ಕೊವಿಡ್19ನಿಂದ ಬಚಾವಾದ 114ರ ವೃದ್ಧ, ಚಿಕಿತ್ಸೆ ರಹಸ್ಯವೇನು?

ಅಡಿಸ್ ಅಬಾಬಾ(ಇಥಿಯೋಪಿಯಾ), ಜೂನ್ 28: ಆಫ್ರಿಕಾ ಖಂಡದ ದೇಶ ಇಥಿಯೋಪಿಯಾದಲ್ಲಿ ಅಚ್ಚರಿಯ ಘಟನೆ ಸಂಭವಿಸಿದೆ. 60 ವರ್ಷ ಮೇಲ್ಪಟ್ಟವರಿಗೆ ಮಾರಕ ಎನ್ನಲಾಗಿರುವ ಕೊವಿಡ್ 19 ಸೋಂಕಿನಿಂದ ಬಳಲುತ್ತಿದ್ದ 114 ವರ್ಷ ವಯಸ್ಸಿನ ವೃದ್ಧ ಗುಣಮುಖರಾಗಿರುವ ಸುದ್ದಿ ಬಂದಿದೆ.

ತಿಲಾಹುನ್ ವೊಲ್ಡೆಮಿಕಾಯಿಲ್ ಎಂಬ ಹೆಸರಿನ 114 ವರ್ಷ ವಯಸ್ಸಿನ ವ್ಯಕ್ತಿ ಸನ್ಯಾಸಿಯಾಗಿದ್ದು, ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಚಿಕಿತ್ಸೆ ವಿಧಾನದ ಬಗ್ಗೆ ಪರಿಶೀಲಿಸಿದಾಗ, ಆತನಿಗೆ ಜನಪ್ರಿಯ ಸ್ಟೆರಾಯ್ಡ್ ನೀಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ, ಡೆಕ್ಸಾಮೆಥಾಸೊನ್ ಎಂಬ ಸ್ಟೆರಾಯ್ಡ್ ನೀಡಲಾಗಿತ್ತು ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ. ಇಂಗ್ಲೆಂಡಿನಲ್ಲಿ dexamethasone ಬಳಸಿ ಕೊವಿಡ್ 19 ರೋಗಿಗಳಿಗೆ ಅಂಟಿದ್ದ ಸೋಂಕನ್ನು ತಗ್ಗಿಸಿರುವ ಅಂಶ ಇತ್ತೀಚೆಗೆ ಬೆಳಕಿಗೆ ಬಂದಿದೆ.

114 Years Old Ethiopian Monk Survives Coronavirus with Dexamethasone

ಇತ್ತೀಚೆಗೆ ಇಥಿಯೋಫಿಯಾದಲ್ಲಿ ಕೊವಿಡ್ 19 ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ಅನುಕೂಲ ವ್ಯವಸ್ಥೆ ಒದಗಿಸಬೇಕು, ಚಿಕಿತ್ಸೆಗೆ dexamethasone ಬಳಸಬಹ್ದು ಎಂದು ಆದೇಶಿಸಲಾಗಿತ್ತು. ಇದೇ ವಿಧಾನದಲ್ಲಿ 114 ವರ್ಷ ವಯಸ್ಸಿನ ವೃದ್ಧನಿಗೆ ಚಿಕಿತ್ಸೆ ನೀಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಈ ವೃದ್ಧನಿಗೆ ನಿಜಕ್ಕೂ 114 ವರ್ಷವಾಗಿದೆಯೆ? ಎಂದು ಪ್ರಶ್ನಿಸಿದಾಗ ತಿಲಾಹುನ್ ಮೊಮ್ಮಗ ಬಿನಿಯಾಮ್ ಲಿಯುಲ್ಸೆಗೆಡ್ ಪ್ರತಿಕ್ರಿಯಿಸಿ, ನಮ್ಮ ಬಳಿ ಜನನ ಪ್ರಮಾಣ ಪತ್ರ ಇಲ್ಲ, ಆದರೆ, 14 ವರ್ಷಗಳ ಹಿಂದೆ 100ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಚಿತ್ರಗಳು ಸಾಕ್ಷಿಯಾಗಿ ಒದಗಿಸಬಹುದು ಎಂದಿದ್ದಾರೆ.

ಕೊರೊನಾಸೋಂಕು ತಗುಲಿರುವುದು ತಿಳಿದು ಆತಂಕವಾಗಿತ್ತು. ಆದರೆ, ನಂತರ ಗುಣಮುಖರಾಗಿರುವುದು ಸಂತಸ ತಂದಿದೆ ಎಂದು ಬಿನಿಯಾಮ್ ಹೇಳಿದ್ದಾರೆ. ಇಥಿಯೋಪಿಯಾದಲ್ಲಿ 5,200ಕ್ಕೂ ಅಧಿಕ ಮಂದಿಗೆ ಕೊರೊನಾವೈರಸ್ ಪಾಸಿಟಿವ್ ಸೋಂಕು ಇರುವುದು ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+