ಅಮೆರಿಕ–ಅಫ್ಗನ್ ಜಂಟಿ ಕಾರ್ಯಾಚರಣೆಗೆ 22 ಐಸಿಸ್ ಉಗ್ರರು ಫಿನಿಷ್

ಕಾಬೂಲ್‌, ಅಕ್ಟೋಬರ್ 1: ಅಮೆರಿಕ ಮತ್ತು ಅಫ್ಗಾನಿಸ್ತಾನ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಇಸ್ಲಾಮಿಕ್‌ ಸ್ಟೇಟ್‌(ಐಸಿಸ್) ಸಂಘಟನೆಗೆ ಸೇರಿದ 22 ಉಗ್ರರನ್ನು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನದ ನಂಗಹಾರ್ ಪ್ರಾಂತ್ಯದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ನಾಜಿಯಾನ್ ಮತ್ತು ಲಾಲ್ಪುರ್ ಜಿಲ್ಲೆಗಳಲ್ಲಿ ಉಗ್ರರು ಹತ್ಯೆಯಾಗಿದ್ದಾರೆ ಎಂದು ಅಫ್ಗಾನಿಸ್ತಾನದ ಸರ್ಕಾರಿ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಟೋಲೊ ನ್ಯೂಸ್ ವರದಿ ಮಾಡಿದೆ.

22 Pak, ISIS terrorists killed in US-Afghan joint military operation in Nangarhar

ಲಾಲ್ಪುರ್ ಜಿಲ್ಲೆಯ ಬಿಲಾ ಪ್ರದೇಶದಲ್ಲಿ ಅಫ್ಗಾನ್‌ ಸ್ಪೆಷಲ್ ಫೋರ್ಸ್ ಶುಕ್ರವಾರ ನಡೆಸಿದ ದಾಳಿಯಲ್ಲಿ ಏಳು ಪಾಕಿಸ್ತಾನಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಇನ್ನು ನಾಝಿನ್ ಜಿಲ್ಲೆಯ ಸ್ಪಿನ್ಝೈ ಪ್ರದೇಶದಲ್ಲಿ ಅಮೆರಿಕದ ಪಡೆ ನಡೆಸಿದ ವೈಮಾನಿಕ ದಾಳಿಗೆ ಹದಿನೈದು ಐಸಿಸ್ ಭಯೋತ್ಪಾದಕರು ಹತ್ಯೆಯಾಗಿದ್ದಾರೆ.

ಅಮೆರಿಕಾದ ವೈಮಾನಿಕ ದಾಳಿಯಲ್ಲಿ ಐಸಿಸ್ ಗೆ ಸೇರಿದ ಎರಡು ಅಡಗುತಾಣಗಳು ಕೂಡ ನಾಶವಾಗಿವೆ. ನಂಗಹಾರ್ ಪ್ರಾಂತ್ಯದಲ್ಲಿ ಅಮೆರಿಕಾ ಮತ್ತು ಅಫ್ಘನ್ ಪಡೆಗಳು ಜಂಟಿಯಾಗಿ ಉಗ್ರ ನಿಗ್ರಹ ಕಾರ್ಯಚರಣೆ ನಡೆಸುತ್ತಿದ್ದು ಅದರ ಭಾಗವಾಗಿ ಇದೀಗ 22 ಉಗ್ರರನ್ನು ಹೊಡೆದುರುಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+