ಇಟಲಿಯಲ್ಲಿ 101 ವರ್ಷದ ವ್ಯಕ್ತಿ ಕೊರೊನಾದಿಂದ ಸಂಪೂರ್ಣ ಗುಣಮುಖ

ರೋಮ್, ಮಾರ್ಚ್ 27: ಇಟಲಿಯಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿರುವ ಕೊರೊನಾ ಮಾರಣಾಂತಿಕ ವೈರಸ್‌ನಿಂದ 101 ವರ್ಷದ ವ್ಯಕ್ತಿಯೊಬ್ಬರು ಪಾರಾಗಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮಾರಣಾಂತಿಕ ಕೊವಿಡ್ ರೋಗವನ್ನು ಗೆದ್ದ ಶತಾಯುಷಿ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಬಂದಿರುವ ಮಾಹಿತಿ ಪ್ರಕಾರ ರೋಗವನ್ನು ಗೆದ್ದಿದ್ದಲ್ಲದೆ ಆಸ್ಪತ್ರೆಗೆ ಮನೆಗೆ ಬಿಡುಗಡೆ ಪಡೆದಿದ್ದಾರೆ.

ಚೀನಾ ಬಳಿಕ ಕೊರೋನಾ ವೈರಸ್ ಪೀಡಿತ ರಾಷ್ಟ್ರವೆಂದು ಹೇಳಲಾಗುತ್ತಿರುವ ಇಟಲಿ ರಿಮಿನಿ ಎಂಬ ನಗರದಲ್ಲಿ ಸೋಂಕು ಪೀಡಿದ 101 ವರ್ಷದ ವೃದ್ಧರೊಬ್ಬರು ವೈರಸ್ ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

101 Year Old Italian Man Recovers From Coronavirus Completely

ಇದೀಗ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಹಲವರಲ್ಲಿ ಈ ಪ್ರಕರಣ ಆತ್ಮವಿಶ್ವಾಸ ಮೂಡಿಸಿದೆ. ಮಿ.ಪಿಯವರು 100ವರ್ಷದ ವಯೋವೃದ್ಧರಾಗಿದ್ದಾರೆಂದು ತಿಳಿಸಿದ್ದಾರೆ.

ಈ ಕುರಿತು ರಿಮಿನಿ ನಗರದ ಉಪ ಮೇಯರ್ ಗ್ಲೋರಿಯಾ ಲಿಸಿಯವರು ಮಾಹಿತಿ ನೀಡಿದ್ದು, ಮಿ.ಪಿಯವರು 1919ರಲ್ಲಿ ಜನಿಸಿದ್ದು, ಸೋಂಕು ಹಿನ್ನೆಲೆಯಲ್ಲಿ ರಿಮಿನಿ ಆಸ್ಪತ್ರೆಗೆ ದಾಖಲಾಗಿದ್ದರು. ಮಿ.ಪಿ ಗುಣಮುಖರಾದ ಬಳಿಕ ಆಸ್ಪತ್ರೆಯಲ್ಲಿರುವ ಪ್ರತಿಯೊಬ್ಬರೂ ಅವರ ಕುರಿತು ಮಾತನಾಡುತ್ತಿದ್ದಾರೆಂದು ಹೇಳಿದ್ದಾರೆ.

ದಿನನಿತ್ಯ ನಾವು ದುಃಖ ತರಿಸುವ ಸುದ್ದಿಗಳನ್ನೇ ನೋಡುತ್ತಿದ್ದೇವೆ. ವೈರಸ್'ಗೆ ವಯಸ್ಸಾದವರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಆದರೆ, ಮಿಸ್ಟರ್ ಪಿಯವರು 101 ವರ್ಷಗಳ ವಯೋವೃದ್ಧರಾಗಿದ್ದರೂ, ಸೋಂಕಿನಿಂದ ಗುಣಮುಖರಾಗಿರುವುದು ಎಲ್ಲರ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.
ಇಲ್ಲಿಯವರೆಗಿನ ಒಟ್ಟು ಕೊರೊನಾ ಸೋಂಕು ಪೀಡಿತರು: 80,589 ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದವರು: 8215 ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರು: 10,361 ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವವರು: 3612

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+