ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಬಾಂಬ್ ದಾಳಿಗೆ 6 ಮಕ್ಕಳು ಸೇರಿ 10 ಮಂದಿ ಸಾವು

ಪಾಕಿಸ್ತಾನದಲ್ಲಿ ಮಂಗಳವಾರ ನಡೆದ ಉಗ್ರರ ಬಾಂಬ್ ದಾಳಿಯಲ್ಲಿ ಆರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದ ಹಾಗೆ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ರಿಮೊಟ್ ಕಂಟ್ರೋಲ್ ಬಾಂಬ್ ಬಳಸಿ ಈ ದಾಳಿ ನಡೆಸಲಾಗಿದೆ

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 25: ಪಾಕಿಸ್ತಾನದ ವಾಯವ್ಯ ಭಾಗದ ಬುಡಕಟ್ಟು ಪ್ರದೇಶದಲ್ಲಿ ಮಂಗಳವಾರ ರಿಮೋಟ್ ಕಂಟ್ರೋಲ್ ಬಾಂಬ್ ಬಳಸಿ ಆರು ಮಕ್ಕಳು ಸೇರಿದಂತೆ ಹತ್ತು ಮಂದಿಯನ್ನು ಕೊಲ್ಲಲಾಗಿದೆ. ತಾಲಿಬಾನ್ ಉಗ್ರರು ಪ್ರಯಾಣಿಕರ ವ್ಯಾನ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದಾರೆ.

ಸುಧಾರಿತ ಸ್ಫೋಟಕವನ್ನು ಬಳಸಿ, ಸೆಂಟ್ರಲ್ ಕುರ್ರಮ್ ಏಜೆನ್ಸಿಯ ಕೊಂತಾರಾ ಹಳ್ಳಿಯಲ್ಲಿ ಈ ಕೃತ್ಯ ಎಸಗಲಾಗಿದೆ. ಜಮಾತುಲ್ ಅಹ್ರಾರ್ ಉಗ್ರ ಸಂಘಟನೆಯು ಘಟನೆಯ ಹೊಣೆ ಹೊತ್ತಿದೆ. ಆರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ ಹತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.['ಲಾಡೆನ್ ಆಯಿತು, ಈಗ ಅಲ್ ಜವಾಹಿರಿ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ']

ಘಟನೆಯಲ್ಲಿ ಹದಿಮೂರು ಮಂದಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಪೆಶಾವರದ ಕರೆದೊಯ್ಯಲು ಹೆಲಿಕಾಪ್ಟರ್ ಕಳುಹಿಸಲಾಗಿದೆ. ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಧಾವಿಸಿದ್ದು, ಪ್ರದೇಶವನ್ನು ಸುತ್ತುವರಿದಿದ್ದಾರೆ. ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

Bomb Blast

ಕಳೆದ ತಿಂಗಳು ಕುರ್ರಂನಲ್ಲಿರುವ ಪರಚಿನಾರ್ ನ ಜನನಿಬಿಡ ಮಾರುಕಟ್ಟೆಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಇಪ್ಪತ್ತೆಂಟು ಮಂದಿ ಮೃತಪಟ್ಟು, ನೂರು ಮಂದಿ ಗಾಯಗೊಂಡಿದ್ದರು.

English summary
Six children were among 10 people killed on Tuesday when a passenger van was targeted with a remote-controlled bomb by Taliban militants in Pakistan’s restive northwest tribal region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X