ಇಸ್ತಾಂಬುಲ್ ಉಗ್ರರ ದಾಳಿಯಲ್ಲಿ ಇಬ್ಬರು ಭಾರತೀಯರ ಸಾವು

By: ವಿಕಾಸ್ ನಂಜಪ್ಪ
Subscribe to Oneindia Kannada

ಇಸ್ತಾಂಬುಲ್, ಜನವರಿ 2: ಇಸ್ತಾಂಬುಲ್ ನ ನೈಟ್ ಕ್ಲಬ್ ನಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 39 ಮಂದಿ ಮೃತಪಟ್ಟು, 40 ಮಂದಿ ಗಾಯಗೊಂಡಿದ್ದಾರೆ. "ಮೃತಪಟ್ಟ 39 ಮಂದಿ ಪೈಕಿ ಇಬ್ಬರು ಭಾರತೀಯರು" ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ದಾಳಿಕೋರರು ಸಂತಾ ಕ್ಲಾಸ್ ವೇಷ ಧರಿಸಿದ್ದರು ಎಂದು ವರದಿಯಾಗಿದೆ.

ಸ್ಥಳೀಯ ಕಾಲಮಾನ 1.30ರ ವೇಳೆಗೆ ಆರ್ಟಾಕಾಯ್ ಪ್ರದೇಶದಲ್ಲಿರುವ ರೈನಾ ಕ್ಲಬ್ ಮೇಲೆ ದಾಳಿ ನಡೆದಿತ್ತು. ಆ ಸಮಯದಲ್ಲಿ ಕ್ಲಬ್ ನೊಳಗೆ ನೂರಾರು ಮಂದಿ ಇದ್ದರು. ಇದು ಉಗ್ರರ ದಾಳಿ ಎಂದು ಅಧಿಕಾರಿಗಳು ಖಾತ್ರಿ ಪಡಿಸಿದ್ದಾರೆ. ಇಸ್ತಾಂಬುಲ್ ನಲ್ಲಿ ಹೈ ಅಲರ್ಟ್ ಇತ್ತು. 17 ಸಾವಿರ ಅಧಿಕಾರಿಗಳು ಕರ್ತವ್ಯದಲ್ಲಿದ್ದರು.[ಇಸ್ತಾನ್ಬುಲ್ ನೈಟ್ ಕ್ಲಬ್ ಮೇಲೆ ಉಗ್ರರ ದಾಳಿ, 35 ಜನರ ಹತ್ಯೆ]

Turkey police

ಕಳೆದ ಒಂದು ವರ್ಷದಿಂದ ಐಎಸ್ ಉಗ್ರರಿಗೆ ಇಸ್ತಾಂಬುಲ್ ಗುರಿಯಾಗಿದೆ. ಹದಿನೈದು ದಿನಗಳ ಹಿಂದಷ್ಟೇ ಅಂಕಾರದಲ್ಲಿ ರಷ್ಯಾ ರಾಯಭಾರಿ ಆಂಡ್ರಿ ಕಾರ್ಲೋ ಅವರನ್ನು ಟರ್ಕಿಯ ಪೊಲೀಸ್ ಅಧಿಕಾರಿ ಮೇವ್ಲಟ್ ಮೆರ್ಟ್ ಅಲ್ತಿಂಟಾಸ್ ಎಂಬಾತ ಹತ್ಯೆ ಮಾಡಿದ್ದ. ಹತ್ಯೆಯ ನಂತರ, ಸಿರಿಯಾ ಅಲೆಪ್ಪೊದ ಸಂಘರ್ಷದಲ್ಲಿ ರಷ್ಯಾ ತಲೆ ತೂರಿಸುತ್ತಿದೆ. ಅದಕ್ಕೆ ಈ ಹತ್ಯೆ ಪ್ರತೀಕಾರ ಎಂದು ಘೋಷಣೆ ಕೂಗಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 39 people were killed and 40 others injured in an attack on a nightclub in Istanbul. India's External Affairs Minister Sushma Swaraj said two of the 39 killed were Indians.Reports say that the attackers was dressed in a Santa Claus costume.
Please Wait while comments are loading...