ಈಶಾನ್ಯ ಜಪಾನ್ ಗೆ ಅಪ್ಪಳಿಸಿದ 6.3 ತೀವ್ರತೆಯ ಪ್ರಬಲ ಭೂಕಂಪನ

ಟೋಕಿಯೋ (ಜಪಾನ್), ಆಗಸ್ಟ್ 4: 6.3 ತೀವ್ರತೆಯ ಪ್ರಬಲ ಭೂಕಂಪನವು ಭಾನುವಾರ ಈಶಾನ್ಯ ಜಪಾನ್ ನ ಫುಕುಶಿಮಾದಲ್ಲಿ ಸಂಭವಿಸಿದೆ. ಆದರೆ ಸುನಾಮಿ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಅಮೆರಿಕ ಹಾಗೂ ಜಪಾನ್ ನ ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ ಏಳೂ ಇಪ್ಪತ್ತರ ಸುಮಾರಿಗೆ ಈ ಪ್ರಾಂತ್ಯದಲ್ಲಿನ ದೊಡ್ಡ ಭಾಗದಲ್ಲಿ ಭೂಕಂಪನದ ಅನುಭವ ಆಗಿದೆ.

ಪೂರ್ವ ಫುಕುಶಿಮಾದ ನೇಮಿ ಪೂರ್ವಕ್ಕೆ 54 ಕಿಲೋಮೀಟರ್ ಗೆ ಭೂಕಂಪನದ ಕೇಂದ್ರಬಿಂದು ಇತ್ತು ಎಂದು ಅಮೆರಿಕ ಭೂ ಸರ್ವೇಕ್ಷಣಾ ಇಲಾಖೆಯು ಮಾಹಿತಿ ನೀಡಿದೆ. ಜಪಾನ್ ನ ರಾಜಧಾನಿ ಟೋಕಿಯೋದಲ್ಲೂ ಭೂಕಂಪನದ ಅನುಭವ ಆಗಿದೆ. ಸುನಾಮಿ ಬಗ್ಗೆ ಆತಂಕ ಪಡುವ ಅಗತ್ಯ ಏನೂ ಇಲ್ಲ್ ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ಭೂಕಂಪನ ಸಂಭವಿಸಿದ ಕೂಡಲೇ ಎಚ್ಚರಿಕೆ ಕರೆಯನ್ನು ನೀಡಲಾಗಿದೆ. ಆದರೆ ತಕ್ಷಣಕ್ಕೆ ಯಾವುದೇ ಸಾವು- ನೋವಿನ ಬಗ್ಗೆ ವರದಿ ಆಗಿಲ್ಲ. ಭೂಕಂಪನ ಸಂಭವಿಸಿದ ಭಾಗದಲ್ಲಿ ತಾತ್ಕಾಲಿಕ ಬುಲೆಟ್ ರೈಲು ಸೇವೆಯನ್ನು ನಿಲ್ಲಿಸಲಾಗಿದೆ. ಇನ್ನು ಅಣುಸ್ಥಾವರಗಳಲ್ಲಿ ಯಾವುದೇ ಏರುಪೇರು ಕಂಡುಬಂದಿಲ್ಲ.

Earthquake

ಎಂಟು ವರ್ಷಗಳ ಹಿಂದೆ ಸಂಭವಿಸಿದ ಭೀಕರ ಭೂಕಂಪದಲ್ಲಿ ಹದಿನೆಂಟು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಫುಕುಶಿಮಾ ಸ್ಥಾವರದಲ್ಲಿ ರಿಯಾಕ್ಟರ್ ಕರಗಿಹೋಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+