ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: 2024, ಮೋದಿ ಒನ್ಸ್ ಮೋರ್; ಜರ್ಮನಿಯಲ್ಲಿ ಬಿಜೆಪಿಗೆ ಸಿಕ್ತು ಹೊಸ ಘೋಷಣೆ!

|
Google Oneindia Kannada News

ಬರ್ಲಿನ್, ಮೇ 3: ಭಾರತದಲ್ಲಿ ಮುಂಬರುವ 2024ರ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷವು ಹೊಸ ಘೋಷವಾಕ್ಯವನ್ನು ಕಂಡುಕೊಂಡಿದೆ. ಜರ್ಮನಿ ಪ್ರವಾಸಕ್ಕೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದೆ "2024, ಮೋದಿ ಒನ್ಸ್ ಮೋರ್" ಎನ್ನುವ ಘೋಷಣೆ ಕೂಗಲಾಗಿದೆ.

ಬರ್ಲಿನ್‌ನ ಪಾಟ್ಸ್‌ಡೇಮರ್ ಪ್ಲಾಟ್ಜ್‌ನಲ್ಲಿರುವ ಥಿಯೇಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡುವಾಗ ಈ ಘೋಷಣೆ ಮೊಳಗಿದೆ.

'ಮೊದಲು ದೇಶ ಒಂದಾಗಿತ್ತು, ನಂತರ ಇಬ್ಭಾಗವಾಗಿತ್ತು' ಮೋದಿ'ಮೊದಲು ದೇಶ ಒಂದಾಗಿತ್ತು, ನಂತರ ಇಬ್ಭಾಗವಾಗಿತ್ತು' ಮೋದಿ

ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣದ ಸಂದರ್ಭದಲ್ಲಿ 'ಮೋದಿ, ಮೋದಿ', 'ಭಾರತ್ ಮಾತಾ ಕಿ ಜೈ', 'ಮೋದಿ ಹೈ ತೋ ಮಮ್ಕಿನ್ ಹೈ' ಮತ್ತು '2024, ಮೋದಿ ಒನ್ಸ್ ಮೋರ್' ಎಂಬ ಘೋಷಣೆಗಳನ್ನು ಕೂಗಲಾಯಿತು.

ನವ ಭಾರತದ ಬಗ್ಗೆ ಉಲ್ಲೇಖ; ತಮ್ಮ ಭಾಷಣದ ಆರಂಭದಲ್ಲಿ, "ನಾನಿಲ್ಲಿ ನನ್ನ ಬಗ್ಗೆ ಅಥವಾ ಮೋದಿ ಸರ್ಕಾರದ ಬಗ್ಗೆ ಮಾತನಾಡುವುದಕ್ಕೆ ಬಂದಿಲ್ಲ" ಎಂದು ಹೇಳಿದರು.

2024 Modi Once More : BJP Found next election slogan in Germany

ಇಂದು ಜರ್ಮನಿಯಲ್ಲಿ ಭಾರತದ ಮಕ್ಕಳನ್ನು ಭೇಟಿಯಾಗುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಪ್ರಧಾನಿ ಮೋದಿ ಹೇಳಿದರು. ನವಭಾರತದ ಮಂತ್ರ ಜಪಿಸುತ್ತಿದ್ದಂತೆ ನೆರೆದಿದ್ದ ಜನರು ಹುಚ್ಚೆದ್ದು, ಘೋಷಣೆಗಳನ್ನು ಕೂಗುವುದಕ್ಕೆ ಶುರು ಮಾಡಿದರು.

"ಭಾರತವು ಹೊಸ, ಪುನರುತ್ಥಾನದ ಸಂಕಲ್ಪದೊಂದಿಗೆ ಮುಂದುವರಿಯಲು ಮನಸ್ಸು ಮಾಡಿದೆ. ಕಳೆದ ಮೂರು ದಶಕಗಳ ಕಾಲದ ರಾಜಕೀಯ ಅಸ್ಥಿರತೆಯನ್ನು ಗುಂಡಿ ಒತ್ತುವುದರ ಮೂಲಕ ಕೊನೆಗೊಳಿಸಿದೆ. ಭಾರತ ಇಂದು ಪ್ರತಿಯೊಂದು ಮತದ ಮೌಲ್ಯವನ್ನು ತಿಳಿದುಕೊಂಡಿದೆ" ಎಂದು ಮೋದಿ ಹೇಳಿದರು.

2024 Modi Once More : BJP Found next election slogan in Germany

ಭಾರತದಲ್ಲಿ 68,000 ಸ್ಟಾರ್ಟ್ಅಪ್; "ಹೊಸ ಭಾರತವು ರಿಸ್ಕ್ ತೆಗೆದುಕೊಳ್ಳುವುದರಲ್ಲಿ ಆವಿಷ್ಕಾರಗಳನ್ನು ಮಾಡುವುದಕ್ಕೆ ಸದಾ ಸಿದ್ಧವಾಗಿದೆ. ಕಳೆದ 2014ರ ವೇಳೆಯಲ್ಲಿ ಸುಮಾರಿಗೆ 200 ರಿಂದ 400 ಸ್ಟಾರ್ಟ್‌ಅಪ್‌ಗಳನ್ನು ಹೊಂದಿದ್ದ ಭಾರತವು ಇಂದು 68,000 ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿದೆ. ಡಜನ್‌ಗಟ್ಟಲೆ ಯುನಿಕಾರ್ನ್‌ಗಳು ಈಗಾಗಲೇ ಯುಎಸ್‌ಡಿ 10 ಶತಕೋಟಿ ಮೌಲ್ಯಗಳೊಂದಿಗೆ ಡೆಕಾ-ಕಾರ್ನ್‌ಗಳಾಗಿ ಮಾರ್ಪಟ್ಟಿವೆ" ಎಂದು ಮೋದಿ ಹೇಳಿದರು.

English summary
2024, Modi Once More': BJP Found next election slogan in Germany.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X