ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿಲ್ಗಿಟ್-ಬಲ್ಟಿಸ್ತಾನ್: ಉಗ್ರರ ಕೆಂಗಣ್ಣಿಗೆ 12 ಶಾಲೆಗಳು ಆಹುತಿ

|
Google Oneindia Kannada News

ಚಿಲಾಸ್, ಆಗಸ್ಟ್ 4: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಗಿಲ್ಗಿಟ್-ಬಲ್ಟಿಸ್ತಾನ್ ಪ್ರದೇಶದಲ್ಲಿ ಉಗ್ರರು ಕನಿಷ್ಠ 12 ಹೆಣ್ಣುಮಕ್ಕಳ ಶಾಲೆಗಳ ಮೇಲೆ ದಾಳಿ ನಡೆಸಿದ್ದಾರೆ.

ಗಿಲ್ಗಿಟ್ ಸಮೀಪದ ಚಿಲಾಸ್‌ನಲ್ಲಿ ಗುರುವಾರ ರಾತ್ರಿ ಈ ದಾಳಿ ನಡೆದಿದೆ.

ಕಾಬೂಲ್ ನಲ್ಲಿ ಭಾರತೀಯ ಸೇರಿ ಮೂವರನ್ನು ಅಪಹರಿಸಿ ಹತ್ಯೆಕಾಬೂಲ್ ನಲ್ಲಿ ಭಾರತೀಯ ಸೇರಿ ಮೂವರನ್ನು ಅಪಹರಿಸಿ ಹತ್ಯೆ

ಡಿಯಾಮರ್ ಜಿಲ್ಲೆಯಲ್ಲಿರುವ ಈ ಶಾಲೆಗಳ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಎರಡು ಶಾಲೆಗಳಲ್ಲಿ ಸ್ಫೋಟ ಇರಿಸಿ ಸಿಡಿಸಿದ್ದರೆ, ಉಳಿದ ಶಾಲೆಗಳಿಗೆ ಹಾನಿ ಮಾಡಿ ಅವುಗಳ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ.

12 girls schools attacked in gilgit baltistan

ದಾಳಿಗೊಳಗಾದ ಶಾಲೆಗಳು ನಿರ್ಮಾಣ ಹಂತದಲ್ಲಿದ್ದವು ಎಂದು ಜಿಲ್ಲಾಡಳಿತ ತಿಳಿಸಿದೆ. ಹೆಣ್ಣುಮಕ್ಕಳ ಶಾಲೆಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ. ಹೀಗಾಗಿ ಉಳಿದ ಶಾಲೆಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಜನರು ಆಗ್ರಹಿಸಿದ್ದಾರೆ.

37 ವರ್ಷಗಳ ಬಳಿಕ ಜಿಂಬಾಬ್ವೆಗೆ ಹೊಸ ಅಧ್ಯಕ್ಷರ ಆಯ್ಕೆ37 ವರ್ಷಗಳ ಬಳಿಕ ಜಿಂಬಾಬ್ವೆಗೆ ಹೊಸ ಅಧ್ಯಕ್ಷರ ಆಯ್ಕೆ

ಇದೇ ಪ್ರದೇಶದಲ್ಲಿ 2011 ಮತ್ತು 2014ರಲ್ಲಿ ಸಹ ಹೆಣ್ಣುಮಕ್ಕಳ ಕೆಲವು ಶಾಲೆಗಳ ಮೇಲೆ ದಾಳಿ ನಡೆಸಲಾಗಿತ್ತು.

ಈ ದಾಳಿಯನ್ನು ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ಮಲಾಲ ಯೂಸುಫ್‌ಝೈ ಖಂಡಿಸಿದ್ದಾರೆ.

'ಪುಸ್ತಕದೊಂದಿಗಿರುವ ಹೆಣ್ಣಮಗಳು- ಭಯೋತ್ಪಾದಕರು ಯಾವುದಕ್ಕೆ ಹೆದರುತ್ತಾರೆ ಎನ್ನುವುದನ್ನು ಇದು ತೋರಿಸುತ್ತದೆ. ಈ ಶಾಲೆಗಳನ್ನು ತಕ್ಷಣವೇ ಮತ್ತೆ ಕಟ್ಟಬೇಕು. ವಿದ್ಯಾರ್ಥಿನಿಯರನ್ನು ತರಗತಿಗೆ ಮರಳಿ ಕರತರಬೇಕು. ಪ್ರತಿ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಓದುವ ಹಕ್ಕು ಹೊಂದಿದ್ದಾರೆ ಎನ್ನುವುದನ್ನು ಜಗತ್ತಿಗೆ ತೋರಿಸಬೇಕು' ಎಂದು ಮಲಾಲ ಟ್ವೀಟ್ ಮಾಡಿದ್ದಾರೆ.

English summary
Extremists attacked 12 girls schools in Gilgit-Baltistan's Diamer district on Thursday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X