ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾದ್ಯಂತ ಸುಮಾರು 4000 ವೈರಸ್ ರೂಪಾಂತರ; ಬ್ರಿಟನ್ ಎಚ್ಚರಿಕೆ

|
Google Oneindia Kannada News

ಬ್ರಿಟನ್, ಫೆಬ್ರುವರಿ 05: ವಿಶ್ವದಾದ್ಯಂತ ಕೋವಿಡ್ 19ಗೆ ಕಾರಣವಾಗುವ ವೈರಸ್ ನ ಸುಮಾರು ನಾಲ್ಕು ಸಾವಿರ ರೂಪಾಂತರಗಳಿವೆ. ಈ ಕಾರಣ ಫೈಜರ್ ಹಾಗೂ ಆಸ್ಟ್ರಾಜೆನಿಕಾ ಲಸಿಕಾ ತಯಾರಕರು ತಮ್ಮ ಲಸಿಕೆಗಳನ್ನು ಇನ್ನಷ್ಟು ಸುಧಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬ್ರಿಟನ್ ಲಸಿಕಾ ನಿಯೋಜಕರು ತಿಳಿಸಿದ್ದಾರೆ.

ಬ್ರಿಟನ್, ದಕ್ಷಿಣ ಆಫ್ರಿಕಾ, ಬ್ರೆಜಿಲಿಯನ್ ಮೂಲದ ಕೊರೊನಾ ರೂಪಾಂತರ ಸೋಂಕು ಸೇರಿದಂತೆ ಕೋವಿಡ್ 19ಗೆ ಕಾರಣವಾಗಬಲ್ಲ ಸಾವಿರಾರು ರೂಪಾಂತರಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ಬ್ರಿಟನ್‌: ಕೊರೊನಾ ಸೋಂಕಿತರಿಗೆ ಎರಡು ವಿಭಿನ್ನ ಲಸಿಕೆಗಳ ಪ್ರಯೋಗಬ್ರಿಟನ್‌: ಕೊರೊನಾ ಸೋಂಕಿತರಿಗೆ ಎರಡು ವಿಭಿನ್ನ ಲಸಿಕೆಗಳ ಪ್ರಯೋಗ

"ಪ್ರಸ್ತುತ ಅಭಿವೃದ್ಧಿಪಡಿಸಲಾದ ಲಸಿಕೆಗಳು ಈ ರೂಪಾಂತರ ಸೋಂಕಿಗೆ ಪರಿಣಾಮಕಾರಿಯಾಗಿವೆಯೇ ಎಂಬ ಕುರಿತು ಸ್ಪಷ್ಟತೆ ದೊರೆತಿಲ್ಲ. ಈ ಸೋಂಕು ಮೂಲ ಸೋಂಕಿಗಿಂತ ಹೆಚ್ಚಿನ ವೇಗದಲ್ಲಿ ಹರಡುವುದರಿಂದ ಇದರ ಗಂಭೀರತೆ ಕುರಿತು ಆಲೋಚಿಸಬೇಕಿದೆ" ಎಂದು ಲಸಿಕಾ ನಿಯೋಜಕ ನದೀಮ್ ಜಹಾವಿ ತಿಳಿಸಿದ್ದಾರೆ.

 4000 Variants Of Coronavirus Causes Covid-19 Exists Says UK

ಫೈಜರ್, ಮಾಡೆರ್ನಾ, ಆಕ್ಸ್‌ಫರ್ಡ್ ಆಸ್ಟ್ರಾಜೆನೆಕಾ ಮತ್ತು ಇನ್ನಿತರ ಲಸಿಕಾ ಉತ್ಪಾದಕರು ಹೇಗೆ ತಮ್ಮ ಲಸಿಕೆಗಳನ್ನು ಎಲ್ಲಾ ರೂಪಾಂತರ ಸೋಂಕುಗಳಿಗೂ ಪರಿಣಾಮಕಾರಿಯಾಗುವಂತೆ ಸುಧಾರಿಸಬಹುದು ಎಂಬ ಕುರಿತು ಚಿಂತನೆ ನಡೆಸಿದ್ದಾರೆ. ಎಂಥ ಪ್ರಭಾವಿ ವೈರಸ್ ಆದರೂ ಅದರ ವಿರುದ್ಧ ಹೋರಾಡುವ ಲಸಿಕೆ ಅಭಿವೃದ್ಧಿ ಸದ್ಯದ ಸವಾಲಾಗಿದೆ ಎಂದಿದ್ದಾರೆ.

ಕೊರೊನಾ ಸೋಂಕಿನ ರೂಪಾಂತರಗಳೆಂದು ಸಾವಿರಾರು ರೂಪಾಂತರಗಳು ಕಾಣಿಸಿಕೊಳ್ಳುತ್ತಿವೆ. ಕೆಲವೇ ಕೆಲವು ರೂಪಾಂತರಗಳ ಮೇಲೆ ಸದ್ಯಕ್ಕೆ ಗಮನ ಹರಿಸಲಾಗಿದೆ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ತಿಳಿಸಿದೆ.

"ಕೊರೊನಾ ಸೋಂಕಿನ ಪರೀಕ್ಷೆಗೆ ನಮ್ಮ ಬಳಿ ಬೃಹತ್ ಜೆನೋಮ್ ಪರೀಕ್ಷಾ ಲ್ಯಾಬ್ ಇದೆ. ಈ ಲೈಬ್ರರಿಯಲ್ಲಿ ಕೊರೊನಾ ಸೋಂಕಿನ ರೂಪಾಂತರದ ಎಲ್ಲಾ ಮಾದರಿಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಮುಂದೆ ಬರುವ ಬಹುದೊಡ್ಡ ಸವಾಲನ್ನು ಎದುರಿಸಲು ಸಜ್ಜಾಗಬೇಕಿದೆ" ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

English summary
Thousands of variants of the type of coronavirus that causes COVID-19 have been documented as the virus mutates said uk minister
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X