ಒಂದೇ ಬಾವಿಯಲ್ಲಿ ತುಂಡು-ತುಂಡಾದ 44 ಮೃತದೇಹ ಪತ್ತೆ

ಮೆಕ್ಸಿಕೋ, ಸೆಪ್ಟೆಂಬರ್ 17: ಒಂದೇ ಬಾವಿಯಲ್ಲಿ ಬರೋಬ್ಬರಿ 44 ಮೃತದೇಹಗಳು ಹಲವು ತುಂಡುಗಳಾಗಿ ಪತ್ತೆ ಆಗಿದ್ದು, ಮೆಕ್ಸಿಕೊ ಸಮೀಪ ನಡೆದಿರುವ ಈ ಘಟನೆ ತಲ್ಲಣ ಮೂಡಿಸಿದೆ.

ಮೆಕ್ಸಿಕೋದ ಉತ್ತರ ಭಾಗದಲ್ಲಿನ ಜಾಲಿಸ್ಕೋ ಎಂಬಲ್ಲಿ ಬಾವಿಯೊಂದರಲ್ಲಿ ಬರೋಬ್ಬರಿ 44 ಮೃತದೇಹಗಳು, 119 ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ತುಂಡುಗಳಾಗಿ ಪತ್ತೆಯಾಗಿದೆ. ಜಾಲಿಸ್ಕೊ ಪ್ರದೇಶವು ಮೆಕ್ಸಿಕೋದ ಅತ್ಯಂತ ಹಿಂಸಾತ್ಮಕ ಪ್ರದೇಶ ಎಂದು ಹೆಸರಾಗಿದೆ.

ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆಯುತ್ತಿದ್ದು, ಡಿಎನ್‌ಎ ಮತ್ತು ಹಲ್ಲುಗಳ ಮೂಲಕ ಗುರುತು ಪತ್ತೆ ಹಚ್ಚುವ ಕಾರ್ಯವನ್ನು ತಜ್ಞರು ಮಾಡುತ್ತಿದ್ದಾರೆ. ಕಾಣೆಯಾದ ಬಗ್ಗೆ ನೀಡಲಾಗಿರುವ ದೂರುಗಳನ್ನು ಪರಿಶೀಲಿಸಲಾಗುತ್ತದೆ. ಅತ್ಯಂತ ಹಿಂಸೆ ನಡೆಯುವ ಪ್ರದೇಶ ಇದಾದ್ದರಿಂದ ಮಾಹಿತಿ ಗೊತ್ತಿದ್ದವರೂ ಸಹ ಮುಂದೆ ಬಂದು ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

44 Dead Bodies Found In A Pond In Mexico

ಮೆಕ್ಸಿಕೋ ದಲ್ಲಿ ಮಾದಕ ದ್ರವ್ಯದ ವ್ಯವಹಾರ ಅತ್ಯಂತ ಉಚ್ರಾಯದಲ್ಲಿದೆ, ಮಾದಕ ದ್ರವ್ಯದ ವ್ಯವಹಾರದಿಂದಾಗಿ ಇಲ್ಲಿ ಹಿಂಸೆ ಅತ್ಯಂತ ಸಾಮಾನ್ಯ. ಮಾದಕ ದ್ರವ್ಯ ವ್ಯವಹಾರ ಸಂಭಾಳಿಸುವ ಗುಂಪುಗಳ ನಡುವೆ ಆಗಾಗ್ಗೆ ಘರ್ಷಣೆಗಳು ಆಗುತ್ತಲೇ ಇರುತ್ತವೆ, ಹಲವರು ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತಾರೆ. ಈಗ ಸಿಕ್ಕಿರುವ ದೇಹಗಳೂ ಸಹ ಮಾದಕ ದ್ರವ್ಯ ಮಾಫಿಯಾ ಗಲಾಟೆಗೆ ಸಂಬಂಧಿಸಿದ್ದವೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಪೊಲೀಸರು.

ಈ ಮೃತದೇಹಗಳನ್ನು ಸೆಪ್ಟೆಂಬರ್ 3 ರಂದೇ ಪತ್ತೆ ಮಾಡಲಾಗದೆ. ಆದರೆ ಗುರುತು ಪತ್ತೆ ಕಾರ್ಯ ಇನ್ನೂ ಮುಗಿದಿಲ್ಲ. ಮೆಕ್ಸಿಕೋದಲ್ಲಿ ಹಿಂಸಾಚಾರ ಸಾಮಾನ್ಯ ಎಂಬಂತಾಗಿದ್ದು, ಡ್ರಗ್ ಮಾಫಿಯಾದಿಂದಾಗಿ 40,000 ಕ್ಕೂ ಹೆಚ್ಚು ಜನ ಶಾಶ್ವತವಾಗಿ ನಾಪತ್ತೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+