ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗೆ ಸವಾಲು ಹಾಕಿ, ಸಾವು ಗೆದ್ದ ಶತಾಯುಷಿ ಅಜ್ಜಿ!

|
Google Oneindia Kannada News

ತೆಹರಾನ್, ಮಾರ್ಚ್ 18: ವಿಶ್ವವ್ಯಾಪ್ತಿ ಹರಡಿರುವ ಮಾರಕ ಕೊರೊನಾವೈರಸ್ ಸೋಂಕು ತಗುಲಿದರೆ ಸಾಕು ಜೀವಭಯ ಉಂಟಾಗುತ್ತದೆ. ಕೋವಿಡ್19 ಬಂದವರಿಗೆ ಯಾವುದೇ ಔಷಧವಿಲ್ಲ, ಸಾವು ಇನ್ನೇನು ಬಾಗಿಲು ತಟ್ಟತೊಡಗುತ್ತದೆ ಎಂಬ ಆತಂಕ ಬಹುತೇಕರಲ್ಲಿದೆ. ಆದರೆ, ಕೊವಿಡ್19 ಪಾಸಿಟಿವ್ ಆದವರು ಕೂಡಾ ಗುಣಮುಖರಾದ ಉದಾಹರಣೆಗಳಿವೆ. ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ಎಷ್ಟೇ ವಯಸ್ಸಾಗಿದ್ದರೂ ಕೊರೊನಾಕ್ಕೆ ಸವಾಲು ಹಾಕಿ, ಸಾವನ್ನು ಜಯಿಸಬಹುದು ಎಂಬುದನ್ನು ಇಲ್ಲಿನ ಶತಾಯುಷಿ ಅಜ್ಜಿಯೊಬ್ಬರು ತೋರಿಸಿಕೊಟ್ಟಿದ್ದಾರೆ.

ಈ ಹಿಂದೆ ಕೊರೊನಾ ವೈರಸ್ ಸೋಂಕಿತ ಚೀನಾದ ಶತಾಯುಷಿ ಅಜ್ಜ ಸಂಪೂರ್ಣವಾಗಿ ಗುಣಮುಖರಾದ ಉದಾಹರಣೆ ಕಣ್ಮುಂದೆ ಇರುವಾಗಲೇ ಇರಾನ್ ನ 103 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಗುಣಮುಖರಾದ ಸುದ್ದಿ ಬಂದಿದೆ.

ಅಚ್ಚರಿ ಸುದ್ದಿ: ಡೆಡ್ಲಿ ಕೊರೊನಾ ವಿರುದ್ಧ ಹೋರಾಡಿ ಸಾವನ್ನೇ ಗೆದ್ದ 100ರ ಅಜ್ಜ!ಅಚ್ಚರಿ ಸುದ್ದಿ: ಡೆಡ್ಲಿ ಕೊರೊನಾ ವಿರುದ್ಧ ಹೋರಾಡಿ ಸಾವನ್ನೇ ಗೆದ್ದ 100ರ ಅಜ್ಜ!

ಸೆಮ್ನಾನ್ ನಗರದ ಪ್ರಮುಖ ಅಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಐಆರ್ ಎನ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಸುದ್ದಿಯನ್ನು ಖಚಿತಪಡಿಸಿರುವ ಸೆಮ್ನಾನ್ ವಿಶ್ವವಿದ್ಯಾಲಯದ ಮೆಡಿಕಲ್ ಸೈನ್ಸ್ ವಿಭಾಗದ ಮುಖ್ಯಸ್ಥ ನವೀದ್ ದನಾಯಿ, ವೃದ್ಧೆ ಈಗ ಕೋವಿಡ್19 ಮುಕ್ತರಾಗಿದ್ದಾರೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಇರಾನ್ ನಲ್ಲಿ 91 ವರ್ಷ ವಯಸ್ಸಿನ ಕೆರ್ಮಾನ್ ನಿವಾಸಿ ಕೊವಿಡ್ 19ರಿಂದ ಮುಕ್ತರಾಗಿದ್ದರು. 103 ವರ್ಷ ವಯಸ್ಸಿನ ವೃದ್ಧಿಗೆ ಅಧಿಕ ರಕ್ತದೊತ್ತಡ, ಆಸ್ತಮಾ ಹಿಸ್ಟರಿ ಇದ್ದರೂ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಿದ ಕಾರಣ, ಗುಣಮುಖರಾಗಿದ್ದಾರೆ ಎಂದು ನವೀದ್ ಹೇಳಿದ್ದಾರೆ.

ಚಿಕಿತ್ಸೆ ವಿಧಾನ ವಿವರಗಳನ್ನು ಹಂಚಿಕೊಂಡಿಲ್ಲ

ಚಿಕಿತ್ಸೆ ವಿಧಾನ ವಿವರಗಳನ್ನು ಹಂಚಿಕೊಂಡಿಲ್ಲ

ಇರಾನ್ ನ 31ಪ್ರಾಂತ್ಯಗಳಲ್ಲಿ ಸಾವಿರಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ. ವಯೋವೃದ್ಧರಿಗೆ ಕೊರೊನಾವೈರಸ್ ಸೋಂಕು ಅಧಿಕವಾಗಿ ಬಾಧಿಸುತ್ತದೆ. ಸೋಂಕು ತಗುಲಿದವರ ಪೈಕಿ ಶೇ 3.4 ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. 80 ವರ್ಷ ಮೇಲ್ಪಟ್ಟವರು ಸಾವನ್ನಪ್ಪುವ ಅಂದಾಜು ಪ್ರಮಾಣ ಶೇ 21.9 ರಷ್ಟಿದೆ. 80ಪ್ಲಸ್ ಕೆಟಗೆರಿಯ ಇಬ್ಬರು ಇರಾನ್ ನಲ್ಲೇ ಗುಣಮುಖರಾಗಿದ್ದಾರೆ. ಆದರೆ, ಚಿಕಿತ್ಸೆ ವಿಧಾನವನ್ನು ನವೀದ್ ಹಂಚಿಕೊಂಡಿಲ್ಲ.

ಚೀನಾದ ವುಹಾನ್ ನಲ್ಲಿ 100 ವರ್ಷ ವಯಸ್ಸಿನ ವೃದ್ಧ

ಚೀನಾದ ವುಹಾನ್ ನಲ್ಲಿ 100 ವರ್ಷ ವಯಸ್ಸಿನ ವೃದ್ಧ

ಚೀನಾದ ವುಹಾನ್ ನಲ್ಲಿ 100 ವರ್ಷ ವಯಸ್ಸಿನ ವೃದ್ಧ ಕ್ಸಿಹುವಾ ರವರಿಗೆ ಡೆಡ್ಲಿ ಕೊರೊನಾ ವೈರಸ್ ಸೋಂಕು ತಗುಲಿತ್ತು. ಪರಿಣಾಮ, ಫೆಬ್ರವರಿ 24 ರಂದು ವುಹಾನ್ ನ ಹ್ಯುಬೇ ದಲ್ಲಿರುವ ಮೆಟರ್ನಿಟಿ ಆಂಡ್ ಚೈಲ್ಡ್ ಹೆಲ್ತ್ ಕೇರ್ ಆಸ್ಪತ್ರೆಗೆ ಅಜ್ಜ ಕ್ಸಿಹುವಾ ದಾಖಲಾಗಿದ್ದರು. ಒಟ್ಟು 13 ದಿನಗಳ ಕಾಲ ಚಿಕಿತ್ಸೆ ಪಡೆದ ಕ್ಸಿಹುವಾ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೊರೊನಾ ಸೋಂಕು ಯಾವ ರಕ್ತದ ಗುಂಪಿನವರಲ್ಲಿ ಹೆಚ್ಚು?ಕೊರೊನಾ ಸೋಂಕು ಯಾವ ರಕ್ತದ ಗುಂಪಿನವರಲ್ಲಿ ಹೆಚ್ಚು?

 ಚೀನಿ ವಿಜ್ಞಾನಿಗಳ ಸಂಶೋಧನೆ

ಚೀನಿ ವಿಜ್ಞಾನಿಗಳ ಸಂಶೋಧನೆ

ನೀವು ಎ ರಕ್ತ ಗುಂಪಿಗೆ ಸೇರಿದವರೇ? ಹಾಗಾದರೆ ನಿಮ್ಮಲ್ಲಿ ಕೊರೊನಾವೈರಸ್ ಸೋಂಕು ತಗುಲುವ ಸಂಭವ ಹೆಚ್ಚು, ಉಳಿದ ಬ್ಲಡ್ ಗ್ರೂಪಿಗೆ ಹೋಲಿಸಿದರೆ ಎ ಬ್ಲಡ್ ಗ್ರೂಪಿನವರಿಗೆ ಸೋಂಕು ಬೇಗ ತಗುಲುತ್ತಿದೆ ಎಂದು ಚೀನಿ ಸಂಶೋಧಕರು ಹೇಳಿದ್ದಾರೆ. ಚೀನಿ ವಿಜ್ಞಾನಿಗಳ ಪ್ರಕಾರ, ಒ ಬ್ಲಡ್ ಗ್ರೂಪಿನವರಿಗೆ ಕೊರೊನಾವೈರಸ್ ಸೋಂಕು ತಗುಲುವ ಸಾಧ್ಯತೆ ಕಡಿಮೆಯಿದೆ. ವೈರಸ್ ವಿರುದ್ಧ ಈ ಬ್ಲಡ್ ಗ್ರೂಪಿನವರು ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿದ್ದಾರೆ. ಹೀಗಾಗಿ ಸುಲಭವಾಗಿ ಸೋಂಕು ತಗುಲುವುದಿಲ್ಲ ಎಂದು ವರದಿ ನೀಡಿದ್ದಾರೆ.

ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?

ಪ್ರಾಣಹಾನಿ ಉಂಟು ಮಾಡುವಂತಹ ವೈರಸ್

ಪ್ರಾಣಹಾನಿ ಉಂಟು ಮಾಡುವಂತಹ ವೈರಸ್

ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಕೊರೊನಾ ವೈರಸ್ ಎನ್ನುವುದು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಸೋಂಕಾಗಿದೆ. ಈಗ ಪ್ರಾಣಿಗಳಿಂದ ಮನುಷ್ಯನಿಗೂ ಈ ಸೋಂಕು ತಗುಲುತ್ತಿದೆ.ಕೊರೊನಾ ವೈರಸ್‌ಗೆ ಚಿಕಿತ್ಸೆ ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ರೋಗ ಹರಡದಂತೆ ಕೊಂಚ ಮಟ್ಟಿಗೆ ತಡೆಗಟ್ಟಬಹುದಾಗಿದೆ.

ಪ್ರಯೋಗ ಫಲಪ್ರದ: ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಗೆದ್ದ Anti-HIV ಡ್ರಗ್ಸ್!ಪ್ರಯೋಗ ಫಲಪ್ರದ: ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಗೆದ್ದ Anti-HIV ಡ್ರಗ್ಸ್!

English summary
A 103-year-old woman in Iran has recovered after being infected with the new coronavirus, state media reported, despite overwhelming evidence the elderly are most at risk from the disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X