• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕ್ ಪ್ರಧಾನಿ ಕಾರ್ಯಾಲಯದಿಂದಲೇ 41 ಲಕ್ಷ ವಿದ್ಯುತ್ ಬಿಲ್ ಬಾಕಿ

|

ಇಸ್ಲಾಮಾಬಾದ್, ಆಗಸ್ಟ್ 29: ಹಣಕಾಸಿನ ಕೊರತೆ ಪಾಕಿಸ್ತಾನದ ಪಾಲಿಗೆ ಅದು ಹೇಗೆ ತಟ್ಟಿದೆ ಅಂದರೆ, ಇಸ್ಲಾಮಾಬಾದ್ ನಲ್ಲಿ ಇರುವ ಪ್ರಧಾನಿ ಇಮ್ರಾನ್ ಖಾನ್ ರ ಕಚೇರಿಯಿಂದ ಲಕ್ಷಾಂತರ ರುಪಾಯಿ ವಿದ್ಯುತ್ ಬಿಲ್ ಬಾಕಿ ಉಳಿದಿದೆ. ಬಿಲ್ ಪಾವತಿಸದಿದ್ದರೆ ವಿದ್ಯುತ್ ಪೂರೈಕೆಯನ್ನು ಸ್ಥಗಿತ ಮಾಡಬೇಕಾಗುತ್ತದೆ ಎಂದು ವಿದ್ಯುತ್ ಕಂಪೆನಿಯಿಂದ ಎಚ್ಚರಿಕೆ ನೀಡಲಾಗಿದೆ.

ಇಸ್ಲಾಮಾಬಾದ್ ಎಲೆಕ್ಟ್ರಿಕ್ ಕಂಪೆನಿಯು ಬುಧವಾರ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ನೋಟಿಸ್ ನೀಡಿದೆ. ಬಿಲ್ ಪಾವತಿಸದಿದ್ದಲ್ಲಿ ವಿದ್ಯುತ್ ಪೂರೈಕೆ ನಿಲ್ಲಿಸುವುದಾಗಿ ಹೇಳಲಾಗಿದೆ. ವಿದ್ಯುತ್ ಕಂಪೆನಿ ನೀಡಿದ ಮಾಹಿತಿ ಪ್ರಕಾರ, ಪ್ರಧಾನಿ ಕಚೇರಿಯಿಂದ ನಲವತ್ತೊಂದು ಲಕ್ಷ ರುಪಾಯಿ (ಪಾಕಿಸ್ತಾನದ ರುಪಾಯಿ) ಬಾಕಿ ಇದೆ.

ಕಳೆದ ತಿಂಗಳ ಮೂವತ್ತೈದು ಲಕ್ಷ ರುಪಾಯಿ ಕೂಡ ಪ್ರಧಾನಿ ಕಾರ್ಯಾಲಯದಿಂದ ಪಾವತಿಸಿಲ್ಲ. ಹಲವು ಬಾರಿ ಜ್ಞಾಪನಾ ಪತ್ರಗಳನ್ನು ಕಳುಹಿಸಿದ ನಂತರವೂ ಬಿಲ್ ಪಾವತಿಸಿಲ್ಲ ಎಂದು ವಿದ್ಯುತ್ ಕಂಪೆನಿ ತಿಳಿಸಿದೆ. ಕಾನೂನು ಪ್ರಕಾರ, ಎರಡು ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೆ ವಿದ್ಯುತ್ ಪೂರೈಕೆ ಸ್ಥಗಿತ ಮಾಡಬಹುದು.

ಈ ರೀತಿ ಬಿಲ್ ಬಾಕಿ ಉಳಿಸಿಕೊಂಡರೆ ವಿದ್ಯುತ್ ಉತ್ಪಾದಕರಿಗೆ ಹಣ ಪಾವತಿಸಲು ಕಂಪೆನಿಗೆ ಕಷ್ಟವಾಗುತ್ತದೆ. ಸರಕಾರದ ಹಲವು ಇಲಾಖೆಗಳಿಂದ್ ವಿದ್ಯುತ್ ಬಿಲ್ ಪಾವತಿಯಾಗದೆ ವಿದ್ಯುತ್ ಪೂರೈಕೆ ಬಹಳ ದೊಡ್ಡ ಸಮಸ್ಯೆ ಆಗಿದೆ ಎಂದು ತಿಳಿಸಲಾಗಿದೆ.

English summary
Pakistan PM Imran Khan office due 41 lakh electric bill to Islamabad electric company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X