ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಕೋಪಕ್ಕೆ 2 ಕಾರಣ: ರಷ್ಯಾದಿಂದ ಎಷ್ಟು ತೈಲ ಖರೀದಿ ?
ಒಂದು ಕಾಲದಲ್ಲಿ ಆತ್ಮೀಯ ಮಿತ್ರರಂತೆ ಇದ್ದ ಭಾರತ ಹಾಗೂ ಅಮೆರಿಕಾದ ಸ್ನೇಹ ಸಂಬಂಧಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹುಳಿ ಹಿಂಡಿದ್ದಾರೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಮುನಿಸಿಕೊಂಡಿದ್ದಾರೆ. ಆದರೆ ಅವರು ಭಾರತದ ಮೇಲೆ ಮುನಿಸಿಕೊಳ್ಳುವುದಕ್ಕೆ ಅಮೆರಿಕಾ ಹೇಳಿದಂತೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದು ಅಲ್ಲ. ಅಲ್ಲದೇ ರಷ್ಯಾದಿಂದ - ಭಾರತ ಎಷ್ಟು ತೈಲ (ಕಚ್ಚಾ ತೈಲ - ಪೆಟ್ರೋಲ್ - ಡೀಸೆಲ್) ಖರೀದಿ ಮಾಡುತ್ತಿದೆ. ಆದರೂ ಯಾಕೆ ಲಾಭವಾಗುತ್ತಿಲ್ಲ. ಅಲ್ಲದೇ ಭಾರತ - ರಷ್ಯಾ ಹಾಗೂ ಚೀನಾ ಒಂದಾಗಿರುವುದು ಅಮೆರಿಕಾಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದರ ಎಲ್ಲಾ ಮಾಹಿತಿ ಈ ಲೇಖನದಲ್ಲಿ ನೋಡೋಣ ಬನ್ನಿ.
ಬದಲಾದ ಸನ್ನಿವೇಶದಲ್ಲಿ ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಚೀನಾದೊಂದಿಗೆ ಭಾರತ ಕೈಜೋಡಿಸಿದೆ. ಆದರೆ ಭಾರತ ತನ್ನ ರಾಜತಾಂತ್ರಿಕ ತಂತ್ರದಿಂದಲೇ ವಿಶ್ವದಲ್ಲಿ ಸದ್ದು ಮಾಡುತ್ತಿದೆ. ಆದರೆ ಭಾರತಕ್ಕೂ ಈ ರೀತಿ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವೂ ಹೌದು. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಮೊದಲ ಹಂತದಲ್ಲಿ ಶೇ 25% ಎರಡನೇ ಹಂತದಲ್ಲಿ ಶೇ 25% ಸೇರಿ ಒಟ್ಟು ಶೇ 50% ಸುಂಕ ವಿಧಿಸಲಾಗಿದೆ. ಇದರಿಂದ ಭಾರತಕ್ಕೆ ಭಾರೀ ಸಂಕಷ್ಟ ಎದುರಾಗಿದೆ. ಇದೇ ಸಂದರ್ಭದಲ್ಲಿ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುವ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ.

ಭಾರತವು ರಷ್ಯಾದಿಂದ ದಿನಕ್ಕೆ ಸುಮಾರು 1.7 ರಿಂದ 2.15 ಮಿಲಿಯನ್ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ರಷ್ಯಾ ಮತ್ತು ಉಕ್ರೇನ್‌ನ ನಡುವೆ ಯುದ್ಧ ನಡೆಯುವುದಕ್ಕಿಂತ ಮುಂಚೆ ಕೇವಲ ಶೇ 2% ಶತವೂ ಇರಲಿಲ್ಲ. ಆಗಸ್ಟ್ 2025 ರ ಹೊತ್ತಿಗೆ ಅದರ ಒಟ್ಟು ಕಚ್ಚಾ ತೈಲ ಆಮದಿನ ಸರಿಸುಮಾರು 35-40% ರಷ್ಟಿದೆ. ಉಕ್ರೇನ್ ಯುದ್ಧಪೂರ್ವದಲ್ಲಿ ಕೇವಲ 0.2% ರಷ್ಟಿತ್ತು. ಪಾಶ್ಚಿಮಾತ್ಯ ದೇಶಗಳಿಂದ ತೈಲ ಖರೀದಿ ಪ್ರಮಾಣವನ್ನು ಭಾರತ ಕಡಿಮೆ ಮಾಡಿದೆ. ಆದರೆ ಇದರಿಂದ ಭಾರತದಲ್ಲಿ ತೈಲ - ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏನು ಇಳಿಕೆ ಆಗಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ.
ಅಮೆರಿಕಾ ಅಧ್ಯಕ್ಷ ಕೋಪಕ್ಕೆ ಎರಡು ಕಾರಣ: ಭಾರತದ ಮೇಲೆ ಅಮೆರಿಕಾದ ಅಧ್ಯಕ್ಷ ಭಾರೀ ಸುಂಕವನ್ನು (Tariff) ವಿಧಿಸುವುದಿಲ್ಲ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ ಅಮೆರಿಕಾ - ಭಾರತಕ್ಕೆ ಶೇ 50 ತೆರಿಗೆ ಶಾಕ್ ನೀಡಿದೆ. ಇದಕ್ಕೆ ಮುಖ್ಯ ಕಾರಣ ರಷ್ಯಾದಿಂದ ಭಾರತ ತೈಲ ಖರೀದಿ ಮಾಡುತ್ತಿರುವುದು ಮಾತ್ರವಲ್ಲ. ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಕದನ ವಿರಾಮ ಘೋಷಣೆ ಮಾಡಿದ್ದಕ್ಕೆ ಅಮೆರಿಕಾ ಕಾರಣ ಎನ್ನುವ ಮಾತನ್ನು ಭಾರತ ಒಪ್ಪಿಕೊಳ್ಳದೆ ಇರುವುದೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲಿಯ ವರೆಗೆ ಭಾರತದ ಮೇಲೆ ಸುಂಕ ವಿಧಿಸುವ ಪ್ರಸ್ತಾವನೆ ಅಂತಿಮವಾಗಿರಲಿಲ್ಲ. ಯಾವಾಗ ಪಾಕಿಸ್ತಾನದಂತೆ ಭಾರತ ಎಲ್ಲದಕ್ಕೂ ತಲೆದೂಗಲಿಲ್ಲವೋ ಆಗ ಸುಂಕ ಅಸ್ತ್ರ ಬಳಸಲಾಗಿದೆ.
ಅಮೆರಿಕಾದಲ್ಲಿ ಭಾರತದ "ಬ್ರಾಹ್ಮಣ" ಚರ್ಚೆ: ಭಾರತದಲ್ಲಿ ಜಾತಿ ವಿಚಾರ ಚರ್ಚೆ ಆಗುವುದು ಸಾಮಾನ್ಯ ಆದರೆ, ಇದೀಗ ಅಮೆರಿಕಾದಲ್ಲಿ ಭಾರತದ ಜಾತಿ ವಿಚಾರ ಚರ್ಚೆ ಆಗುತ್ತಿದೆ. ರಷ್ಯಾದಿಂದ ಭಾರತವು ತೈಲ ಖರೀದಿಸುತ್ತಿರುವುದರಿಂದ ಭಾರತದ ಬ್ರಾಹ್ಮಣರಿಗೆ ಲಾಭವಾಗುತ್ತಿದ್ದು, ಈ ವಿಷಯವನ್ನು ಬೇರೆಯವರು ಗಮನಿಸಬೇಕು ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೋ ಹೇಳಿದ್ದಾರೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾತಿ ಚರ್ಚೆಗೆ ಕಾರಣವಾಗಿದೆ.












Click it and Unblock the Notifications