7 ದಿನದಲ್ಲಿ ಗುಣಮುಖರಾದರೂ ಕೋವಿಡ್‌ ಸೋಂಕಿತರಿಗೆ 14 ದಿನ ಕ್ವಾರಂಟೈನ್‌ ಕಡ್ಡಾಯ: WHO

ಜಿನಿವಾ, ಜನವರಿ 05: ವಿಶ್ವದಾದ್ಯಂತ ಕೊರೊನಾವೈರಸ್‌ ಸೋಂಕಿನ ಆತಂಕ ಸೃಷ್ಟಿ ಆಗಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯು ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಿದೆ. ಕೊರೊನಾ ವೈರಸ್‌ ಸೋಂಕಿತರು 7 ದಿನದಲ್ಲಿ ಗುಣಮುಖರಾದರೂ ಕೂಡಾ ಅವರಿಗೆ 14 ದಿನಗಳ ಕ್ವಾರಂಟೈನ್‌ ಕಡ್ಡಾಯ ಎಂದು ಹೇಳಿದೆ.

ಎಲ್ಲಾ ಕೊರೊನಾ ಸೋಂಕಿತರು ಕನಿಷ್ಠ ಐದರಿಂದ ಏಳು ದಿನದ ಒಳಗೆ ಸೋಂಕಿನಿಂದ ಗುಣಮುಖರಾಗುತ್ತಾರೆ. ಆದರೂ ಕೂಡಾ ಕೊರೊನಾ ಸೋಂಕಿತರು 14 ದಿನಗಳ ಕ್ವಾರಂಟೈನ್‌ಗೆ ಒಳಗಾಗುವುದು ಉತ್ತಮ ಎಂದು ಮಂಗಳವಾರ ಮಾಧ್ಯಮಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ನಿರ್ವಹಣಾ ಸಹಾಯಕ ಗುಂಪಿನ ಅಬ್ದಿ ಮಹಮುದ್‌, ಆಯಾ ರಾಷ್ಟ್ರಗಳು ಈ ಕ್ವಾರಂಟೈನ್‌ ಬಗ್ಗೆ ಸರಿಯಾದ ಒಂದು ನಿರ್ಧಾರವನ್ನು ಕೈಗೊಳ್ಳಬೇಕು. ಎಷ್ಟು ಸಮಯದವರೆಗೆ ಕ್ವಾರಂಟೈನ್‌ ಇರಬೇಕು ಎಂಬ ಬಗ್ಗೆ ರಾಷ್ಟ್ರಗಳು ನಿರ್ಧಾರ ಮಾಡಲಿ. ಯಾವ ರಾಷ್ಟ್ರದಲ್ಲಿ ಕಡಿಮೆ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿ ಆಗಿದೆಯೋ ಆ ರಾಷ್ಟ್ರದಲ್ಲಿ ಹೆಚ್ಚು ದೀರ್ಘ ಕಾಲ ಕ್ವಾರಂಟೈನ್‌ ಇದ್ದರೆ, ಅಲ್ಲಿ ಕೋವಿಡ್‌ ಸೋಂಕನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಯಾವ ಪ್ರದೇಶದಲ್ಲಿ ಹೆಚ್ಚು ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿ ಆಗುತ್ತದೆಯೋ ಅಲ್ಲಿ, ರಾಷ್ಟ್ರದ ಕಡಿಮೆ ಸಮಯದ ಕ್ವಾರಂಟೈನ್‌ ಅನ್ನು ಮಾಡಬಹುದು," ಎಂದು ಸಲಹೆ ನೀಡಿದ್ದಾರೆ.

14-day Quarantine a Must for COVID Patients Even if They Recover Within 7 Days Says WHO

"ಇನ್ಫ್ಲುಯೆನ್ಸ ಮತ್ತು ಕೊರೊನಾ ವೈರಸ್‌ ಎರಡರಿಂದಲೂ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ಆದರೂ ಇವೆರಡೂ ದೇಹವನ್ನು ವಿಭಿನ್ನ ರೀತಿಯಲ್ಲಿ ಆಕ್ರಮಣ ಮಾಡುವ ಪ್ರತ್ಯೇಕ ವೈರಸ್‌ಗಳಾಗಿರುವುದರಿಂದ, ಹೊಸ ವೈರಸ್‌ಗಳು ಸ್ವಲ್ಪ ಅಪಾಯ ಇರುತ್ತದೆ," ಎಂದು ಕೂಡಾ ಮಾಧ್ಯಮದಕ್ಕೆ WHO ಅಧಿಕಾರಿ ಮಾಹಿತಿ ನೀಡಿದ್ದಾರೆ.

128 ದೇಶಗಳಲ್ಲಿ ಓಮಿಕ್ರಾನ್‌ ಪತ್ತೆ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಡಿಸೆಂಬರ್ 29, 2021 ರ ಹೊತ್ತಿಗೆ, ಸುಮಾರು 128 ದೇಶಗಳು ಓಮಿಕ್ರಾನ್ ರೂಪಾಂತರದ ಪ್ರಕರಣಗಳನ್ನು ವರದಿ ಮಾಡಿದೆ. ಕೊರೊನಾ ವೈರಸ್‌ ಪ್ರಕರಣಗಳ ತೀವ್ರ ಏರಿಕೆ ಕಂಡಿದ್ದ ದಕ್ಷಿಣ ಆಫ್ರಿಕಾದಲ್ಲಿ, ಪ್ರಕರಣಗಳು ಕಡಿಮೆ ಆಗುತ್ತಿದೆ. ಓಮಿಕ್ರಾನ್‌ ಮೊದಲು ಪತ್ತೆಯಾದ ಈ ದೇಶದಲ್ಲಿ ಆಸ್ಪತ್ರೆಗೆ ದಾಖಲು ಮತ್ತು ಸಾವಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಬೇರೆ ದೇಶಗಳಲ್ಲಿ ಈ ಪರಿಸ್ಥಿತಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ವಹಣಾ ಸಹಾಯಕ ಗುಂಪಿನ ಅಬ್ದಿ ಮಹಮುದ್‌ ತಿಳಿಸಿದ್ದಾರೆ.

"ಇತ್ತೀಚಿನ ಅಧ್ಯಯನಗಳು ಎಲ್ಲಾ ಒಮಿಕ್ರಾನ್ ರೂಪಾಂತರವು ಶ್ವಾಸಕೋಶದ ಬದಲಿಗೆ ಮೇಲ್ಭಾಗದ ಶ್ವಾಸೇಂದ್ರಿಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಸೂಚಿಸುತ್ತದೆ. ಇದು ಒಳ್ಳೆಯ ಸುದ್ದಿ. ಆದರೂ ಹೆಚ್ಚಿನ ಅಪಾಯದ ವ್ಯಕ್ತಿಗಳು ಮತ್ತು ಲಸಿಕೆ ಹಾಕದವರು ಇನ್ನೂ ಆ ರೂಪಾಂತರದಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಬಹುದು," ಎಂದು ವಿಶ್ವ ಸಂಸ್ಥೆ ಅಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಾರದಲ್ಲೇ ಇತರ ರೂಪಾಂತರವನ್ನು ಹಿಂದಕ್ಕೆ ಹಾಕಿದ ಓಮಿಕ್ರಾನ್‌

"ಓಮಿಕ್ರಾನ್ ರೂಪಾಂತರವು ವಾರಗಳಲ್ಲಿ ಕೊರೊನಾ ವೈರಸ್‌ನ ಇತರೆ ರೂಪಾಂತರಗಳನ್ನು ಹಿಂದಿಕ್ಕಬಹುದು. ವಿಶೇಷವಾಗಿ ಅಧಿಕ ಸಂಖ್ಯೆಯಲ್ಲಿ ಜನರು ಇರುವ ಪ್ರದೇಶದಲ್ಲಿ, ಕೋವಿಡ್‌ ಲಸಿಕೆಯನ್ನು ಹಾಕದವರು ಅಧಿಕವಾಗಿ ಇರುವ ಪ್ರದೇಶದಲ್ಲಿ ಓಮಿಕ್ರಾನ್‌ ಸೋಂಕು ತೀವ್ರವಾಗಿ ಪರಿಣಾಮ ಉಂಟು ಮಾಡಬಹುದು. ಡೆನ್ಮಾರ್ಕ್‌ನಲ್ಲಿ, ಆಲ್ಫಾ ರೂಪಾಂತರದಿಂದಾಗಿ ಕೊರೊನಾ ಪ್ರಕರಣಗಳು ಅಧಿಕವಾಗಲು ಅಂದರೆ ದ್ವಿಗುಣವಾಗಲು ಎರಡು ವಾರಗಳನ್ನು ಬೇಕಾಯಿತು. ಆದರೆ ಓಮಿಕ್ರಾನ್‌ ರೂಪಾಂತರವು ದ್ವಿಗುಣವಾಗಲು ಕೇಲವ ಎರಡು ದಿನಗಳು ಬೇಕಾಯಿತು. ಜಗತ್ತು ಅಂತಹ ಹರಡುವ ವೈರಸ್ ಅನ್ನು ನೋಡಿಲ್ಲ," ವಿಶ್ವ ಆರೋಗ್ಯ ಸಂಸ್ಥೆಯ ನಿರ್ವಹಣಾ ಸಹಾಯಕ ಗುಂಪಿನ ಅಬ್ದಿ ಮಹಮುದ್‌ ಆತಂಕ ವ್ಯಕ್ತಪಡಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+