ಅಫ್ಘಾನ್ ರಾಜಕೀಯ ರ‍್ಯಾಲಿ ಮೇಲೆ ಗುಂಡಿನ ದಾಳಿ: 27 ಮಂದಿ ಹತ್ಯೆ

ಕಾಬುಲ್, ಮಾರ್ಚ್ 6: ಕಾಬುಲ್‌ನಲ್ಲಿ ಅಫ್ಘಾನ್ ರಾಜಕೀಯ ರ‍್ಯಾಲಿ ಮೇಲೆ ಗನ್‌ಮ್ಯಾನ್‌ನಿಂದ ನಡೆದ ಗುಂಡಿನ ದಾಳಿಯಲ್ಲಿ 27 ಮಂದಿ ಮೃತಪಟ್ಟಿದ್ದು, 29 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಅಫ್ಘಾನ್ ಮುಖ್ಯ ಕಾರ್ಯಕಾರಿ ಅಧಿಕಾರಿ ಅಬ್ದುಲ್ಲಾ ಅಬ್ದುಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಫ್ಘಾನ್ ಭದ್ರತಾ ಸಿಬ್ಬಂದಿಗಳು ಗನ್‌ಮ್ಯಾನ್‌ನನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಈ ದಾಳಿಯಲ್ಲಿ ನಮ್ಮ ಕೈವಾಡವಿಲ್ಲ ಎಂದು ತಾಲಿಬಾನ್ ಹೇಳಿದೆ. ಕಾಮಗಾರಿ ಹಂತದಲ್ಲಿರುವ ಕಟ್ಟಡದ ಆಸು ಪಾಸು ಪರಿಶೀಲನೆ ನಡೆಸುತ್ತಿದ್ದಾರೆ. ಅಮೆರಿಕ ಹಾಗೂ ತಾಲಿಬಾನ್ ಶಾಂತಿ ಒಪ್ಪಂದವನ್ನು ಮಾಡಿಕೊಂಡಿದೆ. ಹಾಗಾಗಿ ಅಫ್ಘಾನಿಸ್ತಾನದಲ್ಲಿರುವ ಅಮೆರಿಕಾ ಭದ್ರತಾ ಸಿಬ್ಬಂದಿಯನ್ನು ವಾಪಾಸ್ ಕರೆಸಿಕೊಂಡಿದೆ.

27 Killed In Attack On Afghan Political Rally

ಮಾರ್ಚ್ 4 ರಂದು ತಾಲಿಬಾನ್ ಉಗ್ರರ ವಿರುದ್ಧ ಅಮೆರಿಕ ಸೇನೆ ವಾಯು ದಾಳಿ ನಡೆಸಿತ್ತು. ಹೆಲ್ಮೆಡ್ ಪಾಂತ್ಯದಲ್ಲಿ ತಾಲಿಬಾನಿಗಳು ಅಫ್ಘಾನ್ ಪಡೆಗಳ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಬುಧವಾರ ತಾಲಿಬಾನ್ ವಿರುದ್ಧ ವಾಯು ದಾಳಿ ನಡೆಸಿರುವುದಾಗಿ ಅಮೆರಿಕ ಪಡೆ ವಕ್ತಾರರೊಬ್ಬರು ತಿಳಿಸಿದ್ದರು.

ತಾಲಿಬಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಬುಧವಾರದ ದಾಳಿ 11 ದಿನಗಳಲ್ಲಿ ಅಮೆರಿಕವು ತಾಲಿಬಾನ್ ವಿರುದ್ಧ ನಡೆಸಿದ ಮೊದಲ ದಾಳಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+