ಜಪಾನ್, ಗುಜರಾತ್ ನಲ್ಲಿ ಭೂಕಂಪ, ಸುನಾಮಿ ಭೀತಿ ಇಲ್ಲ

Posted By:
Subscribe to Oneindia Kannada

ಬೆಂಗಳೂರು, ಜುಲೈ 17: ಜಪಾನಿನ ಇಬಾರಕಿ ಪ್ರದೇಶದಲ್ಲಿ ಭಾನುವಾರದಂದು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5 ಪಾಯಿಂಟ್ ತೀವ್ರತೆ ಕಂಡು ಬಂದಿದೆ. ಇತ್ತ ಭಾರತದಲ್ಲಿ ಗುಜರಾತ್ ಹಾಗೂ ಮಣಿಪುರದಲ್ಲೂ ಕಂಪನ ದಾಖಲಾಗಿದೆ.

ಜಪಾನ್ ಹವಾಮಾನ ಸಂಸ್ಥೆ(ಜೆಎಂಎ) ವರದಿ ಪ್ರಕಾರ ಇಬಾರಕಿಯಲ್ಲಿ ಕೇಂದ್ರ ಬಿಂದುವನ್ನು ಹೊಂದಿದ್ದ ಭೂಕಂಪವು ಟೋಕಿಯೋದ ಈಶಾನ್ಯ ಭಾಗದಿಂದ ಪೆಸಿಫಿಕ್ ಸಾಗರದ ಅಂಚಿನವರೆಗೂ ಭೂಮಿಯನ್ನು ನಡುಗಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

5.0 magnitude quake jolts Japan

ಕೇಂದ್ರ ಟೋಕಿಯೋದಲ್ಲಿ ಹಾಗೂ ಪೆಸಿಫಿಕ್ ಸಾಗರದ ಸಮೀಪದಲ್ಲೇ ಭೂಮಿ ಕಂಪಿಸಿದ್ದರೂ ತಕ್ಷಣಕ್ಕೆ ಸುನಾಮಿ ಬಗ್ಗೆ ಯಾವುದೇ ಎಚ್ಚರಿಕೆಯನ್ನು ನೀಡಲಾಗಿಲ್ಲ. ಈ ಭೂಕಂಪದಿಂದ ಯಾವುದೇ ಪ್ರಾಣ ಹಾನಿಯಾದ ವರದಿ ಬಂದಿಲ್ಲ.

ಭಾರತದಲ್ಲಿ ಕಂಪನ: ದಕ್ಷಿಣ ಗುಜರಾತ್ ನಲ್ಲಿ ಭಾನುವಾರ ಬೆಳಗ್ಗೆ 9.25ರ ಸುಮಾರಿಗೆ ಲಘು ಭೂಕಂಪ ಸಂಭವಿಸಿದೆ. ಹವಾಮಾನ ಇಲಾಖೆಯ ಪ್ರಕಾರ ಸೂರತ್​ನಿಂದ 14 ಕಿ.ಮೀ ದೂರದಲ್ಲಿ ಭೂಮಿ ಕಂಪಿಸಿದೆ. ಅಮ್ರೇಲಿ, ಸವಾರಿಕುಂಡ್ಲ ಸೇರಿದಂತೆ ಹಲವು ನಗರದಲ್ಲಿ ಲಘು ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ಕಂಡು ಬಂದಿದೆ. ಮಣಿಪುರದಲ್ಲೂ ಭಾನುವಾರ ಬೆಳಗ್ಗೆ ಲಘು ಕಂಪನದ ಅನುಭವಗಳಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
An earthquake measuring 5 on the Richter scale, jolted Japan's Ibaraki prefecture on Sunday, officials said.
Please Wait while comments are loading...