ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೊರೊಂಟೊದಲ್ಲಿ ನಡೆದ ಅಪಘಾತಕ್ಕೆ ಐವರು ಭಾರತೀಯ ವಿದ್ಯಾರ್ಥಿಗಳು ಬಲಿ

|
Google Oneindia Kannada News

ಟೊರೊಂಟೊ, ಮಾರ್ಚ್ 14: ಕೆನಾಡದ ಟೊರೊಂಟೊದಲ್ಲಿ ನಡೆದ ಆಟೋ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದವರೆ, ಇಬ್ಬರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆನಡಾದ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

ಮಾರ್ಚ್ 13 ರಂದು ಟೊರೊಂಟೊ ಬಳಿ ನಡೆದ ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದರು. ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆನಡಾ ಮಾಧ್ಯಮಗಳ ವರದಿಯು ಉಲ್ಲೇಖ ಮಾಡಿದ್ದು, ಈ ವರದಿಯನ್ನು ಟ್ವೀಟ್‌ ಮಾಡುವ ಮೂಲಕ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾ ಈ ಬಗ್ಗೆ ತಿಳಿಸಿದ್ದಾರೆ.

 ಉಕ್ರೇನ್‌ನಲ್ಲಿ ಭಾರತೀಯರಿಗೆ ಸಹಾಯವಾಣಿ: ಇಲ್ಲಿದೆ ವಿವರ ಉಕ್ರೇನ್‌ನಲ್ಲಿ ಭಾರತೀಯರಿಗೆ ಸಹಾಯವಾಣಿ: ಇಲ್ಲಿದೆ ವಿವರ

ಈ ಅಪಘಾತದ ಬಗ್ಗೆ ಟ್ವೀಟ್‌ ಮಾಡಿರುವ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾ, "ಕೆನಡಾದಲ್ಲಿ ಹೃದಯ ವಿದ್ರಾವಕ ದುರಂತ ನಡೆದಿದೆ. ಶನಿವಾರ ಟೊರೊಂಟೊ ಬಳಿ ಕಾರು ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿದ್ದಾರೆ," ಎಂದು ಹೇಳಿದರು.

ಹಾಗೆಯೇ, "ಸಂತ್ರಸ್ತರ ಕುಟುಂಬಕ್ಕೆ ನಾನು ಸಂತಾಪವನ್ನು ಸೂಚಿಸುತ್ತೇನೆ. ಸಹಾಯಕ್ಕಾಗಿ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿಗಳ ಸ್ನೇಹಿತರೊಂದಿಗೆ ಟೊರೊಂಟೊದಲ್ಲಿರುವ ಭಾರತದ ಹೈ ಕಮಿಷನ್ ಸಂಪರ್ಕದಲ್ಲಿದೆ," ಎಂದು ಕೂಡಾ ತಿಳಿಸಿರುವ ಅಜಯ್ ಬಿಸಾರಿಯಾ ಭಾರತದ ಸಚಿವಾಲಯದ ವಕ್ತಾರ ಅರಿಂದಾಮ್‌ ಬಗ್ಚಿಗೆ ಟ್ಯಾಗ್‌ ಮಾಡಿದ್ದಾರೆ.

5 Indian Students Died in an Auto Accident Near Toronto, Canada

ಕೆನಡಾ ಪೊಲೀಸರಿಂದ ಮಾಹಿತಿ

"ಒಂಟ್‌ನ ಕ್ವಿಂಟೆ ವೆಸ್ಟ್‌ನಲ್ಲಿ ಹೆದ್ದಾರಿ 401 ರಲ್ಲಿ ವ್ಯಾನ್ ಮತ್ತು ಟ್ರಾಕ್ಟರ್ ಟ್ರೈಲರ್ ನಡುವೆ ಸಂಭವಿಸಿದ ಮಾರಣಾಂತಿಕ ಅಪಘಾತದಲ್ಲಿ ಭಾರತದ ಐದು ವಿದ್ಯಾರ್ಥಿಗಳನ್ನು ಬಲಿಪಶುಗಳಾಗಿದ್ದಾರೆ," ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ಹರ್‌ಪ್ರೀತ್ ಸಿಂಗ್, ಜಸ್ಪಿಂದರ್ ಸಿಂಗ್, ಕರಣ್‌ಪಾಲ್ ಸಿಂಗ್, ಮೋಹಿತ್ ಚೌಹಾನ್ ಮತ್ತು ಪವನ್ ಕುಮಾರ್ ಮೃತಪಟ್ಟಿದ್ದಾರೆ ಎಂದು ಕ್ವಿಂಟೆ ವೆಸ್ಟ್ ಒಪಿಪಿ ಸುದ್ದಿ ಬಿಡುಗಡೆಯಲ್ಲಿ ತಿಳಿಸಿದೆ.

ಮೃತ ಭಾರತೀಯ ವಿದ್ಯಾರ್ಥಿಗಳು 21 ರಿಂದ 24 ವರ್ಷ ವಯಸ್ಸಿನವರಾಗಿದ್ದು, ಅವರೆಲ್ಲರೂ ಗ್ರೇಟರ್ ಟೊರೊಂಟೊ ಮತ್ತು ಮಾಂಟ್ರಿಯಲ್ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ಎಂದು ಪ್ರಾಂತೀಯ ಪೊಲೀಸರು ಹೇಳಿದ್ದಾರೆ ಎಂದು ಕೆನಡಾ ಮಾಧ್ಯಮ ಸಿಪಿ24.ಕಾಮ್‌ ವರದಿ ಮಾಡಿದೆ. ಶನಿವಾರ ಬೆಳಿಗ್ಗೆ ಹೆದ್ದಾರಿ 401 ರಲ್ಲಿ ಪ್ಯಾಸೆಂಜರ್ ವ್ಯಾನ್‌ನಲ್ಲಿ ಪಶ್ಚಿಮಕ್ಕೆ ಪ್ರಯಾಣಿಸುತ್ತಿದ್ದರು. 3:45 ರ ಸುಮಾರಿಗೆ ಟ್ರ್ಯಾಕ್ಟರ್ ಟ್ರೈಲರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಪಘಾತದ ತನಿಖೆ ಮುಂದುವರಿದಿದೆ ಮತ್ತು ಯಾವುದೇ ದೂರು ದಾಖಲಾಗಿಲ್ಲ. (ಒನ್‌ಇಂಡಿಯಾ ಸುದ್ದಿ)

Recommended Video

Rishab Pant ಟೆಸ್ಟ್ ಮ್ಯಾಚ್ ನಲ್ಲಿ ಹೊಸ ದಾಖಲೆ | Oneindia Kannada

English summary
5 Indian students passed away in an auto accident near Toronto on March 13. Two others in hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X