Get Updates
Get notified of breaking news, exclusive insights, and must-see stories!

Philippines Earthquake: ಪೂರ್ವ ಫಿಲಿಪೈನ್ಸ್‌ನಲ್ಲಿ 6.2 ತೀವ್ರತೆಯ ಭೂಕಂಪನ ದಾಖಲು

ಫಿಲಿಪೈನ್ಸ್, ಏಪ್ರಿಲ್. 04: ಮಂಗಳವಾರ ಪೂರ್ವ ಫಿಲಿಪೈನ್ಸ್‌ನ ಕರಾವಳಿಯ ಸಮುದ್ರದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಈ ಕಾರಣದಿಂದ ಸ್ಥಳೀಯ ಅಧಿಕಾರಿಗಳು ಭೂಕಂಪನದ ನಂತರದ ಆಘಾತಗಳು ಮತ್ತು ಸಂಭವನೀಯ ಹಾನಿಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನು, ಫಿಲಿಪೈನ್ಸ್ ಇನ್ಸ್ಟಿಟ್ಯೂಟ್ ಆಫ್ ವಾಲ್ಕೇನೋಲಾಜಿ ಮತ್ತು ಭೂಕಂಪನಶಾಸ್ತ್ರದ ಪ್ರಕಾರ, ಮಂಗಳವಾರ ಫಿಲಿಪೈನ್ಸ್ ಕರಾವಳಿಯಲ್ಲಿ 9 ಕಿಲೋಮೀಟರ್ ಆಳದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಸಿಜಿಟಿಎನ್ ವರದಿ ಮಾಡಿದೆ. ಭೂಕಂಪವು ರಾತ್ರಿ 9:00 (1300 GMT) ರ ಸುಮಾರಿಗೆ 120 ಕಿಲೋಮೀಟರ್ ಲುಝೋನ್ ಮುಖ್ಯ ದ್ವೀಪದಿಂದ ಕ್ಯಾಟಂಡ್ವಾನೆಸ್ ದ್ವೀಪದಿಂದ ಅಪ್ಪಳಿಸಿದೆ ಎಂದು ವರದಿಯಾಗಿದೆ.

6.2 Magnitude Earthquake Strikes Off the Coast of Eastern Philippines

ಆಳವಿಲ್ಲದ ಭೂಕಂಪನದ ಅಲೆಗಳು ಆಳವಾದ ಭೂಕಂಪನಕ್ಕಿಂತ ಹೆಚ್ಚು ಹಾನಿಯ ಉಂಟುಮಾಡುತ್ತವೆ, ಆದರೆ ಇಲ್ಲಿಯವರೆಗೆ ನಗರದ ಮೇಲೆ ಯಾವುದೇ ತಕ್ಷಣದ ಹಾನಿಯ ವರದಿಗಳಿಲ್ಲ. "ಈ ಭೂಕಂಪನದ ಅಲೆಗಳು ಹಾನಿಯನ್ನು ಉಂಟುಮಾಡುವುದು ಅಷ್ಟು ಬಲವಾಗಿಲ್ಲ" ಎಂದು ಗಿಗ್ಮೊಟೊ ಪುರಸಭೆಯ ವಿಪತ್ತು ಅಧಿಕಾರಿ ಪ್ರಿನ್ಸ್ ಒಬೊ ಹೇಳಿದರು.

ಭೂಕಂಪ ಸಂಭವಿಸಿದಾಗ ಓಬೋ ತಾವು ಮನೆಯಲ್ಲಿದ್ದೆ ಎಂದಿದ್ದಾರೆ. ಮನೆಯ ಹೊರಗೆ ತನ್ನ ನೆರೆಹೊರೆಯವರನ್ನು ಸೇರುವ ಮೊದಲು ಕಟ್ಟಡವು ಅಲುಗಾಡುವುದು ನಿಲ್ಲಿಸುವವರೆಗೆ ತಾನು ಕಾಯುತ್ತಿದ್ದೆ. ನನ್ನ ಕ್ಯಾಬಿನ್‌ನಲ್ಲಿ ಹಲವು ಸಾಮಗ್ರಿಗಳು ಅಲುಗಾಡುತ್ತಾ, ಸ್ಥಳಾಂತರವಾಗಿದ್ದು ನೋಡಿದೆ. ಆದರೆ ಅದ್ಯಾವುದು ಬೀಳಲಿಲ್ಲ ಎಂದು ತಿಳಿಸಿದ್ದಾರೆ.

ಭೂಕಂಪನಗಳು ಫಿಲಿಪೈನ್ಸ್‌ನಲ್ಲಿ ನಿಯಮಿತವಾಗಿ ಸಂಭವಿಸುತ್ತವೆ, ಇದು ಪೆಸಿಫಿಕ್ "ರಿಂಗ್ ಆಫ್ ಫೈರ್" ಉದ್ದಕ್ಕೂ ಇರುತ್ತದೆ. ಇದು ತೀವ್ರವಾದ ಭೂಕಂಪನ ಮತ್ತು ಜ್ವಾಲಾಮುಖಿ ಚಟುವಟಿಕೆಯ ಪ್ರದೇಶವಾಗಿದೆ. ಈ ರಿಂಗ್ ಆಫ್ ಫೈರ್ ಜಪಾನ್‌ನಿಂದ ಆಗ್ನೇಯ ಏಷ್ಯಾದ ಮೂಲಕ ಮತ್ತು ಪೆಸಿಫಿಕ್ ಜಲಾನಯನ ಪ್ರದೇಶದಾದ್ಯಂತ ವ್ಯಾಪಿಸಿದೆ.

6.2 Magnitude Earthquake Strikes Off the Coast of Eastern Philippines

ಹೆಚ್ಚಿನ ಭೂಕಂಪಗಳು ದುರ್ಬಲವಾಗಿರುತ್ತವೆ. ಆದರೆ ಪ್ರಬಲವಾದ ಮತ್ತು ವಿನಾಶಕಾರಿ ಭೂಕಂಪನಗಳು ಯಾವಾಗ ಮತ್ತು ಎಲ್ಲಿ ಸಂಭವಿಸುತ್ತವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ತಂತ್ರಜ್ಞಾನ ಲಭ್ಯವಿದ್ದರೂ ಕೂಡ ಇವಿಗಳನ್ನು ಊಹಿಸುವುದು ಕಷ್ಟವಾಗಿದೆ. ಅಕ್ಟೋಬರ್‌ನಲ್ಲಿ ಉತ್ತರ ಫಿಲಿಪೈನ್ಸ್‌ನಲ್ಲಿ ಕೊನೆಯ ಭಾರಿ ಭೂಕಂಪವಾಗಿತ್ತು.

6.4 ತೀವ್ರತೆಯ ಭೂಕಂಪವು ಅಬ್ರಾ ಪ್ರಾಂತ್ಯದ ಪರ್ವತ ಪಟ್ಟಣವಾದ ಡೊಲೊರೆಸ್‌ಗೆ ಅಪ್ಪಳಿಸಿತ್ತು. ಇದರಲ್ಲಿ, ಹಲವಾರು ಜನರು ಗಾಯಗೊಂಡರು, ಕಟ್ಟಡಗಳನ್ನು ಹಾನಿಗೊಳಗಾದವು. ಹೆಚ್ಚಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಕಳೆದ ಜುಲೈನಲ್ಲಿ ಅಬ್ರಾದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿ 11 ಜನರು ಸಾವನ್ನಪ್ಪಿದರು.

ಫೆಬ್ರವರಿಯಲ್ಲಿ ಉಂಟಾಗಿದ್ದ ಬಲವಾದ ಭೂಕಂಪವು ಮಧ್ಯ ಫಿಲಿಪೈನ್ ಪ್ರಾಂತ್ಯವನ್ನು ಅಲುಗಾಡಿಸಿತ್ತು. ರಾತ್ರಿಯಲ್ಲಿ ಜನರನ್ನು ತಮ್ಮ ಮನೆಗಳನ್ನು ಬಿಟ್ಟು ಹೊರಗೆ ಓಡಿದ್ದರು. ಡಜನ್ಗಟ್ಟಲೆ ರೋಗಿಗಳನ್ನು ಆಸ್ಪತ್ರೆಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಸರ್ಕಾರಿ ಸಂಸ್ಥೆಗಳು ಮತ್ತು ವ್ಯಾಪಾರ ಸಂಸ್ಥೆಗಳಿಗೂ ಸಣ್ಣ ಪ್ರಮಾಣದ ಹಾನಿಯುಂಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+