3ನೇ ಮಹಾಯುದ್ಧ ಫಿಕ್ಸ್? ತೈವಾನ್ ಸುತ್ತಲೂ ಚೀನಾ ಸೇನೆ!

ತೈಪೆ: ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅಮೆರಿಕಕ್ಕೆ ಭೇಟಿ ನೀಡಿದ ತಕ್ಷಣ ತನ್ನ ಶತ್ರು ರಾಷ್ಟ್ರಕ್ಕೆ ಚೀನಾ ಆಘಾತ ನೀಡಿದೆ. ಅಮೆರಿಕ ಜೊತೆ ಕೈಜೋಡಿಸುತ್ತಿರುವ ನೆರೆ ರಾಷ್ಟ್ರಕ್ಕೆ ಎಚ್ಚರಿಕೆ ರವಾನಿಸಲು ಭಾರಿ ಪ್ರಮಾಣದ ಮಿಲಿಟರಿ ಅಭ್ಯಾಸ ಆರಂಭಿಸಿದೆ ಚೀನಾ. ಈ ಮೂಲಕ ತೈವಾನ್ ಸುತ್ತಲ್ಲೂ ಚೀನಾ ಸೇನೆ ಭರ್ಜರಿ ಕಾರ್ಯಾಚರಣೆ ಆರಂಭಿಸಿದೆ.

ಅಂದಹಾಗೆ ಮೊದಲಿನಿಂದಲೂ ತೈವಾನ್ ಮೇಲೆ ಹಕ್ಕು ಸಾಧಿಸಲು ಚೀನಾ ಯತ್ನಿಸುತ್ತಲೇ ಬಂದಿದೆ. ಆದರೆ ಚೀನಾದ ಈ ಪ್ರಯತ್ನಕ್ಕೆ ತೈವಾನ್ ತಿರುಗೇಟು ನೀಡುತ್ತಿದ್ದು, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಚೀನಾದ ಶತ್ರುಗಳ ಜೊತೆಗೆ ಸಂಬಂಧ ಬೆಳೆಸುತ್ತಿದೆ. ಅದರಲ್ಲೂ ಅಮೆರಿಕದ ಜೊತೆಗೆ ತೈವಾನ್ ಸಂಬಂಧ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವುದು ಚೀನಾ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅಮೆರಿಕಕ್ಕೆ ಭೇಟಿ ನೀಡಿದ್ದು, 3ನೇ ಮಹಾಯುದ್ಧದ ಭೀತಿ ಆವರಿಸುವಂತೆ ಮಾಡಿದೆ.

3rd world war tensions rised after Chinas military started drill around Taiwan

10 ಫೈಟರ್ ಜೆಟ್, 70 ಯುದ್ಧ ವಿಮಾನ

ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅಮೆರಿಕ ತಲುಪಿ ಒಂದಷ್ಟು ಗಂಟೆ ಕಳೆದಿತ್ತು ಅಷ್ಟೇ, ಅಷ್ಟರಲ್ಲೇ ತನ್ನ ನೆರೆ ರಾಷ್ಟ್ರಕ್ಕೆ ಪಾಠ ಕಲಿಸಲು ಚೀನಾ ಸಿದ್ಧವಾಗಿತ್ತು. 10 ಯುದ್ಧ ನೌಕೆಗಳು ಹಾಗೂ 70ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ತೈವಾನ್ ಸುತ್ತಲೂ ನಿಯೋಜಿಸಿ ಚೀನಾ ಮಿಲಿಟರಿ ಸಮರಾಭ್ಯಾಸ ಆರಂಭಿಸಿದೆ. ನೂರಾರು ಮಿಸೈಲ್ ಹಾಗೂ ಲೆಕ್ಕವಿಲ್ಲದಷ್ಟು ಗುಂಡುಗಳು ತೈವಾನ್ ಸುತ್ತಲೂ ಸದ್ದು ಮಾಡುತ್ತಾ ಯುದ್ಧದ ಭೀತಿ ಆವರಿಸುವಂತೆ ಮಾಡಿದೆ.

ಅಲ್ಲಿ ಉಕ್ರೇನ್, ಇಲ್ಲಿ ತೈವಾನ್?

ಒಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ತೊಡೆತಟ್ಟಿ ನಿಂತಿದೆ, ಇನ್ನೊಂದು ಕಡೆ ತೈವಾನ್ ವಿರುದ್ಧ ಯುದ್ಧ ಆರಂಭಿಸಲು ಚೀನಾ ಕೂಡ ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ ಮತ್ತೊಂದು ಮಹಾಯುದ್ಧಕ್ಕೆ ಜಗತ್ತು ಸಜ್ಜಾದಂತೆ ಭಾಸವಾಗುತ್ತಿದೆ. ಅಕಸ್ಮಾತ್ ತೈವಾನ್ ವಿರುದ್ಧ ಚೀನಾ ಯುದ್ಧ ಆರಂಭಿಸಿದ್ದೇ ಆದರೆ ಅಮೆರಿಕ ಸುಮ್ಮನೆ ಕೂರುವುದಿಲ್ಲ. ಆಗ ಅನಿವಾರ್ಯವಾಗಿ ದೊಡ್ಡ ಸಂಘರ್ಷ ಏರ್ಪಡುವುದು ಗ್ಯಾರಂಟಿ. ಹೀಗೆ ಕೋಳಿ ಜಗಳ ಮುಂದೆ 3ನೇ ಮಹಾಯುದ್ಧವಾಗಿ ಬದಲಾದರೂ ಅಚ್ಚರಿ ಪಡಬೇಕಿಲ್ಲ.

3rd world war tensions rised after Chinas military started drill around Taiwan

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ

ತೈವಾನ್ ಚೀನಾದಷ್ಟು ದೊಡ್ಡ ದೇಶವಲ್ಲ, ಆದರೂ ಚೀನಾ ವಿರುದ್ಧ ಗುಟುರು ಹಾಕುತ್ತಾ ಬಂದಿದೆ. ತನ್ನದೇ ಸರ್ಕಾರ ಹೊಂದಿರುವ ಈ ಪುಟಾಣಿ ದ್ವೀಪ ರಾಷ್ಟ್ರದಲ್ಲಿ 2.40 ಕೋಟಿ ಜನ ವಾಸಿಸುತ್ತಿದ್ದಾರೆ. 2 ದಶಕಗಳಿಂದ ಈಚೆಗೆ ಅಂದರೆ 1996ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ತೈವಾನ್ ನೆಲದಲ್ಲಿ ಜಾರಿಗೆ ಬಂದಿದೆ. ಅದಕ್ಕೂ ಮೊದಲು ಹಲವು ದೇಶಗಳು, ಇದೇ ತೈವಾನ್‌ನ ಹರಿದು-ಹಂಚಿ ಆಳ್ವಿಕೆ ನಡೆಸಿದ್ದವು. ಹೀಗೆ ಕಮ್ಯುನಿಸ್ಟ್ ರಾಷ್ಟ್ರ ಚೀನಾ ಪಕ್ಕದಲ್ಲೇ ತೈವಾನ್ ಪ್ರಜಾಪ್ರಭುತ್ವ ದೇಶವಾಗಿ ಬೆಳೆದಿದೆ.

ಚೀನಾ VS ತೈವಾನ್ ನಿರಂತರ ಘರ್ಷಣೆ

ಆರಂಭದಲ್ಲಿ ತೈವಾನ್ ಡಚ್ಚರ ವಸಾಹತಾಗಿತ್ತು. ನಂತರ ಜಪಾನ್ ಆಡಳಿತ ಮಾಡಿತ್ತು. 2ನೇ ಮಹಾಯುದ್ಧದ ಬಳಿಕ ಚೀನಾ ರಾಷ್ಟ್ರೀಯವಾದಿ ಪಕ್ಷದ ಚಿಯಾಂಗ್ ಕೈ-ಶೇಕ್ ಅಧ್ಯಕ್ಷರಾದರು. 1949ರಲ್ಲಿ ಅಂತರ್ಯುದ್ಧದಲ್ಲಿ ಮಾವೋ ಕಮ್ಯುನಿಸ್ಟ್ ಸೇನೆ ಚಿಯಾಂಗ್ ಪಡೆ ಹೊರದಬ್ಬಿತ್ತು. ಬೆಂಬಲಿಗರ ಜೊತೆ ಚಿಯಾಂಗ್ ಬಂದಿದ್ದು ತೈವಾನ್‌ಗೆ. ಮಾವೋ ವಶದಲ್ಲಿದ್ದ ಚೀನಾ ಮುಖ್ಯ ಭೂಭಾಗ ಕಮ್ಯೂನಿಸ್ಟರಿಗೆ ನೆಲೆ ಕೊಟ್ಟಿದ್ದರೆ, ತೈವಾನ್ 'ರಿಪಬ್ಲಿಕ್ ಆಫ್ ಚೀನಾ' ಆಗಿ ಉಳಿಯಿತು. ನಂತರ ಚೀನಾ ಮತ್ತು ತೈವಾನ್ ಮಧ್ಯೆ ನಿರಂತರ ಘರ್ಷಣೆಗಳು ನಡೆಯುತ್ತಾ ಬಂದಿವೆ.

3rd world war tensions rised after Chinas military started drill around Taiwan

'ಮಿಸ್ಟರ್ ಡೆಮಾಕ್ರಸಿ' ಸಾಧನೆ

ಲೀ ಟೆಂಗ್ ಹೂಯಿ ಇರದೇ ಇದ್ದಿದ್ದರೆ ತೈವಾನ್‌ನ ಸ್ವಾಭಿಮಾನದ ಉಳಿವಿನ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ. ಏಕೆಂದರೆ ಇಷ್ಟೊತ್ತಿಗೆ ಹಾಂಕಾಂಗ್ ರೀತಿಯಲ್ಲೇ ತೈವಾನ್ ಚೀನಾ ವಶವಾಗುವ ಸಾಧ್ಯತೆ ಇತ್ತು. ಆದರೆ ತೈವಾನ್‌ನ 'ಮಿಸ್ಟರ್ ಡೆಮಾಕ್ರಸಿ' ಎಂದು ಕರೆಸಿಕೊಳ್ಳುವ ಲೀ ಟೆಂಗ್ ಹೂಯಿ, 90ರ ದಶಕದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು. ಇವರ ಪರಿಶ್ರಮದಿಂದ 1996ರಲ್ಲಿ ತೈವಾನ್ ಸಂಪೂರ್ಣ ಪ್ರಜಾಪ್ರಭುತ್ವದತ್ತ ತಿರುಗಿತು. ಪ್ರಜಾಪ್ರಭುತ್ವ ರಾಷ್ಟ್ರವಾಗುತ್ತಲೇ ಅಮೆರಿಕದ ಕಣ್ಣು ತೈವಾನ್ ಮೇಲೆ ತೀವ್ರವಾಗಿ ನೆಟ್ಟಿತು.

1996ರಲ್ಲಿ ನಡೆದ ತೈವಾನ್‌ನ ಮೊಟ್ಟಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಲೀ ಗೆದ್ದರು. ಈ ಮೂಲಕ ಚೀನಾಗೆ ಆಘಾತ ಕೊಟ್ಟಿದ್ದರು ಲೀ. ಆದರೆ 97 ವರ್ಷದ ಲೀ 2020ರ ಜುಲೈ 30ರಂದು ನಿಧನರಾಗಿದ್ದರು. ಇಷ್ಟೆಲ್ಲದರ ನಡುವೆ ಅಮೆರಿಕದ ಜೊತೆ ಮತ್ತಷ್ಟು ಸ್ನೇಹ ಬೆಳೆಸುತ್ತಿರುವ ತೈವಾನ್ ನಾಯಕರ ವಿರುದ್ಧ ಚೀನಾ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದೆ. ಮುಂದೆ ಈ ಎಲ್ಲಾ ಬೆಳವಣಿಗೆಗಳು ದೊಡ್ಡ ಯುದ್ಧಕ್ಕೆ ದಾರಿ ಮಾಡಿಕೊಡುತ್ತವಾ? ಎಂಬ ಅನುಮಾನ ಆತಂಕ ಹುಟ್ಟಿಸಿರುವುದು ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+