Breaking: 17 ಜನರ ಉಸಿರು ಕಿತ್ತುಕೊಂಡ ಚೀನಾ ರೆಸ್ಟೋರೆಂಟ್‌ನ ಬೆಂಕಿ ಅವಘಡ

ಬೀಜಿಂಗ್, ಸೆಪ್ಟೆಂಬರ್ 28: ಈಶಾನ್ಯ ಚೀನಾದ ರೆಸ್ಟೋರೆಂಟ್‌ನಲ್ಲಿ ಬುಧವಾರ ಸಂಭವಿಸಿದ ಅಗ್ನಿ ದುರಂತದಲ್ಲಿ 17 ಜನರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಚಾಂಗ್ಚುನ್ ನಗರದ ಉಪಾಹಾರ ಗೃಹದಲ್ಲಿ ಮಧ್ಯಾಹ್ನ 12:40ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಸರ್ಕಾರವು ವೈಬೋ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದರು.

ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

17 peoples death, 3 injured in northeast China restaurant fire incident

ಚೀನಾದಲ್ಲಿ ಅಗ್ನಿ ಅವಘಡ ಇದೇ ಮೊದಲಲ್ಲ:

ಚೀನಾದಲ್ಲಿ ಈ ರೀತಿಯ ಮಾರಣಾಂತಿಕ ಅಗ್ನಿ ಅವಘಡದ ಘಟನೆಗಳು ಇದೇ ಮೊದಲೇನೂ ಅಲ್ಲ. ಅನಧಿಕೃತ ಕಟ್ಟಡಗಳ ನಿರ್ಮಾಣ, ಬೆಂಕಿ ಅವಘಡಗಳಿಂದ ಜನರು ಆಗಾಗ್ಗೆ ಪ್ರಾಣ ಕಳೆದುಕೊಳ್ಳುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ.

ಈ ತಿಂಗಳ ಆರಂಭದಲ್ಲಿ ಚೀನಾದ ಕೇಂದ್ರ ನಗರವಾದ ಚಾಂಗ್ಶಾದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಚೀನಾ ಟೆಲಿಕಾಂನ ಕಚೇರಿಯನ್ನು ಹೊಂದಿರುವ ಗಗನಚುಂಬಿ ಕಟ್ಟಡದ ಭಾಗವು ಹೊತ್ತಿ ಉರಿದಿದ್ದರೂ, ಯಾವುದೇ ರೀತಿ ಸಾವು-ನೋಗಿಳ ಕುರಿತು ವರದಿ ಆಗಿರಲಿಲ್ಲ.

17 peoples death, 3 injured in northeast China restaurant fire incident

ಕಳೆದ ವರ್ಷ ಜುಲೈನಲ್ಲಿ ಈಶಾನ್ಯ ಜಿಲಿನ್ ಪ್ರಾಂತ್ಯದಲ್ಲಿ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡು 15 ಮಂದಿ ಸಜೀವ ದಹನಗೊಂಡಿದ್ದು, 25 ಜನರು ಗಾಯಗೊಂಡರು ಎಂದು ರಾಜ್ಯ ಮಾಧ್ಯಮ ವರದಿಗಳು ತಿಳಿಸಿದ್ದವು.

ಇದಕ್ಕೂ ಒಂದು ತಿಂಗಳ ಮೊದಲು, ಮಧ್ಯ ಹೆನಾನ್ ಪ್ರಾಂತ್ಯದ ಸಮರ ಕಲೆಗಳ ಶಾಲೆಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 18 ಜನರು ಮೃತಪಟ್ಟಿದ್ದು, ಅದರಲ್ಲಿ ಹೆಚ್ಚಾಗಿ ಮಕ್ಕಳೇ ಇದ್ದರು. 2017ರಲ್ಲಿ ಬೀಜಿಂಗ್‌ನ ವಲಸಿಗ ನೆರೆಹೊರೆಯಲ್ಲಿ ಇನ್ನೂ ಎರಡು ಡಜನ್ ಜನರು ಬೆಂಕಿಯಲ್ಲಿ ಮೃತಪಟ್ಟರು. 2010 ರಲ್ಲಿ 28 ಅಂತಸ್ತಿನ ಶಾಂಘೈ ವಸತಿ ಬ್ಲಾಕ್‌ನಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಾಗ 58 ಜನರು ಉಸಿರು ಚೆಲ್ಲಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+