ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದ ಕ್ರಿಸ್‌ಮಸ್ ಮೆರವಣಿಗೆಯಲ್ಲಿ ನುಗ್ಗಿದ ಕಾರು: 5 ಸಾವು, 40 ಮಂದಿಗೆ ಗಾಯ

|
Google Oneindia Kannada News

ನ್ಯೂಯಾರ್ಕ್, ನವೆಂಬರ್ 22: ವಿಸ್ಕಾನ್ಸಿನ್‌ನಲ್ಲಿ ಕ್ರಿಸ್‌ಮಸ್ ಮೆರವಣಿಗೆ ವೇಳೆ SUV ವಾಹನವೊಂದು ನುಗ್ಗಿದ ಪರಿಣಾಮ ಐದು ಜನರು ಸ್ಥಳದಲ್ಲೇ ಮೃತಪಟ್ಟಿದ್ದು, 40 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಮಿಲ್ವಾಕಿಯ ಉಪನಗರವಾದ ವೌಕೇಶಾದಲ್ಲಿ ಸಂಜೆ 4.30ರ ಹೊತ್ತಿಗೆ ಕ್ರಿಸ್ ಮಸ್ ಮೆರವಣಿಗೆಯನ್ನು ನೋಡಲು ನೆರೆದಿದ್ದ ನೂರಾರು ಜನರ ಮಧ್ಯದಲ್ಲಿ ಕೆಂಪು SUV ಬ್ಯಾರಿಕೇಡ್‌ಗಳನ್ನು ಭೇದಿಸಿಕೊಂಡು ಜನಸಂದಣಿಯಲ್ಲಿ ನುಗ್ಗಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಪಘಾತದಲ್ಲಿ "5 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆ ಎಂದು ನಾವು ಖಚಿತಪಡಿಸಬಹುದು. ಆದಾಗ್ಯೂ, ನಾವು ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಂತೆ ಈ ಸಂಖ್ಯೆ ಹೆಚ್ಚಾಗಬಹುದು" ಎಂದು ವೌಕೇಶ ಪೊಲೀಸ್ ಇಲಾಖೆ ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹೇಳಿದೆ.

5 killed and 40 Injured as SUV Rams Christmas parade in the US state of Wisconsin

ಕಾರು ಚಾಲಕ ಅರೆಸ್ಟ್:

ಕ್ರಿಸ್‌ಮಸ್ ಮೆರವಣಿಗೆ ಮಧ್ಯೆ ಕಾರು ನುಗ್ಗಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಕೆಲವು ವ್ಯಕ್ತಿಗಳು ಮತ್ತು ಮಕ್ಕಳು ಘಟನೆಯಲ್ಲಿ ಮೃತಪಟ್ಟಿದ್ದು, ವಾಹನವನ್ನು ಅಧಿಕಾರಿಗಳು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ಇದರ ಹೊರತಾಗಿ ಯಾವುದೇ ರೀತಿ ಬೆದರಿಕೆಗಳಿಲ್ಲ, ಎಂದು ಪೊಲೀಸ್ ಮುಖ್ಯಸ್ಥ ಡಾನ್ ಥಾಂಪ್ಸನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇನ್ನು ಅಪಘಾತದಲ್ಲಿ ಗಾಯಗೊಂಡ 12 ಮಕ್ಕಳು ಹಾಗೂ 11 ವಯಸ್ಕರನ್ನು ವಿವಿಧ ಆರು ಪ್ರದೇಶಗಳಲ್ಲಿ ಇರುವ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಘಟನೆಯ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ಎಸ್‌ಯುವಿಯನ್ನು ತಡೆಯುವ ಪ್ರಯತ್ನದಲ್ಲಿ ಗುಂಡು ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆಗಳು ಬಂದ್:

ಅಪಘಾತ ನಡೆದಿರುವುದರ ಬೆನ್ನಲ್ಲೇ ಸೋಮವಾರ ಶಾಲೆಗಳನ್ನು ಮುಚ್ಚುವಂತೆ ಸೂಚಿಸಲಾಗಿದ್ದು, ಈ ಮಾರ್ಗದ ರಸ್ತೆಗಳನ್ನು ಸಹ ಬಂದ್ ಮಾಡಲಾಗಿರುತ್ತದೆ. ಪ್ರಕರಣದ ಸಂಬಂಧ ತನಿಖೆ ಮುಂದುವರಿಸಲಾಗುವುದು ಎಂದು ಥಾಂಪ್ಸನ್ ಹೇಳಿದರು, ತನಿಖೆ ಮುಂದುವರೆದಿದೆ.

ವೌಕೇಶಾದ ಘಟನೆ ಬಗ್ಗೆ ಮಾಹಿತಿ ಪಡೆದ ಬಿಡೆನ್:

ವೌಕೇಶಾದ ಘಟನೆ ಬಗ್ಗೆ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಮಾಹಿತಿ ಪಡೆದುಕೊಂಡಿದ್ದಾರೆ. ಶ್ವೇತಭವನವು "ವೌಕೇಶಾದಲ್ಲಿನ ಪರಿಸ್ಥಿತಿಯ ಕುರಿತು ಮೇಲ್ವಿಚಾರಣೆ ಮಾಡುತ್ತಿದೆ. ಈ ಭಯಾನಕ ಘಟನೆಗೆ ತುತ್ತಾದ ಪ್ರತಿಯೊಬ್ಬರಿಗಾಗಿ ನಮ್ಮ ಹೃದಯ ಮಿಡಿಯುತ್ತಿದೆ. ನಾವು ಅಗತ್ಯವಿರು ಯಾವುದೇ ಬೆಂಬಲ ಮತ್ತು ಸಹಾಯವನ್ನು ನೀಡಲು ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ," ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ನಮ್ಮ ಬಳಿ SUV ನುಗ್ಗಿ ಬರುವುದನ್ನು ನೋಡಿದೆವು"

ವಿಸ್ಕಾನ್ಸಿನ್ ರಾಜ್ಯದ ಖಜಾಂಚಿಗಾಗಿ ಸ್ಪರ್ಧಿಸುತ್ತಿರುವ ಏಂಜೆಲಿಟೊ ಟೆನೊರಿಯೊ ಅವರು ಈ ಮೆರವಣಿಗೆಯಲ್ಲಿದ್ದರು. ಒಂದು SUV ಕಾರು ವೇಗವಾಗಿ ಮೆರವಣಿಗೆ ಮಾರ್ಗದಲ್ಲಿ ನುಗ್ಗುತ್ತಿರುವುದನ್ನು ತಾವು ಬಹಳ ಹತ್ತಿರದಿಂದ ನೋಡಿದೆವು. ತದನಂತರ ಕಾರು ಬಂದು ಡಿಕ್ಕಿ ಹೊಡೆಯುತ್ತಿದ್ದಂತೆ ಜೋರಾದ ಸದ್ದು ಕೇಳಿತು. ಜನರ ಆಕ್ರಂದನದ ಕೂಗು ನಮ್ಮ ಕಿವಿಗೆ ರಾಚುತ್ತಿತ್ತು," ಎಂದು ಮಿಲ್ವಾಕೀ ಜರ್ನಲ್ ಸೆಂಟಿನೆಲ್‌ಗೆ ಹೇಳಿದ್ದಾರೆ. ಇದಕ್ಕೂ ಮೊದಲು ವೀಕ್ಷಕರು ಮತ್ತು ದೃಶ್ಯಾವಳಿಗಳ ಪ್ರಕಾರ, SUV ಶಾಲೆಯ ಮೆರವಣಿಗೆ ಬ್ಯಾಂಡ್‌ನ ಹಿಂದೆ ಮೆರವಣಿಗೆಯಲ್ಲಿ ಸಾಗಿತ್ತು.

"ನಾನು ಕೇಳಿದ ಎಲ್ಲಾ ಕಿರುಚಾಟ ಮತ್ತು ನಂತರ ಜನರು ತಮ್ಮ ಮಕ್ಕಳ ಹೆಸರನ್ನು ಕೂಗಿದರು. ನಾನು ಕೇಳಿದ್ದು ಇಷ್ಟೇ" ಎಂದು ಮತ್ತೊಬ್ಬ ಸಾಕ್ಷಿದಾರ ಏಂಜೆಲಾ ಒ'ಬಾಯ್ಲ್ ಸಿಎನ್‌ಎನ್‌ಗೆ ತಿಳಿಸಿದ್ದಾರೆ.

ಮಕ್ಕಳ ಆರೋಗ್ಯಕ್ಕಾಗಿ ಪ್ರಾರ್ಥನೆ:

ವಿಸ್ಕಾನ್ಸಿನ್ ಗವರ್ನರ್ ಟೋನಿ ಎವರ್ಸ್ ಮತ್ತು ಅವರ ಪತ್ನಿ "ಈ ರಾತ್ರಿ ವೌಕೇಶಾ ಮತ್ತು ಈ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಎಲ್ಲಾ ಮಕ್ಕಳು, ಕುಟುಂಬಗಳು ಮತ್ತು ಸಮುದಾಯದ ಸದಸ್ಯರಿಗಾಗಿ ಪ್ರಾರ್ಥಿಸುತ್ತಿದ್ದಾರೆ" ಎಂದು ಹೇಳಿದರು.

ರಾಜ್ಯದ ಇಬ್ಬರು ಸೆನೆಟರ್‌ಗಳು ಸೇರಿದಂತೆ ವಿವಿಧ ಶಾಸಕರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ, ಡೆಮೋಕ್ರಾಟ್ ಟಮ್ಮಿ ಬಾಲ್ಡ್ವಿನ್ ಅವರು "ಭಯಾನಕ ಹಿಂಸಾಚಾರ... ಕೇವಲ ಹೃದಯವಿದ್ರಾವಕ" ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.

Recommended Video

ರಾಹುಲ್ ದ್ರಾವಿಡ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada

English summary
Five people were killed and 40 others injured after a vehicle plowed into a Christmas parade in the US state of Wisconsin. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X