ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತಾರ್‌ನಲ್ಲಿ ಬಂದೂಕು ಪ್ರಯೋಗಕ್ಕಾಗಿ ನಾಯಿಗಳ ಹತ್ಯೆ

|
Google Oneindia Kannada News

ಕತಾರ್‌, ಜುಲೈ 20; ಕತಾರ್‌ನಲ್ಲಿ 29 ನಾಯಿಗಳ ಹತ್ಯೆ ಆನ್‌ಲೈನ್‌ನಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಕತಾರ್ ಪ್ರದೇಶಕ್ಕೆ ನುಗ್ಗಿ ನಾಯಿಗಳನ್ನು ಕೊಂದು ಇತರ ನಾಯಿಗಳನ್ನು ಗಾಯಗೊಳಿಸಿದ್ದಾರೆ. ನಾಯಿ ಮಗುವೊಂದನ್ನು ಕಚ್ಚಿವೆ ಎಂದು ಗುಂಪು ಆರೋಪಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ದೋಹಾ ಮೂಲದ ಪಾರುಗಾಣಿಕಾ ಚಾರಿಟಿ ತಂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ದಾಳಿಕೋರರು ಸುರಕ್ಷಿತ ಪ್ರದೇಶಕ್ಕೆ ನುಗ್ಗಿ ಈ ಹತ್ಯೆ ನಡೆಸಿದ್ದಾರೆ. ಬೀದಿ ನಾಯಿಗಳಿಗೆ ಆಹಾರ, ಸಂತಾನಹರಣ ವ್ಯವಸ್ಥೆಯಲ್ಲಿ ತೊಡಗಿದ್ದ ಪಾರುಗಾಣಿಕಾ ತಂಡದ ಭದ್ರತಾ ಸಿಬ್ಬಂದಿಗೆ ಶಸ್ತ್ರಾಸ್ತ್ರಗಳೊಂದಿಗೆ ಬೆದರಿಕೆ ಹಾಕಿದರು.

ಪುರುಷರು ನಾಯಿಮರಿಗಳು ಸೇರಿದಂತೆ 29 ನಾಯಿಗಳಿಗೆ ಗುಂಡು ಹಾರಿಸಿದ್ದಾರೆ. ಹಲವಾರು ನಾಯಿಗಳು ಈ ಘಟನೆಯಲ್ಲಿ ಗಾಯಗೊಂಡಿವೆ. ನಾಯಿ ತಮ್ಮ ಮಕ್ಕಳನ್ನು ಕಚ್ಚಿದ್ದರಿಂದ ಹಾಗೂ ನಾಯಿಗಳು ದಾಳಿ ಮಾಡುವ ಕಾರಣದಿಂದ ಈ ಕೃತ್ಯ ಎಸಗಲಾಗಿದೆ.

ಪ್ರಶ್ನಿದವರಿಗೆ ಬೆದರಿಕೆ

ಪ್ರಶ್ನಿದವರಿಗೆ ಬೆದರಿಕೆ

ಪಾರುಗಾಣಿಕಾ ತಂಡ ಹೀಗೆ ಹೇಳಿದೆ, "ಇಬ್ಬರು ಪುರುಷರು ಬಂದೂಕುಗಳನ್ನು ಹಿಡಿದಿದ್ದರಿಂದ ಭದ್ರತಾ ತಂಡ ಹೆದರಿದೆ. ಪುರುಷರ ಗುಂಪು ನಾಯಿಗಳ ಗುಂಪಿಗೆ ಗುಂಡು ಹಾರಿಸುವುದನ್ನು ತಡೆಯಲು ಪ್ರಯತ್ನಿಸಿದರು, ಆದರೆ ಅವರು ತಂಡಕ್ಕೆ ಬೆದರಿಕೆ ಹಾಕಿದ್ದಾರೆ'' ಎಂದು ಅದು ಹೇಳಿದೆ

"ಈ ನಾಯಿಗಳು ಯಾರಿಗೂ ಯಾವುದೇ ಹಾನಿ ಮಾಡಿಲ್ಲ, ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗಿದೆ, ತುಂಬಾ ಸ್ನೇಹಪರ ಮತ್ತು ಚೆನ್ನಾಗಿ ಪ್ರೀತಿಸಲಾಗಿದೆ" ಎಂದು ಫೇಸ್‌ಬುಕ್ ಪೋಸ್ಟ್ ಮಾಡಲಾಗಿದೆ.

ಹೃದಯ ವಿದ್ರಾವಕ ಘಟನೆಯ ತನಿಖೆಗೆ ಆಗ್ರಹ

ಹೃದಯ ವಿದ್ರಾವಕ ಘಟನೆಯ ತನಿಖೆಗೆ ಆಗ್ರಹ

ದೋಹಾ ನ್ಯೂಸ್ ಪ್ರಕಾರ, ಈ ಘಟನೆಯು ಜನರಲ್ಲಿ ಆಕ್ರೋಶ ಮತ್ತು ಕಳವಳವನ್ನು ಹುಟ್ಟುಹಾಕಿದೆ. ಪ್ರಾಣಿ ಹಕ್ಕುಗಳ ಸುಸ್ಥಿರತೆಯ ಬ್ರ್ಯಾಂಡ್ ರೋನಿ ಹೆಲೌ ಈ ಹತ್ಯೆಯನ್ನು "ಅನಾಗರಿಕ ಕೃತ್ಯ ಮತ್ತು ಕತಾರಿ ಸಮಾಜಕ್ಕೆ ಬೆದರಿಕೆ" ಎಂದು ಖಂಡಿಸಿದರು. ಹೃದಯ ವಿದ್ರಾವಕ ಘಟನೆಯ ತನಿಖೆ ಮತ್ತು ಹಂತಕರನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಆನ್‌ಲೈನ್‌ನಲ್ಲಿ ಕೋಲಾಹಲ ಸೃಷ್ಟಿಸಿದ ಘಟನೆ

ಆನ್‌ಲೈನ್‌ನಲ್ಲಿ ಕೋಲಾಹಲ ಸೃಷ್ಟಿಸಿದ ಘಟನೆ

ಇತರರು ಕತಾರ್‌ನಲ್ಲಿ ಬಂದೂಕು ಕಾನೂನುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ಹೊಂದುವ ಹಕ್ಕನ್ನು ಏಕೆ ಹೊಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಒಬ್ಬ ಇಂಟರ್ನೆಟ್ ಬಳಕೆದಾರರು, 'ಗಲ್ಫ್ ಪ್ರದೇಶವು ಅಂತಹ ವಿಷಯಗಳಲ್ಲಿ ವಿಕಸನಗೊಳ್ಳಲು ಪ್ರಾರಂಭಿಸಬೇಕು. ಇದು ಅಕ್ಷಮ್ಯ ಅಪರಾಧ. ಬಡ ಮೂಖಪ್ರಾಣಿಗಳ ಹತ್ಯೆ ನಿಲ್ಲಬೇಕು' ಎಂದಿದ್ದಾರೆ. 'ಜನರ ಮನೆಯಲ್ಲಿ ಬಂದೂಕುಗಳನ್ನು ಇಟ್ಟುಕೊಂಡು ನಾಯಿಗಳ ಮೇಲೆ ಪ್ರಯೋಗ ಮಾಡುತ್ತಿದ್ದಾರೆ. ತಮ್ಮ ಗುರಿಗಳ ಪ್ರಯೋಗವನ್ನು ನಾಯಿಗಳ ಮೇಲೆ ಮಾಡುತ್ತಿದ್ದಾರೆ. ಕತಾರ್ ಸುರಕ್ಷಿತ ದೇಶವೇ?' ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಬಂದೂಕು ಪರವಾನಗೆ ಹೊಂದಿರುವ ಮಾಹಿತಿ ಕೊರತೆ

ಬಂದೂಕು ಪರವಾನಗೆ ಹೊಂದಿರುವ ಮಾಹಿತಿ ಕೊರತೆ

ಇಂಡಿಪೆಂಡೆಂಟ್ ಪ್ರಕಾರ, ಕತಾರ್‌ನಲ್ಲಿ ಗನ್ ಹೊಂದಲು ಒಬ್ಬರು ಆಂತರಿಕ ಸಚಿವಾಲಯದಿಂದ ಪರವಾನಗಿ ಪಡೆಯಬೇಕು. ಅಂಥವರು 21 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು ಕ್ರಿಮಿನಲ್ ದಾಖಲೆಯನ್ನು ಹೊಂದಿರಬಾರದು. ಮತ್ತೊಂದೆಡೆ, ಪರವಾನಗಿ ಪಡೆಯದ ಬಂದೂಕುಗಳನ್ನು ಹೊಂದಿದ್ದಕ್ಕಾಗಿ ದಂಡಗಳು ಅಥವಾ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಒಳಗುತ್ತಾರೆ. ಆದರೂ ಬಂದೂಕು ಪ್ರಯೋಗ ಮಾಡುವ ವ್ಯಕ್ತಿ ಹಾಗೂ ಅವರ ಬಳಿ ಇರುವ ಬಂದೂಕುಗಳಿಗೆ ಪರವಾಗಿ ಇದಿಯೋ ಇಲ್ಲವೆ ಎಂಬುದರ ಬಗ್ಗೆ ಈವರೆಗೂ ಮಾಹಿತಿ ಇಲ್ಲ. ಇದರ ವಿಚಾರಣೆಗೂ ಯಾರೂ ಮುಂದಾಗುತ್ತಿಲ್ಲ ಎನ್ನುವ ಆರೋಪವಿದೆ.

English summary
A group of armed men stormed a secured area in Qatar and killed 29 dogs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X