• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಗ್ದಾದ್ ಮೇಲೆ ಮತ್ತೊಂದು ಬಾಂಬ್ ದಾಳಿ, ಸಾವಿನ ಸಂಖ್ಯೆ 27ಕ್ಕೆ ಏರಿಕೆ

By ವಿಕಾಸ್ ನಂಜಪ್ಪ
|

ಬಾಗ್ದಾದ್, ಮೇ 30: ಇರಾಕ್ ರಾಜಧಾನಿ ಬಾಗ್ದಾದಿನ ಐಸ್ ಕ್ರೀಂ ಪಾರ್ಲರ್ ಒಂದರ ಸಮೀಪ ಭಾರೀ ತೀವ್ರತೆಯ ಕಾರ್ ಬಾಂಬ್ ಸ್ಪೋಟಿಸಿದ ಪರಿಣಾಮ ಕನಿಷ್ಠ 16 ಜನ ಅಸುನೀಗಿದ್ದರು. ಇದೀಗ ಬಾಗ್ದಾದಿನಲ್ಲಿ ಮತ್ತೊಂದು ಬಾಂಬ್ ಸ್ಪೋಟಿಸಿದ್ದು ಕನಿಷ್ಟ 11 ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆ 27 ಜನ ಸಾವನ್ನಪ್ಪಿದ್ದು 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಸೋಮವಾರ ತಡ ರಾತ್ರಿ ಇಲ್ಲಿನ ಕರ್ರಾದ ಜಿಲ್ಲೆಯಲ್ಲಿ ಬಾಂಬ್ ಸ್ಟೋಟ ಸಂಭವಿಸಿದ್ದು ಇರಾಕ್ ರಾಜಧಾನಿಯನ್ನು ಬೆಚ್ಚಿ ಬೀಳಿಸಿತ್ತು. ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರು ಘಟನೆಯ ಹೊಣೆ ಹೊತ್ತುಕೊಂಡಿದ್ದಾರೆ. ಈ ಘಟನೆಯಲ್ಲಿ 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಪಾರ್ಲರ್ ಪರಿಸರದಲ್ಲಿ ಕಾರ್ ಪಾರ್ಕ್ ಮಾಡಲಾಗಿತ್ತು. ಈ ಕಾರಿನಲ್ಲಿ ಬಾಂಬ್ ಗಳಿದ್ದವು. ಈ ಕಾರ್ ಸ್ಟೋಟಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇದೇ ಕರ್ರಾದ ಜಿಲ್ಲೆಯಲ್ಲಿ ಕಳೆದ ವರ್ಷ ಜುಲೈನಲ್ಲಿ ಭೀಕರ ದಾಳಿ ನಡೆದಿತ್ತು. ಈ ದಾಳಿಯಲ್ಲಿ 300 ಜನ ಸಾವನ್ನಪ್ಪಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕಾದ ಐಸಿಸ್ ವಿರೋಧಿ ಪಡೆಯ ಮುಖ್ಯಸ್ಥ ಬ್ರೆಟ್ ಮೆಗರ್ಕ್, "ಮಕ್ಕಳು ಮತ್ತು ಕುಟುಂಬಸ್ಥರ ಜತೆ ಐಸ್ ಕ್ರೀಂ ಪಾರ್ಲರಿನಲ್ಲಿ ಸಮಯ ಕಳೆಯುತ್ತಿದ್ದ ವೇಳೆ ಐಸಿಸ್ ಉಗ್ರರು ಇಂದು ರಾತ್ರಿ ಬಾಗ್ದಾದಿನಲ್ಲಿ ದಾಳಿ ಮಾಡಿದ್ದಾರೆ. ನಾವು ಇವರ ವಿರುದ್ಧ ಹೋರಾಡಲು ಇರಾಕ್ ಜತೆ ನಿಂತುಕೊಳ್ಳಲಿದ್ದೇವೆ," ಎಂದು ಹೇಳಿದ್ದಾರೆ.

ಮತ್ತೊಂದು ಬಾಂಬ್

ಇದೀಗ ಬಾಗ್ದಾದಿನ ಮತ್ತೊಂದು ಪ್ರದೇಶದಲ್ಲಿ ಅದೇ ರೀತಿ ಕಾರ್ ಬಾಂಬ್ ಸ್ಪೋಟಿಸಿದೆ. ಇದರಲ್ಲಿ ಕನಿಷ್ಟ 11 ಜನ ಸಾವನ್ನಪ್ಪಿದ್ದು ಇಲ್ಲೂ 40ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಉಗ್ರ ಸಂಗಘನೆ ಅಲ್ ಶಬಾಬ್ ಈ ಘಟನೆಯ ಹೊಣೆ ಹೊತ್ತುಕೊಂಡಿದೆ.

ಮುಸ್ಲಿಂ ಧರ್ಮೀಯರ ಪವಿತ್ರ ಮಾಸ ರಂಜಾನಿನ ಆರಂಭದಲ್ಲೇ ಈ ಎರಡೂ ಬಾಂಬ್ ಸ್ಪೋಟಗಳು ಸಂಭವಿಸಿವೆ.

English summary
At least 13 persons have died after a car bomb exploded outside an ice cream parlour in Baghdad, Iraq. A large explosion in the central Karrada district rocked the Iraqi capital late Monday night
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X