ಭಾರತದ ಮೇಲೆ ಯುದ್ಧಕ್ಕೆ ಮುಂದಾಗಿದ್ದ 2 ರೂಪಾಯಿಯ ಬಾಂಗ್ಲಾದೇಶ!

ಬಾಂಗ್ಲಾದೇಶದ ಉದಯಕ್ಕೆ ಭಾರತವೇ ಕಾರಣ. ಆದರೆ, ಭಾರತ ಹಾಗೂ ಪಾಕಿಸ್ತಾನದ ನಡುವೆ ಅಘೋಷಿತ ಯುದ್ಧ ನಡೆದ ಸಂದರ್ಭದಲ್ಲಿ ಭಾರತದ ಮೇಲೆ ದಾಳಿ ಮಾಡುವುದಕ್ಕೆ ಬಾಂಗ್ಲಾದೇಶವು ಮುಂದಾಗಿತ್ತು ಎನ್ನುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಇಷ್ಟು ವರ್ಷಗಳ ಭಾರತಕ್ಕೆ ನಿಯತ್ತಾಗಿದ್ದ ಬಾಂಗ್ಲಾದೇಶವು ಇತ್ತೀಚಿನ ವರ್ಷಗಳಲ್ಲಿ ಭಾರತದ ವಿರುದ್ಧವೇ ಧ್ವನಿ ಎತ್ತಿದೆ. ಪಾಕಿಸ್ತಾನ ಹಾಗೂ ಚೀನಾ ದೇಶದೊಂದಿಗೆ ಕೈಜೋಡಿಸಿರುವ ಬಾಂಗ್ಲಾದೇಶವು ಈಗ ಭಾರತದ ಮಿತ್ರರಾಷ್ಟ್ರವಾಗಿ ಉಳಿದಿಲ್ಲ. ಹೌದು ಭಾರತದ ವಿರುದ್ಧ ಬಾಂಗ್ಲಾದೇಶ ತನ್ನ ಕುತಂತ್ರ ಬುದ್ಧಿಯನ್ನು ಪ್ರದರ್ಶಿಸುತ್ತಿರುವುದು ಈಗ ಬಹಿರಂಗವಾಗಿದೆ.

ಬಾಂಗ್ಲಾದೇಶದಲ್ಲಿ ಆಂತರಿಕ ಸಂಘರ್ಷಗಳು ಇನ್ನೂ ಮುಕ್ತಾಯವಾಗಿಲ್ಲ. ಬಾಂಗ್ಲಾದೇಶದ ಸೇನೆ ಹಾಗೂ ಅಲ್ಲಿನ ಮಧ್ಯಂತರ ಸರ್ಕಾರದೊಂದಿಗೆ ಸಂಘರ್ಷಗಳು ಮುಂದುವರಿಯುತ್ತಲ್ಲೇ ಇವೆ. ಬಾಂಗ್ಲಾದೇಶದಲ್ಲಿ ಇದೀಗ ಪೂರ್ಣ ಪ್ರಮಾಣದ ಸರ್ಕಾರ ಅಥವಾ ಆಡಳಿತ ಇಲ್ಲ. ಇಲ್ಲಿ ಸೇನೆ ಹಾಗೂ ಮಧ್ಯಂತರ ಸರ್ಕಾರ ಇದೆ. ಸೇನೆಯು ಬಾಂಗ್ಲಾದೇಶದಲ್ಲಿ ಶೀಘ್ರ ಚುನಾವಣೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದರೆ, ಮಧ್ಯಂತರ ಸರ್ಕಾರದ ಅಧ್ಯಕ್ಷ ಮೊಹಮ್ಮದ್ ಯೂನುಸ್ ಅವರು ಚುನಾವಣೆಯನ್ನು ಮುಂದೂಡುವ ಸರ್ಕಸ್ ಮಾಡುತ್ತಲ್ಲೇ ಇದ್ದಾರೆ. ಸೇನೆ ಹಾಗೂ ಮಧ್ಯಂತರ ಸರ್ಕಾರದ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಈ ರೀತಿ ಇರುವಾಗಲೇ ಬಾಂಗ್ಲಾದೇಶವು ಭಾರತದಂತಹ ದೈತ್ಯ ಸೇನೆಯ ಮೇಲೆ ದಾಳಿಗೆ ಮುಂದಾಗಿತ್ತು ಎನ್ನಲಾಗಿದೆ.

2 rupees Bangladesh was preparing for war with India

ಈಗಾಗಲೇ ಹೇಳಿರುವಂತೆ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಬಾಂಗ್ಲಾ ಕೈಜೋಡಿಸಿದೆ. ಶತ್ರವಿನ ಶತ್ರು ಮಿತ್ರ ಎನ್ನುವಂತೆ ಮೂರು ದೇಶಗಳು ಒಂದಾಗಿದೆ. ಈ ಮೂರು ದೇಶಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹತ್ತಿರವಾಗಿದ್ದು. ಭಾರತದ ವಿರುದ್ಧ ತಮ್ಮ ಕುತಂತ್ರ ಬುದ್ಧಿಯನ್ನು ಪ್ರದರ್ಶಿಸುವುದನ್ನು ಮುಂದುವರಿಸಿದೆ. ಈಚೆಗೆ ಭಾರತ ಹಾಗೂ ಪಾಕಿಸ್ತಾನದ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿತ್ತು. ಆ ಸಂದರ್ಭದಲ್ಲಿ ಭಾರತದ ಮೇಲೆ ದಾಳಿ ಮಾಡುವುದಕ್ಕೆ ಬಾಂಗ್ಲಾ ಸರ್ಕಾರವು ಮುಂದಾಗಿತ್ತು. ಆದರೆ, ಇದನ್ನು ತಡೆದಿದ್ದು ಅಲ್ಲಿನ ಮಿಲಿಟರಿ ಎಂದು ಹೇಳಲಾಗಿದೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ಪರಿಸ್ಥಿತಿ ಏರ್ಪಟ್ಟಾಗಲೇ ಭಾರತವೇನಾದರೂ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಭಾರತದ ವಿರುದ್ಧ ದಾಳಿ ಮಾಡಲಿದ್ದೇವೆ. ಭಾರತದ ಈಶಾನ್ಯ ರಾಜ್ಯದ 7 ರಾಜ್ಯಗಳನ್ನು ನಾವು ಸುಲಭವಾಗಿ ವಶಪಡಿಸಿಕೊಳ್ಳಲು ಸಾಧ್ಯವಿದೆ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಅಧ್ಯಕ್ಷ ಮೊಹಮ್ಮದ್ ಯೂನುಸ್ ಕೊಟ್ಟಿದ್ದರು. ಆದರೆ, ತನ್ನ ರಾಷ್ಟ್ರದ ಉದಯಕ್ಕೆ ಕಾರಣವಾಗಿ ಆ ನಂತರವು ಆರ್ಥಿಕವಾಗಿ ಭದ್ರ ನೆಲೆಯನ್ನು ಕಂಡುಕೊಳ್ಳುವುದಕ್ಕೆ ಸಹಾಯ ಮಾಡಿದ ಭಾರತದ ಮೇಲೆಯೇ ಬಾಂಗ್ಲಾದೇಶ ದಾಳಿ ಮಾಡಲು ಮುಂದಾಗಿತ್ತು ಎನ್ನುವ ವಿಚಾರವು ಈಗ ಸಂಚಲನ ಸೃಷ್ಟಿ ಮಾಡಿದೆ.

ಚುನಾಯಿತ ಸರ್ಕಾರ ಬೇಕು: ಇನ್ನು ಬಾಂಗ್ಲಾದೇಶದಲ್ಲಿ ಚುನಾಯಿತ ಸರ್ಕಾರ ಅಧಿಕಾರದಲ್ಲಿ ಇರಬೇಕು. ಜನರಿಂದ ಆಯ್ಕೆಯಾದವರು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಬಾಂಗ್ಲದೇಶದಲ್ಲಿ ಚುನಾವಣೆ ನಡೆಯಬೇಕು ಎಂದು ಅಲ್ಲಿನ ಮಿಲಿಟರಿ ಒತ್ತಾಯಿಸುತ್ತಿದೆ. ಅಲ್ಲದೇ ಜನರಿಂದ ಆಯ್ಕೆಯಾಗದೆ ಇರುವವರು ದೇಶಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದೆ. ದೇಶದಲ್ಲಿ ಪೊಲೀಸಿಂಗ್ ಅಥವಾ ಮಿಲಿಟರಿ ನೀತಿ ಜಾರಿಯಾಗಬಾರದು ಚುನಾವಣೆ ನಡೆಯಬೇಕು. ಮಿಲಿಟರಿ ಕೆಲಸ ದೇಶದ ರಕ್ಷಣೆ ಮಾಡುವುದು ಎಂದು ಮಿಲಿಟರಿ ಹೇಳಿದೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+