ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಮಾರಿ ಕೊರೊನಾ ಸೋಂಕಿನಿಂದ 14 ತಿಂಗಳ ಮಗು ಸಾವು

|
Google Oneindia Kannada News

ಅಹಮದಾಬಾದ್, ಏಪ್ರಿಲ್ 8: ಜಗತ್ತನ್ನೇ ಅರಿಯದ 14 ತಿಂಗಳ ಹಸುಗೂಸು ಕೊರೊನಾ ವೈರಸ್‌ ಮಹಾಮಾರಿಗೆ ಬಲಿಯಾಗಿರುವ ಘಟನೆ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿದೆ. ಕಳೆದ ಎರಡು ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು, ಚಿಕಿತ್ಸೆಗೆ ಸ್ಪಂದಿಸಿದ ಬಹುಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ.

ಉತ್ತರ ಪ್ರದೇಶದ ಮೂಲದ ವಲಸೆ ಕಾರ್ಮಿಕರೊಬ್ಬರ ಗಂಡು ಮಗು ಇದಾಗಿದ್ದು, ಯಾವುದೇ ವಿದೇಶಿ ಪ್ರಯಾಣದ ಇತಿಹಾಸ ಹಾಗೂ ಸೋಂಕಿತ ವ್ಯಕ್ತಿಗಳ ಸಂಪರ್ಕದ ಬಗ್ಗೆ ಮಾಹಿತಿ ಇಲ್ಲ.ಲ. ಆದರೂ ಏಪ್ರಿಲ್ 5 ರಂದು ಮಗುವಿಗೆ ಕೊರೊನಾ ಸೋಂಕು ತಗುಲಿರುವುದು ದಢೃವಾಗಿತ್ತು. ಐಸೋಲೇಶನ್‌ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಿದರೂ ಮಗು ಬದುಕುಳಿಯಲಿಲ್ಲ.

ಎಲ್ಲೂ ಹೋಗದ 14 ತಿಂಗಳ ಕಂದಮ್ಮನಿಗೆ ಕೊರೊನಾ ಬಂದಿದ್ದು ಹೇಗೆ.?ಎಲ್ಲೂ ಹೋಗದ 14 ತಿಂಗಳ ಕಂದಮ್ಮನಿಗೆ ಕೊರೊನಾ ಬಂದಿದ್ದು ಹೇಗೆ.?

ಈ ಕುರಿತು ಪಿಟಿಐ ಮತ್ತು ಎಎನ್‌ಐ ಸುದ್ದಿ ಸಂಸ್ಥೆಗಳು ಅಧಿಕೃತಗೊಳಿಸಿದೆ. ಈ ಮೂಲಕ ವೃದ್ಧರು, ಮಧ್ಯವಯಸ್ಸಿನವರಿಗೆ ಹಾಗೂ ಯುವಕರಿಗೆ ಮಾತ್ರ ಕೊರೊನಾ ಸೋಂಕು ಅಪಾಯ ಎಂದು ನಂಬಿಕೊಂಡಿದ್ದವರಿಗೆ ಈ ಸಾವು ಆತಂಕ ಹೆಚ್ಚಿಸಿದೆ.

14 Month Old Child Died From Coronavirus

ಗುಜರಾತ್‌ನಲ್ಲಿ ಇದುವರೆಗೂ ಮೃತಪಟ್ಟವರ ಪೈಕಿ ಇದು ಅತ್ಯಂತ ಕಡಿಮೆ ವಯಸ್ಸಿನ ಮಗು ಎಂದು ವರದಿಯಾಗಿದೆ. ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 16ಕ್ಕೆ ಏರಿದೆ. ರಾಜ್ಯದಲ್ಲಿ ಇದುವರೆಗೂ 175 ಜನರಲ್ಲಿ ಕೊವಿಡ್ 19 ಸೋಂಕು ಪತ್ತೆಯಾಗಿದೆ.

ಅಂದ್ಹಾಗೆ, ಆ ಮಗುವಿನ ಪೋಷಕರಲ್ಲಿ ಕೊರೊನಾ ವೈರಸ್‌ಗೆ ಸಂಬಂಧಪಟ್ಟ ಯಾವುದೇ ರೋಗಲಕ್ಷಣಗಳು ಕಂಡು ಬಂದಿಲ್ಲ. ಆದರೂ ಮುಂಜಾಗ್ರತೆ ಕ್ರಮವಾಗಿ ಅವರನ್ನು ಕ್ವಾರೆಂಟೈನ್‌ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

English summary
A 14-month-old child died from coronavirus in Gujarat's Jamnagar on April 7th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X