ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವುಹಾನ್ ಕೊರೊನಾ ಹರಡುವಿಕೆ ವರದಿ ಮಾಡಿದ್ದ ಪತ್ರಕರ್ತೆಗೆ 4 ವರ್ಷ ಜೈಲು

|
Google Oneindia Kannada News

ಚೀನಾ, ಡಿಸೆಂಬರ್ 28: ಚೀನಾದ ವುಹಾನ್ ನಲ್ಲಿ ಕೊರೊನಾ ಸೋಂಕು ಹರಡಿದ್ದರ ಕುರಿತು ವರದಿ ಮಾಡಿದ್ದ ನಾಗರಿಕ ಪತ್ರಕರ್ತೆಗೆ ಶಾಂಘೈ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಸಂಘರ್ಷಕ್ಕೆ ಎಡೆಮಾಡಿಕೊಟ್ಟ ಹಾಗೂ ಸಮಸ್ಯೆಯನ್ನು ಪ್ರಚೋದಿಸಿದ ಆರೋಪದ ಮೇಲೆ ಝಾಂಗ್ ಝಾನ್ ಎಂಬಾಕೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಕೊರೊನಾ ಸೋಂಕಿನ ಮೂಲ ವುಹಾನ್ ಮಾರುಕಟ್ಟೆ ಒಂದು ವರ್ಷದ ನಂತರ ಈಗ ಹೇಗಿದೆ?ಕೊರೊನಾ ಸೋಂಕಿನ ಮೂಲ ವುಹಾನ್ ಮಾರುಕಟ್ಟೆ ಒಂದು ವರ್ಷದ ನಂತರ ಈಗ ಹೇಗಿದೆ?

37 ವರ್ಷದ ಮಾಜಿ ವಕೀಲೆ ಝಾಂಗ್, ವುಹಾನ್ ನಗರದಲ್ಲಿ ಕೊರೊನಾ ಸಾಂಕ್ರಾಮಿಕ ಸೋಂಕಿನ ಕುರಿತು ಮಾಡಿದ್ದ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಫೆಬ್ರುವರಿಯಲ್ಲಿ ವುಹಾನ್ ಗೆ ಕೊರೊನಾ ಸೋಂಕಿನ ಕುರಿತು ಸ್ವತಂತ್ರವಾಗಿ ವರದಿ ಮಾಡಲು ಬಂದಿದ್ದು, ಈ ವರದಿಗಳು ಚೀನಾ ಆಡಳಿತಾಧಿಕಾರಿಗಳ ಗಮನಕ್ಕೆ ಬಂದಿದ್ದವು. ವುಹಾನ್ ನಲ್ಲಿ ಈ ರೀತಿ ವರದಿ ಮಾಡಿದ ಹಲವು ನಾಗರಿಕ ಪತ್ರಕರ್ತರ ಪೈಕಿ ಝಾಂಗ್ ಕೂಡ ಒಬ್ಬರಾಗಿದ್ದರು.

4 Year Jail For Citizen Journalist Who Reports Wuhan Coronavirus Outbreak

ಪಠ್ಯ, ವಿಡಿಯೋ, ಇತರೆ ಮಾಧ್ಯಮಗಳನ್ನು ಬಳಸಿಕೊಂಡು ತಪ್ಪು ಮಾಹಿತಿ ನೀಡಿರುವುದಾಗಿ ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ. ವಿದೇಶಿ ಮಾಧ್ಯಮಗಳಿಗೆ ಸಂದರ್ಶನ ನೀಡಿದ ಹಾಗೂ ವುಹಾನ್ ನಲ್ಲಿ ವೈರಸ್ ಕುರಿತು ದುರುದ್ದೇಶಪೂರ್ವಕವಾಗಿ ಮಾಹಿತಿ ಹರಡಿದ ಆರೋಪದ ಮೇಲೆ ಮೇ ತಿಂಗಳಿನಲ್ಲಿ ಝಾಂಗ್ ಬಂಧಿಸಲಾಗಿತ್ತು.

ಸೋಮವಾರ ಬೆಳಿಗ್ಗೆ ಶಾಂಘೈ ನ್ಯಾಯಾಲಯಕ್ಕೆ ಝಾಂಗ್ ಹಾಜರಾಗಿದ್ದು, ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

ಈ ಬಂಧನ ಖಂಡಿಸಿ ಝಾಂಗ್ ಕೆಲವು ತಿಂಗಳಿನಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಆಕೆಯ ಆರೋಗ್ಯ ಪರಿಸ್ಥಿತಿ ಹದಗೆಟ್ಟಿರುವುದಾಗಿ ಝಾಂಗ್ ಪರ ವಕೀಲೆ ತಿಳಿಸಿದ್ದಾರೆ.

English summary
Chinese citizen journalist who reported Wuhan's coronavirus outbreak has been jailed for four years on monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X