ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಲಿಗೂ ಬಂತು ಕೊರೊನಾ, ಜಗತ್ತಿನಲ್ಲಿ ಮೊದಲ ಪ್ರಾಣಿ ಕೇಸ್?

|
Google Oneindia Kannada News

ನ್ಯೂಯಾರ್ಕ್, ಏಪ್ರಿಲ್ 6: ಇಷ್ಟು ದಿನ ಮನುಷ್ಯರಲ್ಲಿ ಮಾತ್ರ ಕೊರೊನಾ ಸೋಂಕು ಹರಡುತ್ತಿರುವುದು ಸುದ್ದಿಯಾಗಿತ್ತು. ಆದ್ರೀಗ ಪ್ರಾಣಿಗಳಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದು ನಿಜಕ್ಕೂ ಭಯ ಹುಟ್ಟಿಸುವ ವಿಚಾರ.

ಮನುಷ್ಯನಿಂದ ಮನುಷ್ಯನಿಗೆ ಕೊರೊನಾ ಹರಡುತ್ತಿರುವ ಈ ಸಂದರ್ಭದಲ್ಲಿ ಪ್ರಾಣಿಗಳಲ್ಲಿ ಕೊವಿಡ್ ಸೋಂಕು ಪತ್ತೆಯಾಗಿದೆ. ಈಗ ಪ್ರಾಣಿಗಳಿಂದ ಈ ಸೋಂಕು ಮತ್ತಷ್ಟು ಉಲ್ಬಣವಾಗುತ್ತಾ ಎಂಬ ಆತಂಕ ಹುಟ್ಟಿಕೊಂಡಿದೆ.

ಘನಘೋರ ಸ್ಥಿತಿಯಲ್ಲಿದ್ದ ಇಟಲಿಯಲ್ಲಿ ಸಾವಿನ ಸಂಖ್ಯೆ ಇಳಿಮುಖಘನಘೋರ ಸ್ಥಿತಿಯಲ್ಲಿದ್ದ ಇಟಲಿಯಲ್ಲಿ ಸಾವಿನ ಸಂಖ್ಯೆ ಇಳಿಮುಖ

ಹೌದು, ನ್ಯೂಯಾರ್ಕ್‌ನ ಬ್ರಾಂಕ್ಸ್ ಝೂನಲ್ಲಿ ಹುಲಿಗೆ ಕೊರೊನಾ ಸೋಂಕು ದೃಢವಾಗಿದೆ. ಇದುವರೆಗೂ ಪ್ರಾಣಿಗಳಲ್ಲಿ ಸೋಂಕು ಇರಬಹುದು ಎನ್ನಲಾಗಿತ್ತೆ ಹೊರತು, ಸೋಂಕು ದೃಢವಾಗಿರುವ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಇದೀಗ, ಈ ಹುಲಿ ಪ್ರಕರಣ ಜಗತ್ತಿಗೆ ಪ್ರಶ್ನೆಯಾಗಿದೆ. ಮುಂದೆ ಓದಿ....

ಕೊರೊನಾಗೆ ತುತ್ತಾದ ಮೊದಲ ಹುಲಿ

ಕೊರೊನಾಗೆ ತುತ್ತಾದ ಮೊದಲ ಹುಲಿ

ನ್ಯೂಯಾರ್ಕ್‌ ನಗರದಲ್ಲಿರುವ ಬ್ರಾಂಕ್ಸ್ ಮೃಗಾಲಯದಲ್ಲಿರುವ ನಾಲ್ಕು ವರ್ಷದ ನಾಡಿಯಾ ಎಂಬ ಹೆಸರಿನ ಮಲಯನ್ ಹುಲಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಯುಎಸ್‌ ಕೃಷಿ ಇಲಾಖೆ ಭಾನುವಾರ ಮಧ್ಯಾಹ್ನ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಆರು ಬೆಕ್ಕುಗಳಲ್ಲಿಯೂ ರೋಗದ ಲಕ್ಷಣ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಮನುಷ್ಯನಿಂದ ಪ್ರಾಣಿಗೆ ಬಂತಾ?

ಮನುಷ್ಯನಿಂದ ಪ್ರಾಣಿಗೆ ಬಂತಾ?

ಕೊರೊನಾ ಪ್ರಾಣಿಗಳಿಗೆ ಬರಲ್ಲ ಎಂದು ಹಲವು ಹೇಳುತ್ತಿದ್ದರು. ಆದರೆ, ಮನುಷ್ಯನಿಂದಲೇ ಹುಲಿಗೆ ಸೋಂಕು ಬಂದಿದೆ ಎಂದು ಬ್ರಾಂಕ್ಸ್ ಮೃಗಾಲಯದ ಮುಖ್ಯಸ್ಥ ಪೌಲ್ ಕ್ಯಾಲೆ ಹೇಳಿದ್ದಾರೆ. ''ನನ್ನ ಜ್ಞಾನದ ಪ್ರಕಾರ ಪ್ರಾಣಿಗಳಲ್ಲಿ ಕೊರೊನಾ ಕಾಣಿಸಿಕೊಂಡಿರುವುದು ಇದೇ ಮೊದಲು'' ಎಂದಿದ್ದಾರೆ. ಇನ್ನು ಮಾರ್ಚ್ 16 ರಿಂದಲೇ ಝೂ ಮುಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಾರ್ಚ್‌ನಲ್ಲಿ ರೋಗ ಲಕ್ಷಣ ಕಾಣಿಸಿತ್ತು

ಮಾರ್ಚ್‌ನಲ್ಲಿ ರೋಗ ಲಕ್ಷಣ ಕಾಣಿಸಿತ್ತು

ಮಾರ್ಚ್‌ ಆರಂಭದಲ್ಲಿ ಹುಲಿಗೆ ಕೆಮ್ಮು ಕಾಣಿಸಿಕೊಂಡಿತ್ತು. ಅನುಮಾನದಿಂದ ಪರೀಕ್ಷಿಸಿದಾಗ ಏಪ್ರಿಲ್ 2 ರಂದು ಹುಲಿಗೆ ಕೊವಿಡ್ ಸೋಂಕು ಇರುವುದು ಖಚಿತವಾಗಿದೆ. ಝೂ ಮುಖ್ಯಸ್ಥನ ಪ್ರಕಾರ ಹುಲಿಯ ಜೊತೆಯಲ್ಲಿ ಮತ್ತೆರಡು ಹುಲಿ ಮತ್ತು ಮೂರು ಸಿಂಹಗಳಿಗೆ ಹಾಗೂ ಆರು ಬೆಕ್ಕಿನಲ್ಲೂ ಕೆಮ್ಮು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಬೆಕ್ಕಗೆ ಕೊರೊನಾ ಸೋಂಕು!

ಬೆಕ್ಕಗೆ ಕೊರೊನಾ ಸೋಂಕು!

ಚೀನಾದ ಅಧ್ಯಯನ ಒಂದರ ಪ್ರಕಾರ ಬೆಕ್ಕುಗಳು ಪರಸ್ಪರ ಕೊರೊನಾ ಸೋಂಕಿಗೆ ತುತ್ತಾಗಬಹುದು ಎಂದು ಹೇಳಿದ್ದರು. ಈ ಹಿಂದೆ ಬಂದಿದ್ದ SARS-CoV-2 ವೈರಸ್‌ ಪ್ರಾಣಿಯಲ್ಲಿ ಕಾಣಿಸಿಕೊಂಡಿತ್ತು. ಇನ್ನು ಹಾಂಕಾಂಗ್‌ನಲ್ಲಿ ಬೆಕ್ಕಿಗೆ ಕೊವಿಡ್ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಸಾಕಿರುವ ಬೆಕ್ಕಿನಲ್ಲಿ ಕೊರೊನಾ ಪತ್ತೆಯಾಗಿದೆ ಎಂದು ಸರ್ಕಾರದ ಕಡೆಯಿಂದಲೇ ಅಧಿಕೃತ ಮಾಹಿತಿ ನೀಡಲಾಗಿತ್ತು.

ಮುಂದೆ ಏನು?

ಮುಂದೆ ಏನು?

ಮುಂದೆ ಏನು ಎಂಬ ಪ್ರಶ್ನೆಗೆ ಉತ್ತರಿಸಿ ಝೂ ಮುಖ್ಯಸ್ಥ ಕ್ಯಾಲೆ ''ಇದು ನಿಜಕ್ಕೂ ಹೊಸ ಅನುಭವ. ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಝೂನಲ್ಲಿ ಹುಲಿ ಜೊತೆ ಸಿಂಹ, ಚಿರತೆ ಬೆಕ್ಕುಗಳಿವೆ. ಅದರಲ್ಲಿ ಕೆಲವು ಪ್ರಾಣಿಗಳಲ್ಲಿ ರೋಗ ಲಕ್ಷಣವೂ ಇದೆ. ಎಕ್ಸ್‌ಪರ್ಟ್ಸ್‌ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ'' ಎಂದಿದ್ದಾರೆ.

English summary
4 Year old tiger named Nadia, tested positive for coronavirus in Bronx Zoo at New York.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X