ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಲಿಪ್ಪೀನ್ಸ್ ನಲ್ಲಿ 6.5 ತೀವ್ರತೆಯ ಭಾರೀ ಭೂಕಂಪ

By Sachhidananda Acharya
|
Google Oneindia Kannada News

ಫಿಲಿಪ್ಪೀನ್ಸ್, ಜುಲೈ 6: ನೈರುತ್ಯ ಫಿಲಿಪ್ಪೀನ್ಸ್ ನ ಟೊಕ್ಲೊಬಾನ್ ನಗರದಲ್ಲಿ 6.5 ತೀವ್ರತೆ (ರಿಕ್ಟರ್ ಮಾಪಕದಲ್ಲಿ)ಯ ಭೂಕಂಪ ಸಂಭವಿಸಿದೆ.

ರಾಜಧಾನಿ ಮನೀಲಾದಿಂದ 580 ಕಿಲೋಮೀಟರ್ ದೂರದಲ್ಲಿ 6.5 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಅಮೆರಿಕಾದ ಭೂಗರ್ಭ ಇಲಾಖೆ ಹೇಳಿದೆ. ಇನ್ನು ಯಾವುದೇ ಸುನಾಮಿ ಮುನ್ನಚ್ಚರಿಕೆಗಳನ್ನು ನೀಡಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

6.5 Magnitude earth quake hits Philippines

ಇಲ್ಲಿಯವರಗೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಆದರೆ ಭೂಕಂಪ ಪ್ರಭಾವ ತೀವ್ರವಾಗಿತ್ತು ಎಂಬುದಾಗಿ ಸ್ಥಳೀಯರು ಹೇಳಿದ್ದಾರೆ ಎಂದು ಎಎಫ್ ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಸ್ಸು ಮತ್ತು ಬೈಕುಗಳು ರಸ್ತೆ ಮಧ್ಯದಲ್ಲಿ ನಿಂತಿದ್ದು ಜನರು ಮನಗಳಿಂದ ಹೊರಗೆ ಓಡಿ ಬಂದಿದ್ದಾರೆ ಎಂದು ಅದು ಹೇಳಿದೆ.

2013ರ ನವೆಂಬರ್ ನಲ್ಲಿ ಲೆಯ್ಟೆ ದ್ವೀಪ ಭೂಕಂಪಕ್ಕೆ ಮತ್ತು ಸುನಾಮಿಗೆ ಗುರಿಯಾಗಿತ್ತು. ಈ ಘಟನೆಯಲ್ಲಿ 7,350ಜನರು ಅಸು ನೀಗಿದ್ದರು.

ಇದೇ ಫೆಬ್ರವರಿಯಲ್ಲಿ ಸುರಿಗಾವೊದಲ್ಲಿ ನಡೆದಿದ್ದ 6.5 ತೀವ್ರತೆಯ ಭೂಕಂಪದಲ್ಲಿ 8 ಜನ ಸಾವಿಗೀಡಾಗಿದ್ದು 250 ಜನರು ಗಾಯಗೊಂಡಿದ್ದರು. ಅದಾದ ಬೆನ್ನಿಗೆ ಮತ್ತೊಮ್ಮೆ 5.9 ತೀವ್ರತೆಯ ಭೂಕಂಪ ನಡೆದು ಮತ್ತಿಬ್ಬರು ವ್ಯಕ್ತಿ ಸಾವನ್ನಪ್ಪಿದ್ದರು.

ಭೂಕಂಪ ಮತ್ತು ಜ್ವಾಲಾಮುಖಿಗಳು ಹೆಚ್ಚಾಗಿ ಕಂಡು ಬರುವ ಫೆಸಿಫಿಕ್ ಸಾಗರದ 'ರಿಂಗ್ ಆಫ್ ಫೈರ್' ಪ್ರದೇಶದಲ್ಲೇ ಫಿಲಿಪ್ಪೀನ್ಸ್ ಕೂಡಾ ಬರುತ್ತದೆ. ಹೀಗಾಗಿ ಇಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತಿರುತ್ತವೆ.

English summary
An earthquake of magnitude 6.5 struck southwest of the Philippine city of Tacloban on Thursday. There were no immediate reports of damage or injury from the quake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X