೂಮ್ ಟ್ವೀಟ್ ಮಾಡಿದೆ.

ಬಿ 17 ಯುದ್ಧ ವಿಮಾನವು ದೊಡ್ಡದಾದ ನಾಲ್ಕು ಎಂಜಿನ್ ಬಾಂಬರ್ ವಿಮಾನವಾಗಿದೆ. ಎರಡನೇ ವಿಶ್ವ ಸಮರದ ಸಮಯದಲ್ಲಿ ಅಮೆರಿಕ ವಾಯು ಶಕ್ತಿಯ ಮೂಲಾಧಾರವಾಗಿತ್ತು ಎಂದು ಯುಎಸ್ ಮಾಧ್ಯಮ ವರದಿಗಳು ಹೇಳಿವೆ. ಬಹುಪಾಲು ಬಿ 17ಗಳು ಎರಡನೇ ವಿಶ್ವ ಸಮರದ ಕೊನೆಯಲ್ಲಿ ಗುಜರಿಗೆ ಹಾಕಲ್ಪಟ್ಟವು. ಈಗ ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ.
— Giancarlo (@GianKaizen) November 12, 2022












Click it and Unblock the Notifications