ತಂದೆಯಾದವರಿಗೆ ಮೂರು ತಿಂಗಳು ಪಿತೃತ್ವ ರಜೆ!

Posted By:
Subscribe to Oneindia Kannada

ಸ್ಯಾನ್ ಫ್ರಾನ್ಸಿಸ್ಕೋ, ಜುಲೈ 17: ತಾಯ್ತನದ ರಜೆಯ ಬಗ್ಗೆ ನಾವು ಕೇಳಿದ್ದೇವೆ. ಪ್ರತಿ ಕಂಪೆನಿಗಳೂ ತಮ್ಮಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹೆರಿಗೆಯ ನಂತರ, ಅಥವಾ ಅದಕ್ಕೂ ಮೊದಲೇ ತಾಯ್ತನದ ರಜೆ ನೀಡಬೇಕು ಎಂದು ಸರ್ಕಾರದ ನಿಯಮವೇ ಇದೆ. ಬೇರೆ ಬೇರೆ ದೇಶಗಳಲ್ಲಿ ಈ ರಜೆಯ ಕಾಲಾವಧಿ ಬೇರೆ ಬೇರೆ ಇದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಆದರೆ ತಾಯ್ತನದ ರಜೆಯಂತೆಯೇ ತಂದೆಯರಿಗೂ ಪೆಟರ್ ನಿಟಿ ರಜೆ ಅಥವಾ ಪಿತೃತ್ವ ರಜೆ ನೀಡುವ ಕಂಪೆನಿಗಳ ಬಗ್ಗೆ ಕೇಳಿದ್ದೀರಾ? ಕೆಲವು ಕಂಪೆನಿಗಳು, ತನ್ನ ಕಂಪೆನಿಯಲ್ಲಿ ಕೆಲಸ ಮಾಡುವ ಯಾರೇ ತಂದೆಯಾದರೂ, ಅವರಿಗೆ ಒಂದು ವಾರ ಪೆಟರ್ ನಿಟಿ ರಜೆ ನೀಡುವುದು ಹೊಸ ವಿಷಯವಲ್ಲ. ಆದರೆ ಅಮೆರಿಕ ಮೂಲದ ಸೇಲ್ಸ್ ಪೋರ್ಸ್ ಎಂಬ ಕಂಪೆನಿಯೊಂದು ತಂದೆಯರಿಗೆ ಮೂರು ತಿಂಗಳ ಪಿತೃತ್ವ ರಜೆ ನೀಡಲಿದೆ!

ಋತುಸ್ರಾವ ಮೊದಲ ದಿನ ಮಹಿಳಾ ಉದ್ಯೋಗಿಗಳಿಗೆ ಖಾಸಗಿ ಕಂಪೆನಿ ರಜಾ ಘೋಷಣೆ

3 month Paternity leave in America's Salesforce company
IPL 2017: Manoj Tiwary Returns To His Home With Tears In His Eyes | Oneindia Kannada

ತನ್ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕಂಪೆನಿಯ ಬಗ್ಗೆ ಒಳ್ಳೆಯ ಅಭಿಪ್ರಾಯವಿರಬೇಕು, ಮತ್ತು ಉದ್ಯೋಗಿ-ಕಂಪೆನಿಯ ನಡುವೆ ಉತ್ತಮ ಬಾಂಧವ್ಯ ಬೆಳೆಯುವುದಕ್ಕೆ ಇದು ಸಹಾಯಕವಾಗಬೇಕೆಂದು ಕಂಪೆನಿ ಈ ನಿರ್ಧಾರ ಕೈಗೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
America based "Salesforce" company has decided to give Paternity Leave for 3 months to its workers.
Please Wait while comments are loading...