ಘೋರ ರೈಲು ದುರಂತ: 55 ಮಂದಿ ದುರ್ಮರಣ, 600 ಮಂದಿಗೆ ಗಾಯ

Posted By: Prithviraj
Subscribe to Oneindia Kannada

ಯಾಂಡೆ( ಸೆಂಟ್ರಲ್ ಆಫ್ರಿಕಾ), ಅಕ್ಟೋಬರ್, 22: ಸೆಂಟ್ರಲ್ ಆಫ್ರಿಕಾದ ಕೆಮರೂನ್ ನಲ್ಲಿ ಘೋರ ರೈಲು ದುರಂತ ಸಂಭಿವಿಸಿ 55 ಮಂದಿ ಮರಣಿಸಿರುವ ಘಟನೆ ಶುಕ್ರವಾರ ಬೆಳಿಗ್ಗೆ 5 ಗಂಟೆಗೆನಡೆದಿದೆ (ಸ್ಥಳೀಯ ಕಾಲಾಮಾನ 12:00ಗಂಟೆ) . ಘಟನೆಯಲ್ಲಿ 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಾಜಾಧಾನಿ ಯಾಂಡೆಯಿಂದ ಪೋರ್ಟ್ ನಗರದ ಡೌಲಾಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ಇಸ್ಕಾ ಪಟ್ಟಣದ ಸಮೀಪ ಹಳಿ ತಪ್ಪಿದ್ದರಿಂದ ಈ ಪ್ರಮಾದ ಸಂಭವಿಸಿದೆ.

55 killed in Cameroon train derailment

ಕಿಕ್ಕಿರಿದ ಜನಸಂದಣಿ

ರೈಲಿನಲ್ಲಿ ಸಾರ್ವಜನಿಕರು ಕಿಕ್ಕಿರಿದು ತುಂಬಿದ್ದರು. 600 ಮಂದಿ ಪ್ರಯಾಣಿಕರಿಗ ಸ್ಳಳವಕಾಶವಿರು ರೈಲಿನಲ್ಲಿ ಘಟನೆ ಸಂದರ್ಭದಲ್ಲಿ 1300 ಮಂದಿ ಇದ್ದರು ಎಂದು ಅಲ್ಲಿಯ ರೈಲ್ವೇ ಇಲಾಖೆ ತಿಳಿಸಿದೆ.

ಮಳೆಯ ಅವಾಂತರ

ಕೆಮರೂನ್ ನಲ್ಲಿ ಇತ್ತೀಚೆಗೆ ಭಾರಿ ಮಳೆ ಬಿದ್ದಿದ್ದು, ಇದರಿಂದ ಗುಡ್ಡದ ಪ್ರದೇಶಗಳು ಕುಸಿದಿವೆ. ಈ ಪರಿಣಾಮ ರಸ್ತೆ ಮಾರ್ಗಗಳೆಲ್ಲಾ ಮುಚ್ಚಿಹೋಗಿದ್ದು, ಜನರು ಸಂಚಾರಕ್ಕಾಗಿ ರೈಲನ್ನೇ ಹೆಚ್ಚಾಗಿ ಅವಲಂಬಿಸಿದ್ದರು ಎಂದು ಹೇಳಲಾಗಿದೆ.

ಮೃತರ ಸಂಖ್ಯೆ ಹೆಚ್ಚಾಗು ಸಾಧ್ಯತೆ

ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಪತ್ತು ನಿರ್ವಹಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ರೈಲು ಬೋಗಿಗಳ ಕೆಳಗೆ ಸಿಲಿಕಿರುವವರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A passenger train from Cameroon's capital Yaounde to economic capital Douala derailed on Friday at around 12.00 local time (5 a.m. GMT), leaving 55 killed and about 500 injured, state radio CRTV reported.
Please Wait while comments are loading...